ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶುದ್ಧಪ್ರಸಾದಿಯಾದಡೆ ತನು ಸತ್ಕ್ರಿಯಾ ಸನ್ನಿಹಿತನಾಗಿ, ಅಣುಮಾತ್ರ ದ್ವೈತಿಯಾಗದೆ ಚರಿಸಬೇಕು. ಸಿದ್ಧಪ್ರಸಾದಿಯಾದಡೆ ಮನ ಜ್ಞಾನಸನ್ನಿಹಿತನಾಗಿ, ಕಿಂಚಿತ್ತು ಮಲವಿಷಯಕ್ಕೆ ಜಿನುಗದೆ ಚರಿಸಬೇಕು. ಪ್ರಸಿದ್ಧಪ್ರಸಾದಿಯಾದಡೆ ಭಾವ ಮಹಾನುಭಾವಸನ್ನಿಹಿತನಾಗಿ, ಒಂದಿನಿತು ಭ್ರಾಂತನಾಗದೆ ಚರಿಸಬೇಕು. ಈ ಭೇದವನರಿಯದೆ ಅವರವರಂತೆ, ಇವರಿವರಂತೆ, ತಾನು ತನ್ನಂತೆ ನಡೆನುಡಿ ಕೊಡುಕೊಳ್ಳಿಯುಳ್ಳರೆ ಕಡೆ ಮೊದಲಿಲ್ಲದೆ ನರಕವನೈಯ್ದುವ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರದ್ಧೆ ತೋರಿದಲ್ಲಿ ಆಚಾರಲಿಂಗವ ಕಾಣುವನು. ನೈಷ್ಠೆದೋರಿದಲ್ಲಿ ಗುರುಲಿಂಗವ ಕಾಣುವನು. ಸಾವಧಾನ ತೋರಿದಲ್ಲಿ ಶಿವಲಿಂಗವ ಕಾಣುವನು. ಅನುಭಾವ ತೋರಿದಲ್ಲಿ ಜಂಗಮಲಿಂಗವ ಕಾಣುವನು. ಆನಂದದೋರಿದಲ್ಲಿ ಪ್ರಸಾದಲಿಂಗವ ಕಾಣುವನು. ಸಮರಸ ತೋರಿದಲ್ಲಿ ಮಹಾಲಿಂಗವ ಕಾಣುವನು. ಇಂತು ಷಡ್ವಿಧಭಕ್ತಿ ನಿಷ್ಪತ್ತಿಯಾದಲ್ಲಿ ಗುರುನಿರಂಜನ ಚನ್ನಬಸವಲಿಂಗವ ಕಾಣದೆ ತಾನು ತಾನಾಗಿಹನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶರಣನ ಬರವದು ಸಕಲಸನ್ನಿಹಿತ, ಶರಣ ನಿಂದುದು ಸಕಲನಿಃಕಳ, ಶರಣು ಶರಣಸಂಬಂಧವಾದುದು ಗುರುನಿರಂಜನ ಚನ್ನಬಸವಲಿಂಗೈಕ್ಯ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರುತಿಯ ನೋಡುವ ಮತಿಕುಶಲದನುವಿಂಗೆ ನೆಗೆದುನೋಡಲೊಲ್ಲದೆನ್ನ ಭಾವ. ಆಗಮವ ನೋಡುವ ಮತಿಕುಶಲದನುವಿಂಗೆ ವಿಕಸನವಾಗಲೊಲ್ಲದೆನ್ನ ಮನ. ಅಭ್ಯಾಸಿಗಳರಿವ ಮತಿಕುಶಲದನುವಿಂಗೆ ಸೊಗಸನೆತ್ತಲೊಲ್ಲದೆನ್ನ ತನು. ಅದೇನು ಕಾರಣವೆಂದೊಡೆ, ಬಸವ ಚನ್ನಬಸವ ಪ್ರಭುಗಳ ವಚನಾನುಭಾವದ ಪರಮಪ್ರಕಾಶ ಎನ್ನೊಳಹೊರಗೆ ಪರಿಪೂರ್ಣಾನಂದ ತಾನೆಯಾಗಿಪ್ಪುದಾಗಿ, ಮತ್ತೊಂದನರಿಯಲರಿಯದ ಭಾವವನೇನೆಂದರಿಯದಿರ್ದೆ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶುದ್ಧ ನಿರ್ಮಾಯ ನಿರ್ಮಲವೆಂಬ ಅಂಗತ್ರಯದಲ್ಲಿ ಸದ್ಗತಿ ಸತ್ಕ್ರಿಯೆ ಸದ್ಧರ್ಮವೆಂಬ ಪೀಠತ್ರಯದ ಮೇಲೆ ವಿಚಾರಗುರು ವಿನಯಗುರು ಕೃಪಾಗುರುವೆಂಬ ಗುರುತ್ರಯವ ಧರಿಸಿ ಘನಭಕ್ತಿಯ ಕುರುಹಬಲ್ಲರೆ ಆತ ಸತ್ಯಭಕ್ತನೆಂಬೆ. ಸುಬುದ್ಧಿ ನಿಃಕಾಮ ಅನುಕೂಲೆಯೆಂಬ ಮನತ್ರಯದ ವಿಶೇಷಗತಿ ಸುಜ್ಞಾನ ವಿಮಲಜ್ಞಾನವೆಂಬ ಪೀಠತ್ರಯದಮೇಲೆ ಸಗುಣಲಿಂಗ ನಿರ್ಗುಣಲಿಂಗ ನಿರ್ಭೇದ ಲಿಂಗವೆಂಬ ಲಿಂಗತ್ರಯವ ಧರಿಸಿ, ಚಿನ್ಮಯಭಕ್ತಿಯ ಕುರುಹ ಬಲ್ಲರೆ ಆತ ನಿತ್ಯಭಕ್ತನೆಂಬೆ. ಸಂವಿತ್‍ಕಳಾ ಸಂಧಾನಕಳಾ ಸಮರಸಕಳಾಯೆಂಬ ಭಾವತ್ರಯದಲ್ಲಿ, ಮತಿಗಮನ, ರತಿಗಮನ, ಮಹಾರತಿಗಮನವೆಂಬ ಭಾವತ್ರಯದ ಸತ್ಪ್ರೇಮ ಸುಖಮಯ ಆನಂದವೆಂಬ ಪೀಠತ್ರಯದ ಮೇಲೆ ಜ್ಞಾನಜಂಗಮ, ಮಹಾಜ್ಞಾನಜಂಗಮ, ಪರಮಜ್ಞಾನಜಂಗಮವೆಂಬ ಜಂಗಮತ್ರಯವ ಧರಿಸಿ, ಪರಿಪೂರ್ಣಭಕ್ತಿಯ ಕುರುಹ ಬಲ್ಲರೆ ಆತ ನಿಜಭಕ್ತನೆಂಬೆ. ಈ ಭೇದವನರಿಯದೆ ಬರಿಯ ಕಾಯ ಮನ ಭಾವದಲ್ಲಿ ಹುಸಿನೆರವಿಯ ತುಂಬಿ ಹುಸಿಯ ಡಂಬ್ಥಿನ ಭಕ್ತಿಯ ಕಿಸುಕುಳತ್ವಕ್ಕೆ ಬಿಸಿಯನಿಟ್ಟು, ತಪ್ಪಿಸಿ ತೋರುತಿರ್ದನು ಗಂಬ್ಥೀರ ಭಕ್ತಿಯ ನೆರೆದು ಚೆಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶರಣ ತನ್ನ ಮುಂದಣಾಚಾರಕ್ಕೆ ಹಿಂದಣ ಸಂದಣಿಯ ನೇವರಿಸಿ ತಂದು, ಗಂಭೀರಗತಿಮತಿಯೊಳ್ವೆರಸಿ, ಅತಿ ರಹಸ್ಯದನುವಿನೊಳೆರಕವಾದ, ನಿರುಪಮ ನಿಜಾನಂದದ ನಿಲುವಿಗೆ ಆನು ಆನಂದದನುಕೂಲದವಸರಕ್ಕಡಿಯಿಡಲೆಡೆಯುಂಟೆ ? ಮಡದಿ ಪುರುಷರ ಮಾತು ಮಥನ ಘಾತದೊಳಗಿಲ್ಲದಿರ್ದನು, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ಅನುಪಮ ಚಾರಿತ್ರನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶೂನ್ಯದ ಕಳೆಬೆಳೆಯನರಿದು ನಿಶ್ಶೂನ್ಯದ ಕಳೆಬೆಳೆಯೊಳು ನಿಂದು, ಕುರುಹಿಂಗೆ ಹಿಂದು ಮುಂದೆ ತೋರಲೆಡೆಯಿಲ್ಲ. ಹಿಂದಣತ್ತ ಮುಂದಣತ್ತ ಗುರುನಿರಂಜನ ಚನ್ನಬಸವಲಿಂಗದೊಡಲಿಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶರಣಸತಿ ಲಿಂಗಪತಿಯೆಂಬ ಕುಶಲಗತಿಯುನ್ನತವನರಿಯದೆ ಅರ್ಚನೆಯಾರ್ಪಣಕ್ಕೆ ಬ್ಥಿನ್ನರೆಂದು ನುಡಿವ ಅದ್ವೈತ ಗೊಡ್ಡು ವೇದಾಂತಿಗಳ ಕಸಮನವ ನೋಡಾ! ನಿಜಭಕ್ತಿ ಸುಜ್ಞಾನ ಪರಮವೈರಾಗ್ಯವೇ ಅಂಗ ಮನ ಭಾವವಾಗಿರ್ದಡೆ ಅದ್ವೈತಿಗಳಿರವೆಂದು ನುಡಿವ ಅಪಶೈವ ಸಿದ್ಧಾಂತಿಗಳ ದುರ್ಭಾವದಂಗವ ನೋಡಾ! ಈ ಜೀವಕಾಯರಂತಂತಿರಲಿ, ಸಕಲನಿಃಕಲಸನುಮತ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಪ್ರಸಾದಿ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವನಂಗ ಶರಣನೆಂದು ಅರಿದು ಬಂದ ನಿಜನು ಮರವೆಯನರಿಯದೆ ಬರಿಯ ಹಿರಿಯ ಹೆಮ್ಮೆಯನುತ್ತರಿಸುತ್ತ ಕಂಡಲ್ಲಿ ಸಾವಧಾನಸಂಬಂಧವಾಗಿ ಸಮುಖ ವಿನೋದಪರಿಣಾಮದೋರುತ್ತ ಪರಿಪೂರ್ಣಪದದೊಳೊಪ್ಪುತಿರ್ದನು ಶುದ್ಧಸಿದ್ಧಪ್ರಸಿದ್ಧ ಪ್ರಭುಲಿಂಗ ಭಕ್ತನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶರಣನ ಕಾಯ ಬೆಳಗು ಕಾಣಬಾರದು, ಮನದ ಬೆಳಗು ಕಾಣಬಾರದು, ಪ್ರಾಣನ ಬೆಳಗು ಕಾಣಬಾರದು, ಭಾವದ ಬೆಳಗು ಕಾಣಬಾರದು, ಜ್ಞಾನದ ಬೆಳಗು ಕಾಣಬಾರದು, ಅರುಹಿನ ಬೆಳಗು ಕಾಣಬಾರದು. ಗುರುನಿರಂಜನ ಚನ್ನಬಸವಲಿಂಗವಾಗಿರ್ದ ನಿಜಶರಣರಿಗಲ್ಲದೆ ಇತರರಿಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ವಾನ ಬೊಗಳುವುದೇ ಸುಳುಹುಕಾಣದೆ ? ಅಳಿದುಳಿದು ಗುರುವಿನಿಂದುದಿಸಿಬಂದೆವೆಂದು ನುಡಿದು ಬಂದ ಬಳಿಕ ನುಡಿನಡೆಯೊಳೊಪ್ಪಿ ಕಾಣಿಸಿಕೊಳ್ಳಬೇಕಲ್ಲದೆ ತಮದ ಮರೆಯಲ್ಲಿ ಮಡುಗಿ ಇತರರ ಗುಣವನರಸಿ ತಂದು ಆಡುವರು. ಅದಲ್ಲದೆ ಕಾಣದೆ ಕಂಡೆವೆಂದು ಹುಸಿ ನೇವರಿಸಿ ನುಡಿವ ಕಸಮೂಳರ ಕೆಡಹಿ ಬಸುರಲ್ಲಿ ಮಲವ ತುಂಬುವರು ಕಾಲನವರು. ಈ ಶ್ವಾನನ ಬೊಗಳಿಕೆಗೆ ಕಡೆಯಾದ ಕರ್ಮಿಗಳ ನೆನೆಯಲಾಗದು ಕಾಲತ್ರಯದಲ್ಲಿ ಕಂಡ ಮಹಿಮರು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರೇಷ* ಶಿವಭಕ್ತರೆಂದು ಇಷ್ಟಲಿಂಗವ ಕೆಳಗೆ ಮಾಡಿ, ಸೃಷ್ಟಿಯೊಳಿಟ್ಟ ಸ್ಥಾವರಕ್ಕೆರಗಿ, ಮುಟ್ಟಿಹಾರುವ, ಜೈನ, ರಾಜ, ಮಂತ್ರಿ, ಹಿರಿಯರುಗಳೆಂದು ಪೆಟ್ಟುಪೆಟ್ಟಿಗೆ ಶರಣೆಂದು ಹೊಟ್ಟೆಯ ಹೊರೆದು ನರಕಸಮುದ್ರದೊಳ್ಮುಳುಗಾಡುವ ದುರ್ಭವಿಗಳಿಗೆತ್ತಣ ಲಿಂಗಭಕ್ತಿಯಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರೀಮಹಾಕಲ್ಯಾಣದೊಳಗಿರ್ದು ನಿತ್ಯಾನುಭವದ ಬೆಳಗಿನೊಳೋಲ್ಯಾಡುತಿರ್ದೆನು. ಅದು ಹೇಗೆಂದೊಡೆ, ಆದ್ಯರನುಭಾವವೆನ್ನ ಕಾರಣತನುವಿನಲ್ಲಿ ಆನಂದಪ್ರಕಾಶಮಯವಾಗಿ ಕಾಣಿಸುತ್ತಿಹುದು. ವೇದ್ಯರನುಭಾವವೆನ್ನ ಸೂಕ್ಷ್ಮತನುವಿನಲ್ಲಿ ಚಿತ್ಪ್ರಕಾಶಮಯವಾಗಿ ಕಾಣಿಸುತ್ತಿಹುದು. ಸಾಧ್ಯರನುಭಾವವೆನ್ನ ಸ್ಥೂಲತನುವಿನಲ್ಲಿ ಸತ್ಪ್ರಕಾಶಮಯವಾಗಿ ಕಾಣಿಸುತ್ತಿಹುದು. ಇದು ಕಾರಣ, ಈ ತ್ರಿವಿಧ ಮಹಿಮರನುಭಾವಕ್ಕೆ ಎನ್ನನೊತ್ತೆಯನಿತ್ತು ಮರೆದಿರ್ದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರದ್ಧೆಯಲ್ಲಿ ಮುಳುಗಿದರೆ ನೈಷೆ* ನೆರೆಯುವುದು, ಸಾವಧಾನ ಸಂಭವಿಸುವುದು. ಅನುಭಾವವಿಡಿದು ಆಚರಿಸುವ ಪ್ರಾಣಲಿಂಗಿಯ ಮನಸ್ಸು ಆನಂದವನು ಬಯಸುತ್ತಿಹುದು, ಕರ್ಮವನು ಕತ್ತರಿಸುತ್ತಿಹುದು, ಖಂಡಿತವ ಕಡೆಗಿಡುತ್ತಿಹುದು, ಬಂಡುಂಬ ಭ್ರಮರದಂತೆ ಮಂಡಲತ್ರಯದ ಮಧ್ಯದಲ್ಲಿ ನಿರ್ಮಲಬೆಳಗ ಸೇವಿಸುತ್ತಿಹುದು ಗುರುನಿರಂಜನ ಚನ್ನಬಸವಲಿಂಗವ ಮುಟ್ಟಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶರಣ ತನ್ನ ಪ್ರಾಣಲಿಂಗಪೂಜೆಯ ಮಾಡುವಲ್ಲಿ ತನು ಮನ ಪ್ರಾಣ ನಷ್ಟವಾಗಲೆಂದು ಕಷ್ಟಬಟ್ಟವನಲ್ಲ. ಇಂದ್ರಿಯವಿಷಯನಳಿಯಬೇಕೆಂದು ಕಳೆಗುಂದಿ ಬಳಲುವನಲ್ಲ. ವಾಗ್ಜಾಲವುಡುಗಲೆಂದು, ದುರ್ಭೂತಪ್ರವೇಶ ಮೌನಿಯಲ್ಲ. ಕಣ್ಣು ಮುಚ್ಚಿ ಧ್ಯಾನವ ಮಾಡುವನಲ್ಲ. ಸಂಕಲ್ಪ ಕಳವಳವ ಕಳೆದುಳಿದ ನಿಃಸಂಕಲ್ಪ ನಿರ್ವಾಣಿ ನೋಡಾ. ಸತ್ಕ್ರಿಯಾ ಸುಜ್ಞಾನ ಸಮರಸಪ್ರಕಾಶ ಪರಿಪೂರ್ಣ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶುದ್ದನಪ್ಪನಯ್ಯಾ ಜಾಗ್ರಸ್ವಪ್ನ ಸುಷುಪ್ತಿಯಲ್ಲಿ ಪರಸ್ತ್ರೀ ಅನ್ಯದೈವಭಕ್ತಿಯ ಬಯಸದವ. ಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಅನ್ಯಧನಕಾಂಕ್ಷೆ ಅವ್ಯಕ್ತಚಿಂತೆಯ ಮಾಡದವ. ಪ್ರಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಷಡುವರ್ಗ ಭಾವವಿಲ್ಲದವ. ಅಶುದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ನಿಜೋಪಾಧಿಯ ಭಕ್ತಿಯುಳ್ಳಡೆ. ಅಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಸುಪ್ರಸನ್ನಭಕ್ತಿಯುಳ್ಳಡೆ. ಅಪ್ರಸಿದ್ಧನಪ್ಪನಯ್ಯಾ ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಸಮಯಭಕ್ತಿಯುಳ್ಳಡೆ. ಇದು ಕಾರಣ, ಅಲ್ಲಿಯೇ ಇರಲೊಲ್ಲದಿರ್ದನು ಇಲ್ಲಿಯೆ ಚಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ನೋಡಾ ಅರಿವರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವಶಕ್ತಿಯರೊಂದಾಗಿ ನಂದಿಯನೇರಿ ಮುಂದುವರಿದು ನಿಂದಲ್ಲಿ ಬಂದುದು ಪ್ರಾಣಲಿಂಗಸಂಬಂಧ ನೋಡಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶರಣನ ನಡೆಚಂದ ಲಿಂಗಕ್ಕೆ, ನುಡಿಚಂದ ಲಿಂಗಕ್ಕೆ, ಹಿಡಿತಚಂದ ಲಿಂಗಕ್ಕೆ, ಬಿಡಿತಚಂದ ಲಿಂಗಕ್ಕೆ, ಅಂಗಹೀನ ಅನ್ನಕತ್ತರೆ, ಆಶೆಭರಿತ ವೇಷಧಾರಿಯ ನಡೆ ನುಡಿ ಹಿಡಿತ ಬಿಡಿತಕೆ ಹೇಸಿಕೆಯಾಗಿ ಹೆರೆ ಸಾರಿ, ಅತ್ತತ್ತಲಿರ್ದ ನಮ್ಮ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶರಧಿಯ ಜಲವು ಒಂದಾಣತಿಯಿಂದ ಆಕಾಶದಲ್ಲಿ ಮೇಘವಾಗಿ ಸುರಿದಜಲ ಭೂಮಿವಿಡಿದು, ನದಿಗೂಡಿ ಹರಿದು ಸಮುದ್ರವನೊಡವೆರೆದಂತೆ ಮಹಾಘನ ಸಮುದ್ರದಿಂದಾದ ಚಿದಾನಂದ ಶರಣ ತನ್ನ ವಿನೋದಕಾರಣ ತನುವಿಡಿದು ಸರ್ವಾಚಾರಸಂಪತ್ತಿನೊಳುಬೆರೆದು ಮೀರಿದಕ್ರಿಯೆಯಿಂದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸಾನಂದವ ಏನೆಂದುಪಮಿಸಬಹುದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ವಾನಮುಟ್ಟಿದ ಪಾಕ ನೈವೇದ್ಯಕ್ಕೆ ಬಾರದು, ಬಚ್ಚಲಕೆ ಬಿದ್ದುದಕ ಬಳಕೆಗೆ ಬಾರದು, ಮೃತದೇಹ ಕ್ರಿಯಕ್ಕೆ ಬಾರದು, ಪರಮಜ್ಞಾನೋಪದೇಶವಾದವರೆಂದು ಬಾಯಿಗೆ ಬಂದಂತೆ ತಿಂದು ದುರ್ವಾಕ್ಯ ಮುಂದುಗೊಂಡು ನಡೆದು ದುರ್ಗತಿಯನುಂಬ ದುರಾಚಾರಿಗಳು ಶ್ರೀ ಮಹಾಘನ ಪಂಚಾಕ್ಷರವೆಂಬ ಸತ್ಕ್ರಿಯೆಗೆ ಸಲ್ಲರು ಗುರುನಿರಂಜನ ಚನ್ನಬಸವಲಿಂಗದಲ್ಲಿ ಅನಾದಿ ಅಂಶಿಕರಲ್ಲದವರಿಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರದ್ಧೆ ಸಾವಧಾನ ಲಿಂಗಸ್ಥಲವಾಗಿ, ನಿಷಾ*ನುಭಾವ ಅಂಗಸ್ಥಲವಾಗಿ, ಸಮರಸಾನಂದ ಕರಸ್ಥಲವಾಗಿ, ಮನದಲ್ಲಿ ಭಕ್ತಿ, ಮನನದಲ್ಲಿ ಜ್ಞಾನ, ಮನನೀಯದಲ್ಲಿ ವೈರಾಗ್ಯಗೂಡಿ ನಡೆವ ಸಚ್ಚಿದಾನಂದಮಾಹೇಶ್ವರನ ಪಾದಕಮಲಕ್ಕೆ ಭೃಂಗನಾಗಿ ನಮೋ ನಮೋ ಎನುತಿರ್ದೆನು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶರಣ ತಾ ತನ್ನ ವಿನೋದಕ್ಕೆ ಕುರುಹಿಟ್ಟು ರಚಿಸಿದಲ್ಲಿ ಆ ಶರಣನ ಇಚ್ಫಾಮಾತ್ರದಲ್ಲಿ ತನುಮನಪ್ರಾಣಭಾವ ಜ್ಞಾನಾತ್ಮಂಗಳಿರುತ್ತಿಹವು. ಅದು ಕಾರಣ ಗುರುಜಾತ ಶರಣರೆಂದು ಲಾಂಛನಧಾರಿಯಾದ ಮೇಲೆ ಮತ್ತೆ ನಮಗೆ ತನುಭಾವವೆನಲು ಅಂತೆಯಾಗಿಪ್ಪುದು ಮನಭಾವವೆನಲು ಅಂತೆಯಾಗಿಪ್ಪುದು ಪ್ರಾಣನ ಪ್ರಕೃತಿಯೆನ್ನಲು ಅಂತೆಯಾಗಿಪ್ಪುದು. ತಾನಿಟ್ಟ ಪಿಶಾಚಿ ತನ್ನನಾವರಿಸಿ ನುಂಗುವಂತೆ, ಭಾವದೊಳಗಾಗಿ ಭವದೊಳಗಾದರು. ಅಂತಲ್ಲ, ಶರಣನು, ಭಾವಾತೀತ; ಗುರುನಿರಂಜನ ಚನ್ನಬಸವಲಿಂಗದೊಳಗೆ ಸದ್ಭಾವೈಕ್ಯ ಸದಾನಂದ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶರಣು ಶರಣೆಂಬೆ ನಿಮ್ಮ ಪದಕಮಲಕ್ಕೆ. ಶರಣು ಶರಣೆಂಬೆ ನಿಮ್ಮ ಹೃದಯಕಮಲಕ್ಕೆ. ಶರಣು ಶರಣೆಂಬೆ ನಿಮ್ಮ ಮುಖಕಮಲಕ್ಕೆ. ಆದಿ ಆಧಾರ ಚೈತನ್ಯ ಚಲುವಿಕೆಯನವಧರಿಸು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವಯೋಗಿಯ ಯೋಗವನಾರು ಬಲ್ಲರು ಹೇಳಾ. ಖೇಚರಿಯನರಿದು, ಷಣ್ಮುಖಿಯಲ್ಲಿ ಆಚರಿಸಿ, ಶಾಂಭವಿಯೊಳಿರ್ಪ ನಿರ್ಮಲಾನಂದ ನಿಜವೀರಶೈವನನಾರು ಬಲ್ಲರು ಹೇಳಾ! ಅಷ್ಟಾಂಗಯೋಗದಲ್ಲಿ ಶ್ರೇಷಾ*ಭಿಮಾನಿಗಳಾದ ನಿಜನಿಷೆ*ಮಹಿಮನ ಘನವನಾರು ಬಲ್ಲರು ಹೇಳಾ! ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನ ಪರಿಯ ನೀವೇ ಬಲ್ಲಿರಿ.
--------------
ದೇಶಿಕೇಂದ್ರ ಸಂಗನಬಸವಯ್ಯ