ಅಥವಾ
(66) (52) (21) (4) (8) (10) (0) (0) (16) (4) (2) (16) (3) (0) ಅಂ (29) ಅಃ (29) (69) (0) (25) (1) (0) (17) (0) (13) (0) (0) (0) (0) (1) (0) (0) (36) (0) (12) (3) (46) (41) (0) (15) (18) (50) (3) (5) (0) (17) (18) (24) (2) (44) (34) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಂದು ಪದದೊಳಗೆ ಎರಡೆಂಬತ್ತೆಂಟುಕೋಟಿ ಪದ ಹುಟ್ಟಿದವು ನೋಡಾ. ಆ ಎರಡೆಂಬತ್ತೆಂಟು ಕೋಟಿ ಪದದೊಳಗೆ ಅನೇಕ ಕಾಲುಗಳು ಹುಟ್ಟಿದವು ನೋಡಾ. ಆ ಅನೇಕ ಕಾಲುಗಳ ಮುರಿದು, ಎರಡೆಂಬತ್ತುಕೋಟಿ ಪದಗಳನಳಿದು, ಒಂದೆ ಪದದಲಿ ನಿಲಬಲ್ಲರೆ ಆತನು ಪರಶಿವ ಪದಸ್ಥನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಂದೇ ವೇಳೆ ಪುರುಷಾಹಾರ ಪ್ರಮಾಣಿನಲ್ಲಿ ಗಡಣಿಸಿಕೊಂಡು ಲಿಂಗಕ್ಕೆ ಕೊಟ್ಟು ಲಿಂಗವನವಧರಿಸಿಕೊಂಬಿರಿ. ಮತ್ತೊಂದು ಪದಾರ್ಥ ಬಂದರೆ ಮುಟ್ಟಿ ಅರ್ಪಿಸಲಮ್ಮರು. ಅದೇನು ಕಾರಣ? ಕೈಯೇನು ಎಂಜಲೆ? ಕೈಯೆಂಜಲಾದವಂಗೆ ಮೈಯೆಲ್ಲಾಯೆಂಜಲು. ಎಂಜಲೆಂದರೆ ಅಮೇಧ್ಯ. ಅಪವಿತ್ರಕಾಯದಮೇಲೆ ಲಿಂಗವ ಧರಿಸಿಕೊಂಡಿಪ್ಪಿರೆ? ಇಂತಪ್ಪ ಸಂದೇಹಿ ಮಾನವರ ನಿಮ್ಮ ಪ್ರಸಾದಿಗಳು ಮೆಚ್ಚರಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಬ್ಬನಿಗಿಬ್ಬರು ಸ್ತ್ರೀಯರು ನೋಡಾ, ಒಬ್ಬಳು ಕಾಯದ ರೂಪೆಯಾಗಿ ಕಾಯವ ಶುದ್ಧವ ಮಾಡುವಳು. [ಆ]ಕಾಯದ ಗುಣವ ಹೊದ್ದಳು ನೋಡಾ. ಮತ್ತೊಬ್ಬಳು ಪ್ರಾಣದ ರೂಪೆಯಾಗಿ ಪ್ರಾಣವ ಶುದ್ಧವ ಮಾಡುವಳು; ಆ ಪ್ರಾಣನ ಗುಣವ ಹೊದ್ದಳು ನೋಡಾ. ಇಬ್ಬರ ಸಂಗದಿಂದ ತಾನೊಬ್ಬ ಸಾಯಲು ಮೂರುಲೋಕದ ತಬ್ಬಿಬ್ಬು ಬಿಟ್ಟು, ಕತ್ತಲೆ ಹರಿಯಿತ್ತು, ತಲ್ಲಣವಡಗಿತ್ತು. ಎಲ್ಲರೂ ನಿರಾಳರಾದರು. ಅವರು ನಿಮ್ಮವರು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಳಗೆಂಬವನೊಬ್ಬ; ಹೊರಗೆಂಬವನೊಬ್ಬ. ರೂಪೆಂಬವನೊಬ್ಬ; ನಿರೂಪೆಂಬವನೊಬ್ಬ. ಕಾಮಿಯೆಂಬವನೊಬ್ಬ; ನಿಃಕಾಮಿಯೆಂಬವನೊಬ್ಬ. ಮಾಯಿಯೆಂಬವನೊಬ್ಬ; ನಿರ್ಮಾಯಿಯೆಂಬವನೊಬ್ಬ. ಶುದ್ಧನೆಂಬವನೊಬ್ಬ; ಅಶುದ್ಧನೆಂಬವನೊಬ್ಬ. ಮಲಿನನೆಂಬವನೊಬ್ಬ; ನಿರ್ಮಲಿನನೆಂಬವನೊಬ್ಬ. ಒಳಗೆಂಬಾತನು ಅಲ್ಲ; ಹೊರಗೆಂಬಾತನು ಅಲ್ಲ. ರೂಪೆಂಬಾತನು ಅಲ್ಲ; ನಿರೂಪಪೆಂಬಾತನು ಅಲ್ಲ. ಕಾಮಿಯೆಂಬಾತನು ಅಲ್ಲ; ನಿಃಕಾಮಿಯೆಂಬಾತನು ಅಲ್ಲ. ಮಾಯಿ ಎಂಬಾತನೂ ಅಲ್ಲ. ನಿರ್ಮಾಯಿ ಎಂಬಾತನೂ ಅಲ್ಲ ಶುದ್ಧನೆಂಬಾತನು ಅಲ್ಲ; ಅಶುದ್ಧನೆಂಬಾತನು ಅಲ್ಲ. ಮಲಿನನೆಂಬಾತನು ಅಲ್ಲ; ನಿರ್ಮಲಿನನೆಂಬಾತನು ಅಲ್ಲ. ನಾನು ನೀನೆಂಬುದೇನುಯೇನೂ ಇಲ್ಲದ ಪರಾಪರವೇ ಶರಣನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಳಗೆಂದೇನು? ಹೊರಗೆಂದೇನು? ಅರುಹೆಂದೇನು? ಮರಹೆಂದೇನು? ತಾನೆಂದೇನು? ಇದಿರೆಂದೇನು? ಬರಿಯ ಬಯಲುಭ್ರಮೆಗೊಳಗಾಯಿತ್ತಲ್ಲಾ ಈ ಲೋಕ. ಒಳಗು ತಾನೆ, ಹೊರಗು ತಾನೆ. ಅರುಹು ತಾನೆ, ಮರಹು ತಾನೆ. ತೆರಹಿಲ್ಲದ ಪರಿಪೂರ್ಣ ಪರಾಪರವು ತಾನೇ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಸಿ ಲೋಕಾಧೀನ, ಒಸಿ ಶಿವಾಧೀನವುಂಟೆ ಲೋಕದೊಳಗೆ? ಒಸಿ ಪುರುಷಪ್ರಯತ್ನ, ಒಸಿ ಶಿವಪ್ರಯತ್ನವುಂಟೆ ಲೋಕದೊಳಗೆ? ಒಸಿ ಲೋಕಾರ್ಥ, ಒಸಿ ಪರಮಾರ್ಥವುಂಟೆ ಲೋಕದೊಳಗೆ? ಒಸಿ ಜೀವಗುಣ, ಒಸಿ ಪರಮನಗುಣವಂಟೆ ಲೋಕದೊಳಗೆ? ಸ್ಥಾವರ ಜಂಗಮಾತ್ಮಕಂಗಳ ಲಯ ಗಮನಂಗಳಿಗೆ ಅಧಿಷಾ*ನ ಕರ್ತೃ ಶಿವನೆಂದರಿಯದವಂಗೆ ಶಿವಜ್ಞಾನವೆಲ್ಲಿಯದೋ? ಸಮಸ್ತಾತ್ಮರಿಗೆ ಸರ್ವಪ್ರೇರಕ ಸರ್ವಚೈತನ್ಯ ಸರ್ವವ್ಯಾಪಕ ಸರ್ವಮಯನು ಸರ್ವಜ್ಞನೊಬ್ಬನೆ ಸರ್ವಕಾರಣ. ಹೀಗೆಂಬುದು ಪರಮಾರ್ಥವಲ್ಲದೆ ಉಳಿದವೆಲ್ಲಾ ಜೀವಭಾವ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಳಹೊರಗೆ ಭರಿತನಾಗಿ ವಸ್ತು ತಲೆದೋರದೆ, ಕಾಣಿಸಿಕೊಳ್ಳದೆ ಇಪ್ಪನೆನುತ್ತಿದ್ದಿರಿ; ಆ ವಸ್ತುವಿನ ಗುಣ, ವಸ್ತುವಿನ ಸ್ವರೂಪು, ಆವುದು ಕರುಣಿಸಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಳಗಿಟ್ಟುಕೊಂಡು ನಡೆದರೂ ನಡೆಯಲಿ; ಅದಕೇನು? ಶಿವಶರಣರಿಗೆ ತಥ್ಯ ಮಿಥ್ಯ ಸಲುವುದೆ? ಸಲ್ಲದೆಂದುದಾಗಿ ಆದಿ-ವ್ಯಾಧಿ, ಸುಖ-ದುಃಖ, ಭಯ-ಮೋಹ, ಪುಣ್ಯ-ಪಾಪ, ಇಹ-ಪರವೆಂಬ ಉಪಾಧಿಯ ಹೊದ್ದದೆ ಆಚಾರ ಅನಾಚಾರವೆಂಬುದರಿಯದಿರ್ದಡೆ ಜಲದೊಳಗಣ ಸೂರ್ಯನಂತೆ ವಿಶ್ವಪ್ರಪಂಚ ಹೊದ್ದಿಯು ಹೊದ್ದದೆ ಬೆರಸಿಯು ಬೆರಸದೆ ಸರ್ವಸಾಕ್ಷಿಕನಾಗಿರಬಲ್ಲರೆ ಆತಂಗೆ ಸಲುವುದೀ ಮತ ಆಚಾರದೆಡೆಯಲ್ಲಿ ಅನುಸರಣೆಯುಂಟೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಳಗೆ ನೋಡಿದರೆ ಒಳಗೆ ಬಯಲು. ಹೊರಗೆ ನೋಡಿದರೆ ಹೊರಗೆ ಬಯಲು ನೋಡಾ. ನೆನೆದಿಹೆನೆಂದರೆ ಮನ ಬಯಲು, ನೆನೆಸಿಕೊಂಡೆನೆಂದರೆ ನೀನಿಲ್ಲವಾಗಿ ನಾನೂ ಬಯಲು, ನೀನೂ ಬಯಲು ನೋಡಾ. ಭಾವಿಸಿಕೊಂಬ ವಸ್ತುವಿಲ್ಲವಾಗಿ ಭಾವ ಬಯಲೆಂದೆನು ನೋಡಾ. ಮರಹು ನಷ್ಟವಾಯಿತ್ತಾಗಿ ಅರುಹು ಶೂನ್ಯವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಂಟೆಯ ತಲೆಯಲ್ಲಿ ಎಂಟಾನೆ ಹುಟ್ಟಿದುದ ಕಂಡೆನಯ್ಯ. ಅದಕ್ಕೆ ನಂಟರು ಅರೇಳೆಂಟು ಹತ್ತು ನೋಡ. ಒಂಟೆಯ ತಲೆಯಲ್ಲಿ ಉರಿಲಿಂಗ ಹುಟ್ಟಲು ಎಂಟಾನೆ ಸತ್ತವು; ನಂಟರು ಕೈಬಿಟ್ಟರು. ಒಂಟೆಯ ತಲೆಯ ಮೆಟ್ಟಿ ನಿಂದು ಉರಿಯ ಪುರುಷನ ನೆರದು ಕಂಟಕಂಗಳ ಗೆಲಿದು ಸಂಸಾರಸಾಗರವ ದಾಂಟಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಡಲು ಉಮಾಪತಿಯಲ್ಲಿ ನಿಂದು ಮನವು ಮಾರಾರಿಯಲ್ಲಿ ಬಲಿದು ನಿಂದ ಕಾರಣ ತನುಮನದ ತಾಮಸದ ತವಕ ಮುರಿದೋಡಿತ್ತು ನೋಡಾ. ಜೀವ ಪ್ರಣವವನಪ್ಪಿ ಪರಮಾತ್ಮ ಸ್ವರೂಪು ಕೃತ ನಿಶ್ಚಯವಾಗಿ ಪ್ರಪಂಚ ತಲೆದೋರಲೀಯದು ನೋಡಾ. ಭಾವ ಬ್ರಹ್ಮವನಪ್ಪಿ ದೇಹ ಭಾವಂಗಳನೆಲ್ಲಾ ಕೊಡಹಿತ್ತು ನೋಡಾ. ದೇಹ ಮೋಹವಳಿದು ಸರ್ವಾಂಗವು ಲಿಂಗನಿಷೆ*ಯಲ್ಲಿ ಲೀಯವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಬ್ಬನಿಂದಾದವಂಗೆ ಇಬ್ಬರ ಸಂಗವನೇಕೆ ಹೇಳುವಿರಿ? ಇಬ್ಬರ ಸಂಗದಿಂದಾನೆಂಬುದು ಅಜ್ಞಾನವಲ್ಲದೆ ಅರುಹಲ್ಲ ನೋಡಾ. ಒಬ್ಬರ ಸಂಗದಿಂದಾದ ಸ್ವಸಂಗಿಗೆ ತಂದೆಯೆಂದು ಕಲ್ಪಿಸಿ ತಾಯೆಂದು ಹೇಳಲಿಲ್ಲ. ತಂದೆ ತಾಯಿಗಳಿಲ್ಲದಾತಂಗೆ ಬಂಧುಗಳೆಂದೇನೋ ಭ್ರಾಂತರಿರಾ? ಅಯೋನಿಸಂಭವನಾಗಿ ಶರಣನು ಸ್ವಯಂಭು ತಾನಾದನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಳಗಿಪ್ಪಾತನ ಹೊರಗೆ ನೋಡಿ ಕಂಡೆನಯ್ಯ. ಹೊರಗಿಪ್ಪಾತನ ಒಳಗೆ ನೋಡಿ ಕಂಡೆನಯ್ಯ. ಒಳಹೊರಗಿಪ್ಪವರಿಬ್ಬರು ಒಂದಾಗಿ ನಿಂದ ನಿಲುವು ಬಯಲು ಬಯಲ ಬೆರಸಿದಂತೆ ನಿರಾಳವಾಯಿತ್ತು ಕಾಣಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಬ್ಬರುತ್ತಮರೆಂಬರು. ಒಬ್ಬರು ಮಧ್ಯಮರೆಂಬರು. ಒಬ್ಬರು ಕನಿಷ*ರೆಂಬರು. ಒಬ್ಬರಧಮರೆಂಬರು. ಒಬ್ಬರು ಕಷ್ಟ ನಿಷೂ*ರಿಗಳೆಂಬರು. ಎಂದರದಕೇನು ಯೋಗಿಗೆ ವಿನಯ ಕಂಟಕವಲ್ಲದೆ. ಲೋಕಾರ್ಥಕ್ಕೂ ಪರಮಾರ್ಥಕ್ಕೂ ವಿರುದ್ಧ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಳಹೊರೆಗೆಂಬ ಉಭಯ ಸಂದೇಹದಿಂದ ಗುರುಶಿಷ್ಯರೆಂದು ನುಡಿದುಕೊಂಡು ನಡೆಯಬೇಕಾಯಿತಲ್ಲದೆ, ಒಳಹೊರಗೆಂಬ ಉಭಯಸಂದೇಹವಳಿದು ಜೀವ ಪರಮರೆಂದೆಂಬ ಉಭಯವು ಪರಮನೊಬ್ಬನೇಯೆಂದು ತಿಳಿದರೆ, ಗುರುವೇ ಶಿಷ್ಯ; ಶಿಷ್ಯನೇ ಗುರುವಾದುದನೇನೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಂದೆರಡಾಯಿತ್ತೆಂಬುದು ಭ್ರಮೆ. ಎರಡು ಮೂರಾಯಿತ್ತೆಂಬುದು ತಾ ಭ್ರಮೆ. ಮೂರು ಆರಾಯಿತ್ತೆಂಬುದು ಮುನ್ನವೆ ಭ್ರಮೆ. ಎನಗೆ ಆರೂ ಇಲ್ಲ; ಮೂರು ಇಲ್ಲ; ಉಭಯವೂ ಇಲ್ಲ. ಉಭಯವಳಿದುಳಿದು ಒಂದಾದೆನೆಂಬುದು ಮುನ್ನವೇ ಇಲ್ಲ. ಮುನ್ನ ಮುನ್ನವೇ, ಪರವಸ್ತು ತಾನಾದ ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು