ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಈ ತನುವುಳ್ಳವರನಾ ತನುವುಳ್ಳವರು ಹೋಲಬಲ್ಲರೆ ? ಈ ಮನವುಳ್ಳವರನಾ ಮನವುಳ್ಳವರು ಹೋಲಬಲ್ಲರೆ ? ಈ ಪ್ರಾಣವುಳ್ಳವರನಾ ಪ್ರಾಣವುಳ್ಳವರು ಹೋಲಬಲ್ಲರೆ ? ಈ ಭಾವವುಳ್ಳವರನಾ ಭಾವವುಳ್ಳವರು ಹೋಲಬಲ್ಲರೆ ? ಇದು ಕಾರಣ, ಈ ಸಿಂಹ ಗಜವನಾ ಶುನಕ ಸೂಕರ ಹೋಲಬಲ್ಲವೇನು ? ಗುರುನಿರಂಜನ ಚನ್ನಬಸವಲಿಂಗಾ ಈ ಶರಣನಾನರನು ಹೋಲಬಲ್ಲನೆ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಈ ಪೃಥ್ವಿಯಲ್ಲಿ ಆರೂ ಕಾಣಬಾರದುದ ಕಂಡು ಶರಣೆಂದು ಸುಖಿಸಿ ಮೈಮರೆತಿರ್ದೆ ಕಾಣಾ. ಈ ವನದಲ್ಲಿ ಆರೂ ಅರಿಯಬಾರದುದನರಿದು ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ಧನಂಜದಲ್ಲಿ ಆರೂ ನೋಡಬಾರದುದ ನೋಡಿ ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ವಾತದಲ್ಲಿ ಆರೂ ತಿಳಿಯಬಾರದುದ ತಿಳಿದು ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ನಭದಲ್ಲಿ ಆರೂ ಕಾಣಬಾರದುದ ಕಂಡು ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ಆತ್ಮನಲ್ಲಿ ಆರೂ ಅರಿಯಬಾರದುದನರಿದು ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ಸಕಲದಲ್ಲಿ ಆರೂ ನೋಡಬಾರದುದ ನೋಡಿ ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ನಿಃಕಲದಲ್ಲಿ ಆರೂ ಅರಿಯಬಾರದುದನರಿದು ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಈ ನಿರಾವಯದಲ್ಲಿ ಆರೂ ತಿಳಿಯಬಾರದುದ ತಿಳಿದು ಶರಣೆಂದು ಸುಖಿಸಿ ಮೈಮರೆದಿರ್ದೆ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಈ ಸಂಸಾರಸುಖವ ಮೆಚ್ಚಿ ಮುಂದೇನರಿಯದೆ ಬಂದುಂಡು ತೊಳಲಿ ಹೋಗುವರು ; ಇನ್ನೆಂದು ಕಳೆದು ಕಾಂಬುವರಯ್ಯಾ ? ಪರಿಪರಿಯ ಮಿಥ್ಯ ಕುರುಹಿಂಗೆ ಹರಿಹರಿದು ನೆರೆದು, ಕಿಚ್ಚಿನೊಳು ಅಚ್ಚುತಗೊಂಡು ಅರಿಯದಾದರು ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ