ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚಂಗಳೆಯಮ್ಮನ ಭಾವದೊಳ್ಮುಳುಗಿ ಪಂಚಾಚಾರಸ್ವರೂಪನಾಗಿರ್ದೆಕಾಣಾ. ನಂಬಿಯಕ್ಕನ ಭಾವದೊಳ್ಮುಳುಗಿ ಮಂತ್ರಾತ್ಮಸ್ವರೂಪನಾಗಿರ್ದೆ ಕಾಣಾ. ಚೋಳಿಯಕ್ಕನ ಭಾವದೊಳ್ಮುಳುಗಿ ನಿರೀಕ್ಷಣಾಸ್ವರೂಪನಾಗಿರ್ದೆ ಕಾಣಾ. ನೀಲಲೋಚನೆಯಮ್ಮನ ಭಾವದೊಳ್ಮುಳುಗಿ ಯಜನಸ್ವರೂಪನಾಗಿರ್ದೆ ಕಾಣಾ. ಅಮ್ಮವ್ವೆಯರ ಭಾವದೊಳ್ಮುಳುಗಿ ಸ್ತೌತ್ಯಸ್ವರೂಪನಾಗಿರ್ದೆ ಕಾಣಾ. ಮಹಾದೇವಿಯರ ಭಾವದೊಳ್ಮುಳುಗಿ ವೇದಿಸ್ವರೂಪನಾಗಿರ್ದೆ ಕಾಣಾ. ಇಂತು ಎನ್ನ ಮಾತೆಯರ ಭಾವದೊಳು ಸಮರಸವಾಗಿ ಮುಕ್ತಾಯಕ್ಕನ ಗರ್ಭದೊಳು ನಿತ್ಯಪ್ರಸಾದಿಯಾಗಿರ್ದೆನು ಕಾಣಾ ಗುರುನಿರಂಜನ ಚನ್ನಬಸವಲಿಂಗಾ ನೀ ಸನ್ನಿಹಿತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಿದ್ಬಿಂದುಮುಖದಿಂದ ಭಾವಿಸಿ ಮಾಡುವುದು, ಚಿನ್ನಾದ ಮುಖದಿಂದ ಭಾವಿಸಿ ನೋಡುವುದು, ಚಿತ್ಕಲಾಮುಖದಿಂದ ಭಾವಿಸಿ ಕೂಡುವುದು, ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗವನು ಅರಿವರಿತರಸುವಣ್ಣಗಳು ಸುಯಿಧಾನಭಕ್ತಿ ಸುಲಭರಿದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಿತ್ಕಾಯದ ತಿರುಳ ಲಿಂಗದಲ್ಲಿ ಅರಿದು ಸಂಗಸಂಯೋಗಿ ನೋಡಾ, ಚಿನ್ಮಾನಸದ ತಿರುಳ ಲಿಂಗದಲ್ಲರಿದು ಕೂಟಸಂಯೋಗಿ ನೋಡಾ, ಚಿದ್ಭಾವದ ತಿರುಳ ಲಿಂಗದಲ್ಲರಿದು ಸಮರಸಸಂಯೋಗಿ ನೋಡಾ, ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಲಿಂಗಪ್ರಾಣೈಕ್ಯನ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಂದ್ರ ಮೂಡಿದನಂತೆ, ಚಂದ್ರಿಕೆಯೊಳು ನಿಂದು ನೋಡಿದನಂತೆ, ಎಮ್ಮೊಡೆಯನ ಕುತ್ತಿಗೆಯ ಕೊಯ್ದನಂತೆ, ಎಮ್ಮೊಡತಿಯ ಮೊಲೆ ಮೂಗ ಹರಿದು ಹಾಕಿದನಂತೆ, ಗಾರುಡಿಗನಾಟವ ಕಲಿತುಕೊಂಡನಂತೆ, ನಮ್ಮೆಲ್ಲರ ಕೊಂದು ಕೊಂಬುವನಂತೆ, ನಿರಂಜನ ಚನ್ನಬಸವಲಿಂಗನಂತೆ, ಬಲ್ಲಕಡೆಗೆ ಹೋಗುವ ಬನ್ನಿರತ್ತತ್ತ ಅರಿಯದಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಿತ್ತವನಡಗಿಸಿ ಬಂದವರು ಭಕ್ತೈಕ್ಯಪದಸ್ಥರಹರೆ ? ಬುದ್ಭಿಯನಡಗಿಸಿಬಂದವರು ಮಹೇಶ್ವರೈಕ್ಯಪದಸ್ಥರಹರೆ ? ಅಹಂತೆಯನಡಗಿಸಿ ಬಂದವರು ಪ್ರಸಾದಿಯೈಕ್ಯಪದಸ್ಥರಹರೆ ? ಮನವನಡಗಿಸಿ ಬಂದವರು ಪ್ರಾಣಲಿಂಗಿಯೈಕ್ಯಪದಸ್ಥರಹರೆ ? ಜ್ಞಾನವನಡಗಿಸಿ ಬಂದವರು ಶರಣೈಕ್ಯಪದಸ್ಥರಹರೆ ? ಭಾವವನಡಗಿಸಿ ಬಂದವರು ನಿಜೈಕ್ಯಪದಸ್ಥರಹರೆ ? ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚರಣಗತಿ ಸದ್ಗಮನ, ಹಸ್ತಗತಿ ಸದ್ಭಕ್ತಿ, ಜಿಹ್ವೆಗತಿ ಸದ್ವಾಕ್ಯ, ನೇತ್ರಗತಿ ಅಭಿನ್ನನೋಟ, ಶ್ರೋತ್ರಗತಿ ಶಿವಾನುಶ್ರುತಿ, ಘ್ರಾಣಗತಿ ಸದ್ವಾಸನೆ, ಮನಗತಿ ಸಮ್ಯಕ್‍ಜ್ಞಾನ, ಭಾವಗತಿ ಮಹಾನುಭಾವ. ಇಂತೀ ಸನ್ನಿಹಿತ ಶರಣನು ಪರಮಪ್ರಸಾದಮೂರ್ತಿ ತಾನೆ ಅಲ್ಲದೆ ಅನ್ಯವಿಲ್ಲ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನ ಪರಿ ಆವ ದೇಶದೊಳಗೂಯಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಿದಾತ್ಮನೇ ಅಂಗವಾದ ಶರಣ ಚಿತ್ಪೃಥ್ವಿಯೇ ತನ್ನಂಗವಾಗಿ ಆಚಾರಲಿಂಗೈಕ್ಯವನರಿದು ಬಂದನಯ್ಯಾ. ಚಿದಪ್ಪುವೇ ತನ್ನಂಗವಾಗಿ ಚಿದ್ಗುರುಲಿಂಗೈಕ್ಯವನರಿದು ಬಂದನಯ್ಯಾ. ಚಿದಗ್ನಿಯೇ ತನ್ನಂಗವಾಗಿ ಚಿಚ್ಫಿವಲಿಂಗೈಕ್ಯವನರಿದು ಬಂದನಯ್ಯಾ. ಚಿದ್ವಾಯುವೇ ತನ್ನಂಗವಾಗಿ ಚಿಜ್ಜಂಗಮಲಿಂಗೈಕ್ಯವನರಿದು ಬಂದನಯ್ಯಾ. ಚಿದಾಕಾಶವೇ ತನ್ನಂಗವಾಗಿ ಚಿತ್ಪ್ರಸಾದಲಿಂಗೈಕ್ಯವನರಿದು ಬಂದನಯ್ಯಾ. ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣ ಚಿನ್ಮಹಾಲಿಂಗೈಕ್ಯವನರಿದು ಚಿದ್ರೂಪವಾಗಿರ್ದ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಿತ್ಕಲೆ ನೀಲಮ್ಮನವರ ಪದಸ್ಪರ್ಶನದಿಂದೆ ಕಾಯಶೂನ್ಯನಾದೆ. ಅಕ್ಕಮಹಾದೇವಿಗಳ ಪದಸ್ಪರ್ಶನದಿಂದೆ ಕರಣಶೂನ್ಯನಾದೆ. ನಾಗಲಾಂಬಿಕೆಯರ ಪದಸ್ಪರ್ಶನದಿಂದೆ ಪ್ರಾಣಶೂನ್ಯನಾದೆ. ಮುಕ್ತಾಯಕ್ಕಗಳ ಪದಸ್ಪರ್ಶನದಿಂದೆ ಭಾವಶೂನ್ಯನಾದೆ ಗುರುನಿರಂಜನ ಚನ್ನಬಸವಲಿಂಗದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಂದ್ರಸೂರ್ಯರ ಬೆಳಗಿನಲ್ಲಿ ಆಡುವ ಮಡದಿ ಪುರುಷರನುವ ಕಂಡಾಡು. ಅತ್ತಲವರು ಬಂದಡೆ, ಮತ್ತೇನೆಂದು ಬೆಸಗೊಳ್ಳಬಾರದು. ಅಹಮ್ಮೆನ್ನದ ಅರ್ಥವ ತಂದು, ಸೋಹಮ್ಮೆಂಬ ಕುಳಕಿತ್ತಡೆ, ದಾಸೋಹಂ ಭಾವ ಧರಿಸುವದು. ಗುರುನಿರಂಜನ ಚನ್ನಬಸವಲಿಂಗದಲಿ
--------------
ದೇಶಿಕೇಂದ್ರ ಸಂಗನಬಸವಯ್ಯ
ಚರಲಿಂಗ ಗುರುಹಿರಿಯರ ಜರಿಯಬಾರದೆಂದು ಹೇಳುವಿರಿ. ಬಾಳೆಯೆಲೆಯಮೇಲೆ ತುಪ್ಪವತೊಡದಂತೆ, ನಿಮ್ಮ ಔದುಂಬಫಳ ಛಾಯ ನುಡಿಯ ತೆಗೆದಿಡಿರಿ. ಜಂಗಮಲಿಂಗ ಗುರುಹಿರಿಯರನರಸುವರೆ ಜ್ಞಾನಿಗಳು? ಅವರ ಕಾಯ್ದಿಪ್ಪ ತನು ಮನ ಭಾವ ವಿಕೃತಿಯನರಸುವರಲ್ಲದೆ. ಅದೇನು ಕಾರಣವೆಂದೊಡೆ: ತನು ಮನ ಭಾವವಿಡಿದಿರ್ಪ ಜನರನ್ನು ಒಂದು ವೇಳೆ ತಿಳಿಸಿಕೊಳ್ಳಬಹುದು; ಅಳಿದುಳಿದಂಗಲಿಂಗಸಂಬಂಧಿಗಳೆಂದು ನುಡಿದು ಅಳಿದಲ್ಲಿ ಉಳಿದರೆ ಅದು ಮಲದೇಹಿ, ಮರಳಿ ಶುದ್ಧವಾಗದು ನೋಡಾ. ಹೇಮ ಮೌಕ್ತಿಕದಂತೆ ಅರಿದಾಚರಿಸುವುದು ಗುರುನಿರಂಜನ ಚನ್ನಬಸವಲಿಂಗ ಪ್ರಸಾದಿಯಾಗಬೇಕಾದರೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಂದ್ರಮೌಳಿಯೆನಿಸಿಕೊಂಡು ಕಾಮನನುರುಹಿದನೆಂದರೆ ನಗೆ ಬಂದಿತ್ತೆನಗೆ. ಮಾಯಾಕೋಲಾಹಲನೆನಿಸಿಕೊಂಡು ಮುಡಿಯಲ್ಲಿ ಹೆಣ್ಣ ತಳೆದನೆಂದರೆ ನಗೆ ಬಂದಿತ್ತೆನಗೆ. ನಿಃಕಲಗುರುನಿರಂಜನ ಚನ್ನಬಸವಲಿಂಗವೆನಿಸಿಕೊಂಡು ಎನಗೆ ಪತಿಯಾಗಿ ಭೋಗಿಸುವುದ ಕಂಡು ನಗೆ ಬಂದಿತ್ತು ಎನ್ನೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಚಿದ್ಘನಪ್ರಸಾದಕ್ಕಂಗವಾದ ಚಿನ್ಮಯ ಶರಣರ ಘನವನರಿಯದೆ, ನಾವು ಫಲಪದಕ್ಕೆಳಸದ ಸದಮಲ ದಾಸೋಹಿಗಳೆಂದು, ಮದನಾರಿಯ ವೇಷವ ಧರಿಸಿ, ಇತರ ಇಂಗಿತವನರಿಯದೆ ಹದುರ ಚೆದುರಿನಿಂದೆ ಮದಮಾನವರ ಹೃದಯಕರಗಿಸಿ, ಸಹಜ ನಿರೂಪಾಧಿಗಳುಳಿದು ದುರ್ವುಪಾಧಿಯೊಳು ನಿಂದು ಭಕ್ತ ಮಹೇಶ್ವರರುಗಳಿಗೆ ಮಾಡುವೆನೆಂದು ಭೂತಜನಕಿಕ್ಕಿ ಲೆಕ್ಕವ ಹೇಳಿ ಅಕ್ಕರೆಯಿಂದೆ ಮುಕ್ಕಣ್ಣನ ಪದವೆಮಗೆಂದು ಹೆಚ್ಚುಗೆವಡೆದು ಒಕ್ಕಲು ಸಹಿತ ಉದರ ಹೊರೆವ ಮುಕ್ಕ ಭಂಗಿತರಿಗಿಕ್ಕಿದ ಭಾವತೊಡರು ಸಹಜವೆಂದು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರು ಗಹಗಹಿಸಿ ಮಿಕ್ಕಿ ನಿಂದರು.
--------------
ದೇಶಿಕೇಂದ್ರ ಸಂಗನಬಸವಯ್ಯ