ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಊರೊಳಗಿನ ಬೆಂಕಿ ಅಬ್ಬರಿಸಿ ಆವರಿಸಿದಲ್ಲಿ ಒಬ್ಬರೂ ಮುಖವಂತರಿಲ್ಲ ನೋಡಾ. ಊರಡವಿವೊಂದಾಗಿ ಉರಿಯುತ್ತಿರಲು ವ್ಯಾಘ್ರನ ಪ್ರಾಯವಳಿಯದು ನೋಡಾ. ಮೂರು ದೊರೆಗಳು ಮುಂತಾದ ಸಕಲರ ಸಂಬಂಧವ ನೋಡಾ. ಇದನೊಂದು ಮುಖದಲ್ಲಿ ನೋಡಲು ಹೊರಗಣ ಬೆಂಕಿ ಒಳಗೆದ್ದು ಉರಿವಲ್ಲಿ ಹೊಳಪಗೆಡಿಸಿ ಒಳಹೊರಗೆ ತಾನಲ್ಲದೆ ನೆಳಲಿಲ್ಲದ ಸುಖರೂಪ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಊರೆಂಬುದರಿಯ ಉಲುವೆಂಬುದರಿಯ ಬರಿಯ ಮಾತಿನ ಬಣ್ಣವನರಿಯದ ಸಿರಿಸಂಪದದೊಳಾನಂದ ತಲೆಗೇರಿ ಜಾತಿ ಗೋತ್ರ ಕುಲಾಶ್ರಮ ವರ್ಣ ನಾಮಂಗಳೆನುಯೇನೆಂಬ ಭಾವವ ಮರೆದಿರ್ದನು ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಊರನೆಲ್ಲ ಸುಟ್ಟು ಬೆಂಕಿಯಲ್ಲಿ ಕಾಯವನರಸಲತಿ ಚೋದ್ಯ ಕಾಣಾ. ಭೂತಾದಿ ಸಕಲಗುಣನಿಕರವನುರುಹಿ ಭಸ್ಮೀಕೃತವ ಮಾಡಿದ ಚಿದಾರ್ಯನ ಅಪೂರ್ವಪ್ರಕೃತಿಯನರಸಲದು ಅತಿಚೋದ್ಯ ನೋಡಾ. ತನ್ನ ಶೋಧನಮಾಡಿದ ಠಾವಿನಲ್ಲಿ ಅಶುದ್ಧವನರಸಿದರೆ ಭವಬಂಧನ ತಪ್ಪದು ಗುರುನಿರಂಜನ ಚನ್ನಬಸವಲಿಂಗ ಸೂತ್ರವನರಿಯದ ಭ್ರಾಂತರಿಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಊರು ಕೆಟ್ಟುಹೋಗಿ ಕಲ್ಯಾಣ ಕೌಲು ನಿಂದಲ್ಲಿ, ಕೂಡಿದ ಸಂಪತ್ತು ಸಲ್ಲಲಿತದೊಳಿರ್ದೆನಯ್ಯಾ. ಎನ್ನ ಮಠಕ್ಕೆ ಬಂದ ಬಸವಣ್ಣನೊಂದುಕೊಂಡ, ಮಡಿವಾಳಯ್ಯನೊಂದುಕೊಂಡ, ಚನ್ನಬಸವಣ್ಣನೊಂದುಕೊಂಡ, ಸಿದ್ಧರಾಮಯ್ಯ ನೊಂದುಕೊಂಡ, ಉರಿಲಿಂಗಪೆದ್ದಣ್ಣನೊಂದುಕೊಂಡ, ಅಜಗಣ್ಣನೊಂದುಕೊಂಡ ಇಂತಾದಬಳಿಕ ಮುಂದೆ ಮುಕ್ತಾಯಿ ಇಲ್ಲ, ಮಹಾದೇವಿಯಕ್ಕನೊಳಗಡಗಿರ್ದೆನು ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಊರ ಸುಟ್ಟು ಉರಿಯಹೊದೆಯ ನಡೆವ ಧೀರಂಗಲ್ಲದೆ ಗುರುಪ್ರಸಾದವೆಲ್ಲಿಹದೊ? ಜನರ ಸುಟ್ಟು ಬೂದಿಯ ಧರಿಸಿ ನಡೆವ ಶೂರಂಗಲ್ಲದೆ ಲಿಂಗಪ್ರಸಾದ ವೆಲ್ಲಿಹದೊ? ಬಯಲ ಸುಟ್ಟು ನೀರ ಹೊಯ್ದು ನಡೆವ ಸಾರಾಯಂಗಲ್ಲದೆ ಜಂಗಮಪ್ರಸಾದವೆಲ್ಲಿಹದೊ? ಹಾಳುಮಾಡಿ ಸುಳಿದು ತುಂಬಿಸಿ ನಡೆವ ಧೀರಂಗಲ್ಲದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ನಿಜಪ್ರಸಾದವೆಲ್ಲಿಹದೊ?
--------------
ದೇಶಿಕೇಂದ್ರ ಸಂಗನಬಸವಯ್ಯ