ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧರೆಯ ಮೇಲಣ ಅರೆಯಲ್ಲಿ ಮೇರುಗಿರಿ ಹುಟ್ಟಿದುದ ಕಂಡೆನಯ್ಯ. ಗಿರಿಯ ಸನ್ನಿಧಿಯಲ್ಲಿ ವಜ್ರ ಉದಯಿಸಲು ಗಿರಿ ಕರಗಿ ಅರೆವೊಡೆದು, ಧರೆ ಬೆಂದು ಕಾಲಾಗ್ನಿ ಎದ್ದು ಉರಿವುತ್ತಿದೆ ನೋಡಾ. ಆ ಉರಿಯೇ ವಜ್ರದ ಪ್ರಭೆಯೆಂದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಧನುಜಮನುಜ ದಿವಿಜಲೋಕಭರಿತಂ ಧರ್ಮಚರಿತಂ ದುರಿತದೂರಂ ವನಧಿವಡಬ ತೇಜೋಮಯಂ ಪಂಚವಕ್ತ್ರಂ ಪ್ರಪಂಚುರಹಿತಂ ಪರಾತ್ಪರಂ ಹರ ಹರ ಶಿವಶಿವಾ ಜಯ ಜಯ ಜಯತು ಶರಣ ಕರುಣಾಕರ ತ್ರಾಹಿ ಮಾಂ ಭಕ್ತವತ್ಸಲ ಮತ್ಪ್ರಾಣನಾಥ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಧರೆಯಾಕಾಶದ ಮಧ್ಯದಲ್ಲಿ ಉರಿಯ ಸೀರೆಯನುಟ್ಟು ಧರೆಯಾಕಾಶಕ್ಕೆ ಎಡೆಯಾಡುತಿದಾಳೆ ನೋಡಾ. ಊರ ಒಳ ಹೊರಗೆ ತಾನಾಗಿ ಆರು ಬಣ್ಣದ ಪಕ್ಷಿಯ ಶಿರದ ಅಮೃತವ ಕರೆದು ತಾನು ಪರಮಾನಂದ ಲೀಲೆಯಿಂದ ನಲಿದಾಡುತಿದಾಳೆ ನೋಡಾ. ಊರು ಬೆಂದು ಉಲುಹು ಅಳಿದುಳಿದು ಆರು ಬಣ್ಣದ ಪಕ್ಷಿಯಳಿದು ಆರೂಢವಾಯಿತ್ತು ನೋಡಾ. ಉರಿಯ ಸೀರೆಯ ಆಂಗನೆ ಉಪಮಾತೀತನ ನೆರೆದುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು