ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಪಾಧಿವಿಡಿದು ಮಾಡುವ ಭಕ್ತನ ಮನೆಯ ಕೆಟ್ಟಕೂಳ ತಿನ್ನಲಾಗದು ಶಿವಜ್ಞಾನಿಗಳು. ಅದೇನು ಕಾರಣವೆಂದೊಡೆ : ಲಿಂಗತ್ರಯವನು ಮಾರಿ ಅಂಗತ್ರಯವನು ತುಂಬಿ ಮಂಗಲಮಹಿಮರೆಂದು ಭಂಗವಿಟ್ಟಾಡುವ ಜಂಗುಳಿಗಳ ಸಂಗ ಸಹಪಂಕ್ತಿ ಪಂಚಮಹಾಪಾತಕವೆಂದು ಕಂಗಳಿಂದೆ ನಿರೀಕ್ಷಿಸಲೊಲ್ಲರು ನಮ್ಮ ಗುರುನಿರಂಜನ ಚನ್ನಬಸವಲಿಂಗದ ನಿಜಶರಣರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಉರಿ ಕರ್ಪುರಸಂಗದಿಂದೆ ಉರಿಕರ್ಪುರ ಉಂಟೆ? ಭ್ರಮರ ಕಾಪುಳಸಂಗದಿಂದೆ ಭ್ರಮರಕಾಪುಳ ಉಂಟೆ? ಪರುಷ ಲೋಹಸಂಗದಿಂದೆ ಪರುಷಲೋಹವುಂಟೆ? ಶರಣ ಸಂಸಾರಸಂಗದಿಂದೆ ಶರಣಸಂಸಾರವುಂಟೆ? ಇದು ಕಾರಣ ನಾ ಮುಟ್ಟಿ ನೀನುಂಟು ನೀ ಮುಟ್ಟಿ ನಾಮುಂಟೆ ಹೇಳಾ ಗುರುನಿರಂಜನ ಚನ್ನಬಸವಲಿಂಗಾ?
--------------
ದೇಶಿಕೇಂದ್ರ ಸಂಗನಬಸವಯ್ಯ
ಉಲುಹನಡಗಿಸಿ ಹೆಜ್ಜೆಯನೊಲವಿಂದೆ ನಲ್ಲಂಗೆ ಹೆಚ್ಚಿಸಿ ಬೆಳಗಿನೊಳಗಿರಬಲ್ಲರೆ ಪತಿವ್ರತೆ. ಸಕಲ ಕಲೆಗಳ ಕಣ್ಣಿನೊಳು ತೋರಿ ಸುಖಿಸಿ ಬೆಳಗಿನೊಳಿರಬಲ್ಲರೆ ಪತಿವ್ರತೆ. ಕೈ ಕುಶಲ ನುಡಿಗೂಡಿ ನೆರೆದು ಸುಖಬೆಳಗಿನೊಳಗಿರಬಲ್ಲರೆ ಗುರುನಿರಂಜನ ಚನ್ನಬಸವಲಿಂಗಕ್ಕಂಗವಾದ ಪ್ರಾಣಲಿಂಗಿ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಉಚ್ಫಿಷ್ಟವ ಕಳೆದುಳಿದ ಪದಾರ್ಥ ಪ್ರಸಾದವಾಗಿ ನಿಂದಲ್ಲಿ ಅಂಗವೆನ್ನೆ ಲಿಂಗವೆನ್ನೆ ಹಸ್ತವೆನ್ನೆ ಮುಖವೆನ್ನೆ ಶಕ್ತಿಯೆನ್ನೆ ಭಕ್ತಿಯೆನ್ನೆ ಅಷ್ಟಾವಧಾನವಿಲ್ಲದೆ ನೆಟ್ಟನೆ ಗುರುನಿರಂಜನ ಚನ್ನಬಸವಲಿಂಗವಾಗಿ ಹಿಂಗಿನುಡಿವ ಶಬ್ದಕ್ಕೆ ಇಂಬುಗಾಣೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಉರಿಯೊಳು ಮುಳುಗಿದ ತಾವರೆಯ ಕುಸುಮದ ತಂದು ಮೂಸಿದರೆ ಸದ್ವಾಸನೆಯ ತೋರಲರಿಯದು. ಗುರೂಪದೇಶವಾದ ಹೃದಯಕಮಲವನು ತಾಪತ್ರಯ ಉರಿಯೊಳು ಹಾಕಿದಾತನ ಹೃದಯದಲ್ಲಿ, ನಿಜಾನುಭಾವದ ವಾಸನೆ ಶಿವಶರಣರಿಗೆ ತೋರಲರಿಯದು ಗುರುನಿರಂಜನ ಚನ್ನಬಸವಲಿಂಗಕ್ಕೆ ಅಯೋಗ್ಯ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಉದಕದಲ್ಲುದಯಿಸಿದ ಪ್ರಾಣಿಗಳು ಉದಕದಲ್ಲಿ ಸ್ಥಿತಿ, ಉದಕದಲ್ಲಿ ಮರಣವಲ್ಲದೆ ಬೇರೆ ಹೇಳಲುಂಟೆ? ದುರ್ಮಾಯಾ ಸಂಸಾರದಲ್ಲಿ ಹುಟ್ಟಿದ ಅನಿತ್ಯಜನರಿಂಗೆ ಆ ದುರ್ಮಾಯಾ ಸಂಸಾರದಲ್ಲಿಯೇ ಸ್ಥಿತಿ. ಆ ದುರ್ಮಾಯಾ ಸಂಸಾರದಲ್ಲಿಯೇ ಮರಣವಲ್ಲದೆ, ಗುರುಕರದಲ್ಲುದಿಸಿ ಸರ್ವಾಚಾರಸಂಪತ್ತೆಂಬಾಚರಣೆ ಚರಿತೆಯಲ್ಲಿ ಬೆಳೆದು ಪರಬ್ರಹ್ಮ ಪರದಲ್ಲೇ ನಿರ್ವಯಲೆಂಬ ನಿಜಶರಣಪದವೆಂತು ಸಾಧ್ಯವಪ್ಪುದು ಹೇಳಾ ಗುರುನಿರಂಜನ ಚನ್ನಬಸವಲಿಂಗಾ?
--------------
ದೇಶಿಕೇಂದ್ರ ಸಂಗನಬಸವಯ್ಯ
ಉಚ್ಫಿಷ್ಟವ ಕಳೆದುಳಿದು ಪದಾರ್ಥ ಪ್ರಸಾದವಾಗಿ ನಿಂದಲ್ಲಿ ಅಂಗವೆನ್ನೆ ಲಿಂಗವೆನ್ನೆ ಹಸ್ತವೆನ್ನೆ ಮುಖವೆನ್ನೆ ಶಕ್ತಿಯೆನ್ನೆ ಭಕ್ತಿಯೆನ್ನೆ ಅಷ್ಟಾವಧಾನವಿಲ್ಲದೆ ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ ಹಿಂಗಿನುಡಿವ ಶಬ್ದಕ್ಕೆ ಇಂಬುಗಾಣೆ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಉರಿಯ ಸೀರೆಯನುಟ್ಟ ವನಿತೆಯರ ಶರಗ ಹಿಡಿದುಬರುವವರಾರೊ! ಹಾವಿನ ಹೆಡೆಯ ನೆಗಹಿ ಕಾಲಕುಣಿಸುತ ಬರುವವರಾರೊ! ತಲೆಯೊಳಗೆ ಕಾಲುಮಡಗಿ ಕಾಲೊಳಗೆ ತಲೆಯ ಮಡಗಿ ಗಗನದುರಿಯ ಹೊಗುವರಾರೊ! ಕೆಳಗಣ ಮೂರುಮನೆಯ ದೀಪವ ತಂದು ಮೇಗಣ ಮನೆಗೆ ಬಂದವರಾರೊ! ಗುರುನಿರಂಜನ ಚನ್ನಬಸವಲಿಂಗಕ್ಕಂಗವಾದ ಪ್ರಾಣಲಿಂಗಿಯೆಂಬೆ ಕಾಣೊ.
--------------
ದೇಶಿಕೇಂದ್ರ ಸಂಗನಬಸವಯ್ಯ