ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಐದೂರ ಹೊಲದಲಿ ಕೆಟ್ಟ ಪಶುವನು ಆರೂರ ಹೊಕ್ಕು ಅರಿಸಿಹೆನೆಂದು ಹೋದರೆ ಮೂರೇ ಮನೆಯಲ್ಲಿ ಈರುಗಾರಾಗಲಾಗಿ ಅರಸಬಂದಯ್ಯಗಳು ಆಸತ್ತು ಹೋದರಲ್ಲ. ಅರಸುವ ಅರುಹೆ ತಾನೆಂದು ತಿಳಿಯಲು ಮೂರಾರಕ್ಷರವಾಗಿ ತೋರುವ ಮೂಲಾಕ್ಷರಾತ್ಮಕ ತಾನೆ ತಪ್ಪದೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಐದು ಬಣ್ಣದ ಗಿಡುವಿಂಗೆ ಇಪ್ಪತ್ತೆ ೈದು ಕೊನೆ ನೋಡಾ. ಅಲ್ಲಿ ಸುತ್ತಿಯಾಡುವತನೊಬ್ಬನೆ ನೋಡಾ. ಐದು ಬಣ್ಣವಳಿದು ಇಪ್ಪತ್ತೆ ೈದು ಶಾಖೆ ಮುರಿಯಲು ಅಲ್ಲಿ ಆಡುವಾತ ಸತ್ತು ಕೋಳುಹೋಯಿತ್ತು; ನಿಮ್ಮವರಿಗೆ ನಿತ್ಯನಿಜಲಿಂಗೈಕ್ಯ ಸಾಮ್ರಾಜ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು