ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಳಗಿನ ಮಾಟ ಸಿಕ್ಕಲರಿಯದಿರ್ದಡೆ ಹೊರಗೆ ಕಾಣಿಸುವ ತನು, ತನುವಿಡಿದ ಮನ, ಮನವಿಡಿದ ಭಾವ, ಈ ತ್ರಿವಿಧದಿಂದೆ ನಿರ್ವಂಚಕನಾಗಿ ಷಟ್ಕ್ರಿಯಾವ್ಯಾಪಾರವನೈಯ್ದಿ ಷಟ್‍ಸ್ಥಲಗತಿಮತಿಯಿಂದೆ ಗುರುಲಿಂಗಾಚಾರಭಕ್ತಿಯ ಮಾಡಿ ಸುಖಿಸಿ ಸುಖಮಯನಾದ ಸತ್ಯಭಕ್ತನೇ ಭಕ್ತನಲ್ಲದೆ ಉಳಿದವೆಲ್ಲ ಒಡಲುಪಾದ್ಥಿ. ಈ ನಿಲುವಿಗೆ ನಡೆಗಡಿಯದು ಬಂಧನವಗಲದು ಬಯಲಗಾಣದು ತ್ರಿವಿಧ ವಾಕ್ಯದಲ್ಲರಿದು ನೋಡು ನೀನಾಗಬಲ್ಲರೆ ಗುರುನಿರಂಜನ ಚನ್ನಬಸವಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಒತ್ತೆಯ ಕಾರ್ಯಕ್ಕಾಗಿ ಮಿಥ್ಯವನರಿದಲ್ಲಿ ತಥ್ಯತಪ್ಪಿತ್ತು. ಸಗುಣಕಳೆ ನಿರ್ಗುಣಕ್ಕೆ ಸಲ್ಲದು, ನಿರ್ಗುಣ ಚೈತನ್ಯ ಬೆಳಗ ಕಾಣಲಿಲ್ಲ. ಗುರುನಿರಂಜನ ಚನ್ನಬಸವಲಿಂಗ ತಾನೆಂದೆನಲಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಳ್ಳೆಯತನಕ್ಕೆ ಉಪದೇಶವಾಗಿ ಕಳ್ಳತನವೆರೆದು ಕಡೆಗೆ ವಂಚನೆಯುಳ್ಳರೆ ಆಚಾರವಲಸಿತ್ತು. ಕರ್ಮಕವಿಯಿತ್ತು, ಯುಕ್ತಿಗೆಟ್ಟಿತ್ತು, ಅವಿದ್ಯಾಶಕ್ತಿ ಅಟ್ಟಿಕೊಂಡಿತ್ತು, ಭಕ್ತಿ ಬಯಲಾಯಿತ್ತು, ನಿರಯಮಾರ್ಗವಾವರಿಸಿ ಬಂಧನವನುಣಿಸಿತ್ತು ಗುರುನಿರಂಜನ ಚನ್ನಬಸವಲಿಂಗವನುಳಿದ ಆ ಭಂಗಗೇಡಿಗಳಿಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಳಹೊರಗೆ ತಂದು ಉಲಿದುರಿವ ಸಂಪತ್ತವನರಿವಡೆ ಹಿಂದಣ ಸಿರಿಸುಖಗಳಿಗಳವಲ್ಲ ಕಾಣಾ. ಹೊರಗೊಳಗೆ ತಂದು ಉಲಿದುರಿವ ಸಂಪತ್ತವನರಿವಡೆ ಹೋಗಿ ಬಂದಿರುವ ಪರಿಸುಖಿಗಳಿಗಳವಲ್ಲ ಕಾಣಾ. ಮತ್ತೆಂತೆಂದೊಡೆ, ಹಾಸಿದ ಶರಗ ಹಸದ ಭಾಷೆಬದ್ಧ ಭಾವಜ್ಞರರಿವರು ನೋಡಾ ನಿಮ್ಮ ಶರಣರ ಘನವ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಂದು ವಿಷಯಕೆ ಮನೆಯ ನೋಡಿ ಮಾಡುವರು ತನುಗುಣವ ತಪ್ಪಿಸಿ ತರಲರಿಯದವರು. ಒಂದು ವಿಷಯಕೆ ಧನವ ನೋಡಿ ಮಾಡುವರು ಪ್ರಾಣನಗುಣವ ತಪ್ಪಿಸಿ ತರಲರಿಯದವರು. ಒಂದು ವಿಷಯಕೆ ನೆರವಿಯ ನೋಡಿ ಮಾಡುವರು ಭಾವದಗುಂಜ ತಪ್ಪಿಸಿ ತರಲರಿಯದವರು. ಈ ಸಂಬೋಧೆಯ ಆಸೆಗಿಕ್ಕಿ ಹೇಸದೆ ಘಾಸಿಯಾಗುವ ಪ್ರಾಣಿಗಳು ತಮಗೆ ಗುರುತ್ವ ಸಹಜವೆ ಅಲ್ಲ. ಮತ್ತೆಂತೆಂದೊಡೆ : ಭೂಷಣವಿಲ್ಲದ ಶಿಷ್ಯಂಗೆ ಗುಣವಿಲ್ಲದ ಗುರುವು ಅಣಕದನುಗ್ರಹ ಎಣಿಕೆಗೆಬಾರದು ನಮ್ಮ ಗುರುನಿರಂಜನ ಚನ್ನಬಸವಲಿಂಗದ ಶರಣಚಾರಿತ್ರದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಂದು ಹಿಡಿತೆಗೆ ಬಂದು ಕವಿದ ಕಾಳಗತ್ತಲೆಯ ಹರಿದು ಬಂದ ಬರವಿಂಗೆ, ಚಿತ್ಕಾಂತನೊಲಿದು ಸದ್ರೂಪ ಸಲೆನಿಂದು, ನೋಡಿ ನೋಡಿ, ಕಳೆದು ಕಣ್ದೆರಪ ಮಾಡಿ, ಕರುಣಿಸಿ ಸಲಹಿದ ನಿತ್ಯನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಳಗಣ ಗಂಟಬಿಚ್ಚಿತಂದ ಹೊರಗಣ ವ್ಯವಹಾರಿಗಳನೇಕರುಂಟು. ಹೊರಗಣ ಗಂಟಬಿಚ್ಚಿ ಒಳಗೊಯ್ದು ವ್ಯವಹಾರಗೊಂಬ ಜಾಣರಾರು ಹೇಳಾ ? ಇದು ಕಾರಣ, ನಿಮ್ಮ ಶರಣ ಒಳಹೊರಗರಿಯದೆ ವ್ಯವಹಾರದಲ್ಲಿ ಪರವಶನಾಗಿ ಮರೆದಿರ್ದ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಡದು ಮೂಡಿ ನಿಗುರಿ ನೋಡಿ ಕಡಿದು ಬಿಸಾಟಿದಲ್ಲಿ ಬೆಂಕಿ ಹುಟ್ಟಿತ್ತು ನೋಡಾ ! ಬೆಂಕಿಪುರುಷನ ಸಂಗದಿಂದೆ ಮಂಗಲಮಹಿಮನ ಕಂಡು ಅಂಗಳದಲ್ಲಿ ಕೂಡಿದರೆ, ಮನೆ ಸುಟ್ಟು ಹಾವೆದ್ದು ಕಿಚ್ಚ ಹಿಡಿದು ಮೇಲು ಮಂಟಪಕ್ಕೆ ನೆಗೆಯಲು, ಉರಿಯ ಬೆಳಗಿನೊಳಗಿರ್ದ ಗುರುನಿರಂಜನ ಚನ್ನಬಸವಲಿಂಗದಂಗವ ಬೆರೆದು ಚರಿಸುವ ಲೀಲೆಯ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಡಲಿಚ್ಫೆಗೆ ಉಪಾಧಿವಿಡಿದು ಅನುಸರಣೆಯಿಂದೆ ಅಳಿಕಿ ನಡೆವುದು ಮಾಯಾಮೋಹಿತರಿಗಲ್ಲದೆ ನಿಸ್ಸೀಮ ನಿರೂಪಾಧಿ ನಿಜಜಂಗಮಕ್ಕೆಲ್ಲಿಹದೊ ? ತನುವಿನ ರತಿಯ ಮನದ ಮೋಹ ಪ್ರಾಣನ ಗತಿ ರಮ್ಯ ಗಂಜಳ ಗಲಭೆಗಳಿಗಲ್ಲದೆ ತನುಶಕ್ತಿ ಪ್ರಾಣಮುಕ್ತಿ ಮನಯುಕ್ತಿಯುತ ಮಹಿಮರಿಗೆಲ್ಲಿಹದೊ ! ಇಹಪರದಲ್ಲಿರ್ದು ಇಹಪರವರಿಯದ ಇಹಪರಗತಿಮತಿಯಿಂದೆ,
--------------
ದೇಶಿಕೇಂದ್ರ ಸಂಗನಬಸವಯ್ಯ
ಒಂದನಾಡಹೋಗಿ ಮತ್ತೊಂದನಾಡುವರು. ಹಿಂದೆ ಹೋದುದ ಮುಂದೆ ತಂದಿಡುವರು. ಮುಂದಿನ ಮಾತ ಹಿಂದಕ್ಕೆ ನೂಕುವರು ಇಲ್ಲದುದನುಂಟುಮಾಡಿ ಗಂಟನಿಕ್ಕಿ ನೋಯಿಸುವರು. ಗುರುಹಿರಿಯರ ಮತ್ತೆ ತಾವು ಶರಣರೆಂದು ನುಡಿವರು. ಇಂತಾ ತ್ರಿವಿಧದ್ರೋಹಿಗಳನೆಂತು ಶರಣರೆನ್ನಬಹುದು? ಅಯ್ಯಾ ನಿಮ್ಮವರ ಕವಳಿಕೆಗೆ ಸಲ್ಲದ ಕರ್ಮಿ ಪಾಪಿಗಳನೆನ್ನತ್ತ ತೋರದಿರಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಪ್ಪಿಮಾಡಿದ ಮಾಟದೊಳಗೆ ಒತ್ತೊತ್ತಿ ತಪ್ಪನರಸಲುಂಟೆ ? ತಪ್ಪನರಸಿ ತಂದುತೋರಿದರೆ ಹಾನಿಯೆತ್ತಣಕೆ ನೋಡಾ ! ಒಮ್ಮೆ ಶಾಂತಿ ಧರಿಸಿ ಅಹುದೆಂದು, ಒಮ್ಮೆ ಅಶಾಂತಿ ಧರಿಸಿ ಅಲ್ಲವೆಂದೊಡೆ, ಬಂಧನದ ಬರವು ಸಂದೇಹವಿಲ್ಲದ ಮುಖ್ಯರ ಸಂಬಂಧಿಸಿಕೊಂಡರಿ ನಮ್ಮ ಗುರುನಿರಂಜನ ಚನ್ನಬಸವಲಿಂಗದ ಸ್ಥೂಲ ತತ್ವವಿಲಾಸ ನೀನಾಗಬೇಕಾದಡೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಂಬತ್ತನೊಳಕೊಂಡು ಒಂದೇ ಪೂಜೆಯೆಂಬ ಹಾಗೆ ನವನಾಳಸೂತ್ರವಪ್ಪ ಪಲವು ಪ್ರಕೃತಿಯನೊಳಕೊಂಡು ತೋರುವ ಆತ್ಮವೊಂದೆ ಪೂಜೆಯಾಗಿಪ್ಪುದು. ಆ ಒಂದೇ ಆತ್ಮನನರಿದು ಮರೆತಲ್ಲಿ ಗುರುನಿರಂಜನ ಚನ್ನಬಸವಲಿಂಗವು ಶೂನ್ಯ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಡೆತನದ ಪೆರ್ಚುಗೆಯ ಕಾಣಿಸಿಕೊಂಬ ಬೆಡಗುವಿದೇನೋ! ಉಸುರಿನ ಉಲುಹು ಕಂಚು ಚರ್ಮಾದಿ ಸಕಲ ಧನದೊಳು ಮೆರೆಯಲ್ಯಾಕೊ ನಿಜದ ನಿಲುವಿಂಗೆ! ಮಧು ಚೂತಫಳ ಶರ್ಕರ ತಮ್ಮ ಬೀರಲಿಲ್ಲ. ಅರಿದಾಚರಿಸು ಕಡೆಯ ನೆರೆಯಲಾಪಡೆ ಕುರುಹನಿಕ್ಕದಿರು ಗುರುನಿರಂಜನ ಚನ್ನಬಸವಲಿಂಗ ಲಾಂಛನಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಳಗಿಲ್ಲದ ಹೊರಗಿಲ್ಲದ ತೆರಹಿಲ್ಲದ ಪರಿಪೂರ್ಣಲಿಂಗಕ್ಕೆ ಮಾಡಿ ಕೆಟ್ಟರು ಮನಮುಖಹಿರಿಯರು, ನೀಡಿ ಕೆಟ್ಟರು ತನುಮುಖಹಿರಿಯರು, ಕೂಡಿ ಕೆಟ್ಟರು ಭಾವಮುಖಹಿರಿಯರು, ಇದನರಿದು ನಾನು ಮಾಡದೆ ನೀಡದೆ ಕೂಡದೆ ಮಾಡಿ ಭವಗೆಟ್ಟೆ, ನೀಡಿ ನಿರ್ಮಲವಾದೆ, ಕೂಡಿ ನಾನು ಕೆಟ್ಟೆ, ನಿನ್ನನರಿಯದಿರ್ದೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಂದೆರಡು ಬಾಗಿಲದಾಟಿ ಉತ್ತರದಕ್ಷಿಣ ಗೊತ್ತಿನ ಗೊರವರ ಮನೆಯ ಮುಂದೆರಡು ನಂದಾದೀವಿಗೆಯ ಮಂಟಪದೊಳಗೆ ಸೂರ್ಯೇಂದು ವಹ್ನಿಕೋಟಿಪ್ರಭಾಮಯನಾಗಿತೋರುವ ಪರಮಪ್ರಾಣಲಿಂಗವನು ತೆರಹಿಲ್ಲದೆ ಕಂಡು ಕೂಡಿ ಸುಖಿಸಬಲ್ಲ ಸುಜ್ಞಾನಿ ಶರಣನ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ