ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯಾ, ನೀವೆನ್ನ ಕರಸ್ಥಲಕ್ಕೆ ಬಂದಿರಾಗಿ ಆನು ತನುಪ್ರಾಣ ಇಷ್ಟಲಿಂಗಿಯಾದೆನು. ಅಯ್ಯಾ, ನಿನ್ನ ಪ್ರಸಾದ ಪಾದೋದಕಕ್ಕೆ ಯೋಗ್ಯನಾದೆ. ಅಜಾತನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಆನು ನೀನೆಂಬ ಕನ್ನಡವಿನ್ನೇಕಯ್ಯ?
--------------
ಸಿದ್ಧರಾಮೇಶ್ವರ
ಅರುವತ್ತಾರು ಕೋಟಿ ಬಂಟರು ಹೆಚ್ಚಿ ಬಾಳಕೆ ಸತ್ತರೆಂದೆನಿದೆ. ಅಟ್ಟೋಗರವನವರ ಹಿಂಡೆಯ ಕೂಳಿಗಿಕ್ಕಿಸಿದೆ ನಾನುಂಬುದೇನು ಹೇಳಾ, ಕಪಿಲಸಿದ್ಧಮಲ್ಲಿನಾಥಾ ನೀನೊಬ್ಬನೆಯಾದೆ.
--------------
ಸಿದ್ಧರಾಮೇಶ್ವರ
ಅಂಗ ಲಿಂಗ್ವ ಒಂದಾದ ಬಳಿಕ [ಅಂ]ಗೇಂದ್ರಿಯಂಗಳಾಚರಿಸಲಾಗದು. ಅಂಗೇಂ್ರಯಂಗಳು ಹೋಗಿ ಲಿಂಗೇಂದ್ರಿಯಂಗಳಾಗಿ ಆಚರಿಸುವುದು. `ಘೃತೋ ಭೂತ್ವಾ ಕಥಂ ಕ್ಷೀರಂ ಭವತ್ಯೇವಂ ವರಾನನೇ' ಎಂಬಾಗಮೋಕ್ತಿ ಪುಸಿಯಾಯಿತ್ತೆ? ಆಗಿ ಆಚರಿಸಿದಡೆ ಭವ ಹಿಂಗದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅಗ್ನಿಲಿಂಗವ ಬ್ರಾಹ್ಮಣ ಪೂಜಿಸಿದ; [ಧರ್ನುಲಿಂಗ]ವ ಕೃತಿಯ ಪೂಜಿಸಿದ; [ಧನ] ಲಿಂಗವ ವೈಶ್ಯ ಪೂಜಿಸಿದ; ಖಡ್ಗಲಿಂಗವ ರಾಜ ಪೂಜಿಸಿದ; ಧಾನ್ಯಲಿಂಗವ ಶೂದ್ರ ಪೂಜಿಸಿದ; ಪರ್ವತಲಿಂಗವ ಶೈವ ಪೂಜಿಸಿದ; ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ ಸಿದ್ಧರಾಮ ಪೂಜಿಸಿದ ನೋಡಾ, ಕೇದಾರ ಗುರುದೇವ.
--------------
ಸಿದ್ಧರಾಮೇಶ್ವರ
ಅಜಲೋಕದೊಳಗಿಪ್ಪ ಬಹುಪರಿಯ ಕುಸುಮಕ್ಕೆ ಬಂದು ಕರಂಗಳು ಬಂದು ಪೀಡಿಸುತ್ತಾ ಬಂಡುಂಬ ತುಂಬಿಯನು ಇಂಬಪ್ಪ ಕುಸುಮವನು ಸಂಭ್ರಮ ನುಂಗಿತಾ ಜ್ಯೋತಿ ಬಂದು ಜ್ಯೋತಿಯನು ಸೂಕ್ಷ ್ಮ ಸಿದ್ಥ್ಧಿಯನು ಹಲವೆನಿಸಿ ರೀತಿಯಾದುದು ದೆಸೆಯ ಪ್ರಬಲಕಾಗಿ ಅಜಾತನ ರೀತಿವಿಡಿದವರೆಲ್ಲಾ ನಿತ್ಯರಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಂದು ಬಸವಣ್ಣ ಬಂದು ಜರಿದು ಹೋದುದ ಮರೆದೆನೆ ಆ ನೋವ! ಜರಿದುದೆ ಎನಗೆ ದೀಕ್ಷೆಯಾಯಿತ್ತು! ಆ ದೀಕ್ಷೆಯ ಗುಣದಿಂದ ಫಲಪದಕ್ಕೆ ದೂರವಾದೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಬಸವಣ್ಣನೆನ್ನ ಪರಮಾರಾಧ್ಯ!
--------------
ಸಿದ್ಧರಾಮೇಶ್ವರ
ಅಯ್ಯಾ ನೀ ಮಾಡಿದಂತಾನಾದೆ ನೀ ಇರಿಸಿದಲ್ಲಿದ್ದೆ ಅಯ್ಯಾ ನೀ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಅನಾಹತ ವಿಶುದ್ಧಿ ಆಜ್ಞೆ ಪ್ರಣವ ಪಂಚಮ ಸಮಾದ್ಥಿಯಲ್ಲಿ ನೀನು ಅನುಭವಿಸಿ ಮುಂದೆ ಇರಿಸುವದ ನಾನಿಂದೆ ಕಂಡೆ. ಅದೇನು ಹದರದಿಂದ? ನಿನ್ನವರು ಎನ್ನನೊಲ್ಲದಿದ್ದಡೆ ಆ ನಿನ್ನ ಪಾದವ ಹಿಡಿದೆ. ನೀ ನಿನ್ನ ಆ ರೂಪಬಿಟ್ಟು ಗುರುವಾಗಿ ಬಂದೆನ್ನ ಭವದ ಬೇರ ಹರಿದೆ. ನಾನರಿವುದೇನರಿದಯ್ಯ. ನೀ ಶುದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀ ಸಿದ್ಧದಲ್ಲಿ ಹೊಕ್ಕಡೆ ಆನೊಡನೆ ಹೊಕ್ಕೆ, ನೀನು ಪ್ರಸಿದ್ಧದಲ್ಲಿ ಪ್ರವೇಶಿಸಿದಡೆ ಆನೊಡನೆ ಪ್ರವೇಶಿಸಿದೆ. ಎನಗಿನ್ನೇನು ಅರಿದಿಲ್ಲ. ಇನ್ನು ಹಿಂದೆ ತಿರಿಗಿ ನೋಡಿದೆನಾಯಿತ್ತಾದಡೆ ಭಕ್ತಿಯ ತೋರಿದ ತಂದೆ, ಎನ್ನ ಭವವ ತಪ್ಪಿಸಿದ ಗುರು ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನ ತದ್ರೂಪಾದ ಬಸವಪ್ರಭುವಿನಾಣೆ.
--------------
ಸಿದ್ಧರಾಮೇಶ್ವರ
ಅರ್ಚಿಸಲು ಬೇಡವದು, ಪೂಜಿಸಲು ಬೇಡ, ನಿತ್ಯ ಜಪತಪನೇಮ ನಿನಗೆ ಬೇಡ. ಸಚ್ಚಿದಾನಂದ ಗುರು ಕಪಿಲಸಿದ್ಧಮಲ್ಲಿಕಾರ್ಜುನನ ಬಸವಾಕ್ಷರತ್ರಯವ ನೆನೆ ನಿತ್ಯಪದವು
--------------
ಸಿದ್ಧರಾಮೇಶ್ವರ
ಅಣ್ಣಗಳು ಕೇಳಿರೆ, ಅಣ್ಣಗಳು ಕೇಳಿರೆ, ಲೋಹಿತೇಶ್ವರದೇವರ ಮರೆ ಬಂದು ಒರಸೀತು, ಸುವರ್ಣದ ಕಳಸ ವೆಚ್ಚವಾದೀತು, ಜಪತಾವಡ ಮಣಿ ಹರಿದಾವು, ಗುರುಹಿರಿಯರೆಲ್ಲಾ ಹೆಡೆಗುಡಿಯ ಕಟ್ಟಿಗೊಳಗಾದಾರು ಕಪಿಲೆ ಬಾಣಸಕ್ಕೆ ಬಂದೀತು, ಸೊನ್ನಲಿಗೆಯ ಪುಣ್ಯಕ್ಷೇತ್ರವಳೀತು ಇಂತೀ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನದೇವರು ಇಲ್ಲಿಯೂ ಇಲ್ಲ, ಅಲ್ಲಿಯೂ ಇಲ್ಲ.
--------------
ಸಿದ್ಧರಾಮೇಶ್ವರ
ಅರಿಯಬಾರದ ಘನವನರಿದು ಸಾದ್ಥಿಸಿ ಗೆದ್ದ ಘನಮಹಿಮ ಶರಣರ ಮುಂದೆ ಎನ್ನ ಪ್ರತಾಪ ನಿಲುಕುವುದೆ? ಅವರಿಪ್ಪರು ಲಂಗಪ್ರಭೆಯೊಳಗೆ; ನಾನಿಪ್ಪೆನು ಅಹಂಕಾರ ಪಂಜರದೊಳಗೆ ಎನ್ನ ನೊಸಲ ಕಣ್ಣಿನ ಕಿಚ್ಚುಡುಗಿ ಲಜ್ಜಿತವಾಗಿ ಮರಳಿ ಬಂದೆನ್ನ ಸ್ತುತಿ ಮುತ್ತಿತ್ತು ನಾನು ಶರಣೆಂಬ ಗುರುವಚನವಿದಿರೆದ್ದು ಕೊಲುವಡೆ, ಕಪಿಲಸಿದ್ಧಮಲ್ಲಿನಾಥನೊಳಗೆ ಅಳಿವೆನಲ್ಲದೆ ಉಳಿವನಲ್ಲ.
--------------
ಸಿದ್ಧರಾಮೇಶ್ವರ
ಅಜ್ಞಾಸಿದ್ಧನನರ್ಚಿಸುವ ಆನಂದಮಯ ಶರಣರ ಧ್ಯಾನ ಮೌನ ಸಮಾದ್ಥಿಗಳ[ದ್ಹೆಂ]ಗೆಂದೊಡೆ; ಪ್ರಸಾದವ ಬಯಸಿ ಪರವನರಿಯಹುದೆ ಧ್ಯಾನ; ಶಿವನಲ್ಲದೆ ಅತಃಪರವಿಲ್ಲೆಂದು ಅನ್ಯರ ಕೂಡೆ ನುಡಿಯಪ್ಪುದೆ ಮೌನ; ವ್ರತವಾರರಲ್ಲಿ ತದ್ಗತವಾಗಿಪುದೀಗ ಸಮಾದ್ಥಿ, ಇಂತಪುದೀಗ ಶಿವಯೋಗ. ಇಂತಪ್ಪವರ ತೋರು, ನಿನ್ನರ್ಚನೆಯನೊಲ್ಲೆ; ಅವರ ಗಡಣ ಸಂಗಮಾತ್ರದಲ್ಲಿ ನಿನ್ನ ಪದವಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಂಗವ ಮರೆವನ್ನಕ್ಕರ, ಲಿಂಗಾ, ನಿಮ್ಮ ಚೆಲುವ ಕಂಗಳು ತುಂಬಿ ನೋಡುತ್ತಲೆಂಪ್ಪೆನೊ! ಪರಿಪರಿಯ ನೋಟದಿಂದ ಹರುಷವನೈದಿಕೊಂಡು ಪರಮೇಕಾಂತದೊಳೆಂದಿಪ್ಪೆನೊ! ವರಗುರು ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಶರಣ ಪ್ರಭುವಿನ ಕರುಣವೆಂದಪ್ಪುದೊ!
--------------
ಸಿದ್ಧರಾಮೇಶ್ವರ
ಅಯ್ಯಾ ಸುಖಾದಿಳು ಬಂದಡೆ ಎನ್ನಿಂದಾಯಿತ್ತೆಂಬೆ. ದುಃಖಾದಿಗಳು ಬಂದಡೆ ನಿನ್ನಿಂದಾಯಿತ್ತೆಂಬೆ. ಅದೇನು ಕಾರಣದಲ್ಲಿ ಕಿಂಚಿತ್ತಕ್ಕೆ ಹಮ್ಮಯಿಸಿ ಹಿಂದಕೆ ಹಾರೈಸುವೆನಾಗಿ ಲೋಕದ ಲೌಕಿಕಗಳಂಥವಂಗೇಕೊಲಿವೆಯಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಂಗದಂತೆ ಲಿಂಗ, ಲಿಂಗದಂತೆ ಅಂಗವಾದ ಬಳಿಕ ಅಂಗದಂತೆ ಲಿಂಗೈಕ್ಯ ಲಿಂಗದಂತೆ ಅಂಗೈಕ್ಯ. ಮನವೆ ಲಿಂಗ, ಲಿಂಗವೆ ಮನವಾದ ಬಳಿಕ, ಮಾತು ಮಾತುಗಳೆಲ್ಲ ಹೊಳ್ಳಾದ ಕಾರಣ ಮಾತೇ ಲಿಂಗೈಕ್ಯ :ಲಿಂಗೈಕ್ಯವೆ ಸ್ವರ! ಶಬ್ದಸಂದಣಿಗಿನ್ನು ತೆರಹುಂಟೆ? ಕಪಿಲಸಿದ್ಧಮಲ್ಲಿನಾಥಯ್ಯಾ, ಇನ್ನು ನಿಮ್ಮ ದೇವರೆಂದು ಅರಸಲುಂಟೋ ಇಲ್ಲವೋ ಎಂಬುದನು ತಿಳಿಹಿಕೊಡಾ ಅಯ್ಯಾ2
--------------
ಸಿದ್ಧರಾಮೇಶ್ವರ
ಅಂದೊಮ್ಮೆ ಜಗನ್ನಾಥ ಭಸ್ಮವ ತೊಡೆದು ಕೈಯ ಬಿರ್ಚಿದರೆ ಕೇಳಿರಣ್ಣ! ಅಣ್ಣ! ಅಣ್ಣ ಕೇಳಿರಣ್ಣ! ಬ್ರಹ್ಮ ತಾ ಮರದೊರಗಿ ವಿಷ್ಣು [ತಾ] ಜುಮ್ಮೆಂದು ವೇದಗಳು ಮತಿಗೆಟ್ಟು ದೆಸೆಗೆ ಬಾಯ ಬಿಟ್ಟವಯ್ಯ! ಎನಿಸೆನಿಸು ಲೋಕಂಗಳು ಅನಿಸು ಬಾಯ ಬಿಟ್ಟವು! ಕೇಳಿರಣ್ಣ! ಅಣ್ಣ! ಅಣ್ಣ! ಕೇಳಿರಣ್ಣ! ತಮ್ಮ ಬಲ ಅವಕುಂಟು ಕೇಳಿರಣ್ಣ! ಆಯುಷ ತನಿಗೆನಿಸೆಂಬುದವೈ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನ ಕೈಯ ಸಬುದಕಣ್ಣಾ
--------------
ಸಿದ್ಧರಾಮೇಶ್ವರ
ಅಯ್ಯಾ, ಸಂಸಾರವೆಂಬ ಹಾಯಿ ಹೊಡೆದು ಆನು ಬೆಚ್ಚ್ತುತ್ತಿದ್ದೇನೆ, ಬೆದರುತ್ತಿದ್ದೇನೆ. ಎಲೆಲೆ ಸಂಸಾರವೈರಿ! ನಿನ್ನವ ನಿನ್ನವ ನಿನ್ನವನೆನಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ, ದೇವರ ದೇವ
--------------
ಸಿದ್ಧರಾಮೇಶ್ವರ
ಅಂಗವಳಿದು ನಿಂದವನೆಂದು ನಾನರಿಯೆ; ಘನಲಿಂಗದಲ್ಲಿ ಸಲೆಸಂದವನೆಂದು ನಾನರಿಯೆ; ಆವ ವೇಷದಲ್ಲಿ ಬಂದು ನಿಂದ ಠಾವನರಿಯೆ; ಕ್ರೋಧವೆಂಬ ಸಂಸಾರದ ಸಾಗರದಲ್ಲಿ ಸಾಧನೆಯ ಮಾಡಲಾಗಿ ಪ್ರಭುದೇವರ ಸುಳುಹು ಅಘಟಿತವಾಯಿತ್ತು ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅಭ್ಯಂತರದಲಿಪ್ಪ ಗಂಡ ಗುರುವಿನ ಅನುಮತದಿಂದ ಸರ್ವಾಂಗಕ್ಕೆ ಬಂದಾನು. ಮನೆಯನಿಂಬುಮಾಡು ಮದವಳಿಗೆ, ಮನವ ಶುದ್ಧವ ಮಾಡು ಮದವಳಿಗೆ, ಮನೆಯದ್ದೆರಡನೂ ಎಬ್ಬಟ್ಟವ್ವಾ. ಸಿದ್ಧ ಶುದ್ಧ ಪ್ರಸಿದ್ಧದಿಂದ, ದೀಕ್ಷೆ ಶಿಕ್ಷೆ ಸ್ವಾನುಭಾವದಿಂದ ಎಬ್ಬಟ್ಟಿ ಮನೆಯ ಮಂಗಳವ ಮಾಡವ್ವಾ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ಗಂಡ ಮನೆಯೊಳಕೆ ಬಂದು ಮತ್ತೊಬ್ಬರಿದ್ದಡೆ ಸೈರಿಸ.
--------------
ಸಿದ್ಧರಾಮೇಶ್ವರ
ಅಕ್ಷರವೈದರಿಮ್ಮೇಲೆ ಒಪ್ಪಿಪ್ಪೆ ನೀನು, ಶಿವ ಅಕ್ಷರಾಂಕನು ನೀನು, ಪೂರ್ವಕ್ಕೆ ಮೂರು ಅಕ್ಷರ ಆನತಂ ಮೇಲೆ ನೀನಯ್ಯಾ. ಅನಾದಿ ಮೂಲಶೂನ್ಯ ಕಪಿಲಸಿದ್ಧಮಲ್ಲಿನಾಥ ಆದಿಯಾಧಾರಕ್ಕೆ ಮೂಲ ನೀನು.
--------------
ಸಿದ್ಧರಾಮೇಶ್ವರ
ಅಯ್ಯಾ, ಬಾರಯ್ಯಾ ಬಾರಾ ಆನಂದದಾದಿಯಲ್ಲಿ ಅಯ್ಯಾ ಒಯ್ಯನೇ ಕೈಗೊಡಯ್ಯ. ಅಯ್ಯಾ ಕಂಗೆಟ್ಟ ಪಶುವಾದೆನು. ಎಲೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಯ್ಯಾ, ನೀನು ಅನಾಹತ ಲೋಕದಲ್ಲಿ ಪ್ರವೇಶಿಸುವಾಗ ಅಕ್ಷರವೆರಡರ ತದ್ರೂಪವಾಗಿರ್ದೆಯಯ್ಯಾ. ನೀನಾ ಬ್ರಹ್ಮಾಂಡವನರಿವಾಗ ಶಕ್ತಿತ್ರಯದ ಶಾಖೆಯಾಗಿರ್ದೆಯಯ್ಯಾ. ನೀನು ಸಕಲದಲ್ಲಿ ನಿಃಕಲದ್ಲ ಸ್ವಾನುಭಾವಸಂಬಂಧದಲ್ಲಿ ಅಕ್ಷರವೆರಡರಲ್ಲಿ ಆಂದೋಳನವಾಗಿ ಪ್ರವೇಶಿಸುವಾಗ ಶುದ್ಧ ನೀನಾಗಿ, ಸಿದ್ಧ ನೀನಾಗಿ, ಪ್ರಸಿದ್ಧ ನೀನಾಗಿ ಪಂಚ ಮಹಾವಾಕ್ಯಂಗಳೆ ನಿನ್ನ ಮನೆಯಾಗಿ ಓಂ ಎಂಬುದೆ ನಿನ್ನ ತನುವಾಗಿ, ಆನಂದವೆಂಬುದೆ ನಿನ್ನ ಮೂರ್ತಿಯಾಗಿ ಪರಾಪರ ರೂಪೆ ನಿನ್ನವಯವವಾಗಿ ನೀನಿಪ್ಪೆಯಯ್ಯಾ ನಿತ್ಯಮಂಗಳರೂಪನಾಗಿ, ಸ್ವತಂತ್ರವಾಗಿ ಪರಮಸೀಮೆಯ ಮೀರಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಏಕಾರ್ಥವ ಮಾಡಿದ ಬಸವಣ್ಣ ಗುರುವೇ, ಶರಣು
--------------
ಸಿದ್ಧರಾಮೇಶ್ವರ
ಅರ್ತಿಯಲ್ಲಿ ಮುತ್ತೈದೆ ಆರತಿವಿಡಿದು ಬಂದು ನಿಂದೈದಾಳೆಯಯ್ಯಾ ನಿಮ್ಮ ಮುಂದೆ. ನಿಜಶುದ್ಧ ಸಾರಸನ್ಮತವಾದ ಮುಖವಂತೆ, ಕಪಿಲಸಿದ್ಧಮ್ಲನಾಥಯ್ಯಾ, ನಿಮ್ಮ ಮುಖವಂತೆ ನಿಯತವ ಕಂಡಳು ಚೆನ್ನಬಸವಣ್ಣನ ಧರ್ಮದಿಂದೆ.
--------------
ಸಿದ್ಧರಾಮೇಶ್ವರ
ಅಂದಿನ ಪರಿ ಇಂದಿನ ಪರಿ ಬೇರೆ ಕಂಡೆಯಾ, ಮನವೆ. ಅಂದಿನ ವಿಷ ಇಂದಮೃತವಾಯಿತ್ತು ಕಂಡೆಯಾ, ಮನವೆ. ಅಂದಿನ ದೇವಾಂಗನೆ ಇಂದು ನಿಮಗೆ ಚಿಚ್ಛಕ್ತಿಯಾಯಿತ್ತು ಕಂಡೆಯಾ, ಮನವೆ. ಅಂದಿನವ ನೀನಿಂದು ಕಪಿಲಸಿದ್ಧಮಲ್ಲಿಕಾರ್ಜುನನೆಂದು ನಂಬು ಕಂಡೆಯಾ, ಮನವೆ.
--------------
ಸಿದ್ಧರಾಮೇಶ್ವರ
ಅನ್ಯೋನ್ಯವೆಂಬುದು ತನ್ನತ್ತಲಿಲ್ಲ ಅನ್ಯ ಬಂದಡೆ ಅಯ್ಯನತ್ತಲೆ ಮುಖವ ಬೆರಸುವ ಭೇದ ಅಯ್ಯನ ಮುಖವೆ ಮುಖವಾದನೊ. ಇಂ್ರಯಂಗಳೈದು ಆತನ ಇಂಬಪ್ಪ ಮುಖವಾಗಿ ಬಂದ ಪ್ರಸಾದವ ಕೊಂಬ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿನ ಗುರುಭಕ್ತ ಪ್ರಸಾದಿಯ ಪರಿಯಿಂತು
--------------
ಸಿದ್ಧರಾಮೇಶ್ವರ
ಅಯ್ಯಾ, ನಿಮ್ಮ ಸರವುಂಡ ಸಬುದವೆನ್ನ ಮನಕ್ಕೆ ವೇದ್ಯವಾಯಿತ್ತು. ನಿಮ್ಮ ನಿಜವುಂಡ ನಿಲವು ಎನ್ನ ಮತಿಗೆ ವೇದ್ಯವಾಯಿತ್ತು. ನಿಮ್ಮ ಕರುಣಪ್ರಸಾದವೆನ್ನ ಸರ್ವಾಂಗವೇದ್ಯವಾಯಿತ್ತು. ನಿಮ್ಮ ಕಾಯವಿಡಿದಿಪ್ಪ ಕರಸ್ಥಲದ ಕಾರಣವ ಹೇಳಾ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...