ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧನದಲ್ಲಿ ಮಕಾರಸ್ವರೂಪವಾದ ಸ್ವಯಂ ಜಂಗಮವನರಿದರ್ಚಿಸಬಲ್ಲಾತನೆ ಶರಣ. ಮಮಕಾರದಲ್ಲಿ ವಕಾರಸ್ವರೂಪವಾದ ಚರಜಂಗಮವನರಿದರ್ಚಿಸಬಲ್ಲಾತನೆ ಶರಣ. ಸಂಗ್ರಹದಲ್ಲಿ ಓಂಕಾರಸ್ವರೂಪವಾದ ಪರಜಂಗಮವನರಿದರ್ಚಿಸಬಲ್ಲಾತನೆ ಶರಣ. ಈ ತ್ರಿವಿಧಜಂಗಮವನರಿದರ್ಚಿಸಬಲ್ಲಾತಂಗಲ್ಲದೆ ಶರಣಸ್ಥಲವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಧರೆಯನು ಧೂಳದಲ್ಲಿ ಬೆಳಗಿ, ನೀರನು ಜಲದಲ್ಲಿ ತೊಳೆದು, ಕಿಚ್ಚನು ಕೆಂಡದಲ್ಲಿ ಸುಟ್ಟು, ಗಾಳಿಯನು ವಾತದಲ್ಲಿ ತಿರುಹಿ, ಆಕಾಶವನು ಬಯಲಲ್ಲಿ ಬಗೆದು, ತನ್ನನು ತನ್ನಲ್ಲಿ ನೋಡಿ ಮಾಡಿ ಪೂಜಿಸಿ ಸುಖಿಸಲರಿಯದೆ ಪಂಚ ಪಂಚವರ್ತನಾಭಾವದ ಕಳೆಯಲ್ಲಿ ಬೆಳೆದು ತೋರಿ ಮಾಡಿ, ಮಾಟಕೂಟದ ಕೋಟಲೆಯೊಳಗೆ ಭಂಗಿತರಾದರು. ಅದು ಕಾರಣ ಚನ್ನ ಬಿಂದು ನಾದ ಕಳೆ ಪ್ರಸನ್ನಮೂರ್ತಿ ಲಿಂಗವು ಅಲ್ಲಿಯೇ ಹಿಂಗಿರ್ದನು ನಿರ್ಮಲಹೃದ್ಬೆಳಗಿನಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಧನರತಿಯುಳ್ಳ ಸೂಳೆಯ ಮನ ಭುಜಂಗನ ರತಿವೆರಸದುಪಚಾರದಂತೆ. ಪದಫಲ ರತಿಭಕ್ತನ ಮನಸ್ಸು ನಿಜವೆರಸದೆ ಪೂಜೆ ಗಜೆಬಜೆಯಾಯಿತ್ತು ಗುರುನಿರಂಜನ ಚನ್ನಬಸವಲಿಂಗದ ಬೆಳಗನರಿಯದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಧರೆ ಗಗನದಲ್ಲಿರ್ದು ಬಯಲ ಕುರುಹರಿಯದೆ ಬಡಿದಾಡಿ ಮಡಿದು ಹೋದರು ಅನಂತ ಹಿರಿಯರು. ಇದ ಕಂಡು ಮರಳಿದರೆ ಮನದೊಡೆಯ ನೀ ಸಾಕ್ಷಿ. ಮಧ್ಯಮಂಟಪದೊಳಗಿಪ್ಪ ಶುದ್ಭಧನವೆಲ್ಲ ಚಿದ್ರೂಪಗಲ್ಲದೆ ಮತ್ತೊಂದನರಿಯದ ಭಾವ ಗುರುನಿರಂಜನ ಚನ್ನಬಸವಲಿಂಗ ನಿಮ್ಮಾಣೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಧನಗಂಡನ ಬೆಲೆವೆಣ್ಣಿನ ಗಲಭೆಯ ಸೌಖ್ಯದಂತೆ ನಲಿನಲಿದಾಡುವ ಸುಳುಹಿಂಗೆ ಸುಳುಹಿನ ಸುಖದ ಮುಖವಿಲ್ಲ ಕಾಣಾ. ಅದು ಕಾರಣ, ನಿಮಿಷ ಬೇಟದೊತ್ತಿಂಗೆ ಲಾಭವನರಿಯದೆ ಅನಿಮಿಷ ಬೇಟದೊತ್ತೇ ಅನುಪಮವಾದಲ್ಲಿ ಆತನೇ ಅಚ್ಚ ಶರಣ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ