ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನುವೆಂಬ ಹೇಳಿಗೆಗೆ ಮನಸರ್ಪನಾವರಿಸಿ, ಇನಿದು ಬಂದಡೆ ಅದಕ್ಕಿಂಬುಗೊಡದೆ, ಇರುತಿರ್ಪ ಸರ್ಪವನು ತೆಗೆದು ಶಿವಲಿಂಗವನು ನೆಲೆಗೊಳಿಸಿದ ಶ್ರೀ ಗುರುವೆ ಶರಣು ಶರಣೆಂಬ, ವಾಕ್ಯಂಗಳ್ಲ ಆಕಾರ ಚತುಷ್ಟಯಮಾನಂದದದಲ್ಲಿರಿಸಿದ ಏಕೋ ರುದ್ರ ಶಿಷ್ಟ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತ್ರಾಹಿಮಾಂ ಪರಮೇಶ್ವರ ಜಯ ಭಕ್ತಿಜಾÕನಮಾಕಾರ ನೀನೆಯಯ್ಯ ಚೆನ್ನಬಸವಣ್ಣ. ಏಕೋದೇವ ದೇವಧರ್ಮ ಧರ್ಮಗುಣ ಗುಣಪ್ರಕಾಶ ಪ್ರಕಾಶ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ. ನಿಮ್ಮಿಂದ ಪ್ರಾಣಂಗಸಂಬಂಧವಾಗಿ ನಿಮಗೆ ನಮೋ ನಮೋ ಎನುತಿರ್ದೆನಯ್ಯಾ ಚೆನ್ನಬಸವಣ್ಣ.
--------------
ಸಿದ್ಧರಾಮೇಶ್ವರ
ತನುವಿಗೊಳಗಾದಾತ ಗುರುವೆ? ಮನಕ್ಕೊಳಗಾದಾತ ಲಿಂಗವೆ? ಧನಕ್ಕೊಳಗಾದಾತ ಜಂಗಮವೆ? ತನು-ಮನ-ಧನ ತನ್ನ ಮನಕ್ಕಲ್ಲದೆ ಗುರು-ಲಿಂಗ-ಜಂಗಮದಲ್ಲುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ತನುವಿನ ಕ್ರಿಯಾಕಾರದಲ್ಲಿ ಒಡಲುಗೊಂಡಿಹವರು ಉಣ್ಣೆನೆಂದಡೆ ಅವರ ವಶವೆ? ತನುಗುಣ ನಾಸ್ತಿಯಾದವರು ಉಣ್ಣೆನೆಂದಡೆ ಸಲುವುದಲ್ಲದೆ ಕಾಮವಿಕಾರಕ್ಕೆ ಸಂದು, ತಾಮಸಕ್ಕೆ ಮೈಗೊಟ್ಟು ಇಪ್ಪವರೆಲ್ಲರೂ ಉಣ್ಣೆನೆಂದಡೆ ಹರಿವುದೆ? ನಿಜಗುರು ನಿಜಲಿಂಗ ನಿಜಜಂಗಮ ನಿತ್ಯಪ್ರಸಾದವ ಶ್ರೀಗುರು ಕರುಣದಿಂದ ಪಡೆದು ಅರಿದಾಚರಿಸಿದವರಿಗಲ್ಲದೆ ಭವವ ತಪ್ಪಿಸಬಾರದು ಕಾಣಾ ಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತಿಳಿಯದ ಜನರು ಅವು ಶಿವನಲ್ಲ, ಜಡಜೀವಿಗಳು ಎಂಬುವರು. ಅದೆಂತಯ್ಯಾ `ಪಂಚತತ್ತ್ವಂ ಮುಖೋದ್ಭೂತಂ' ಎಂಬಾಗಮವಾಕ್ಯಸಿದ್ಧಿ? ಪಂಚತತ್ತ್ವದಿಂಗಳೆಲ್ಲ ಶಿವನ ಪಂಚಮುಖದಿಂದಿದಾದವು. ಆ ಪಂಚತತ್ತ್ವಂದ ಸಕಲ ಚರಾಚರಬ್ರಹ್ಮಾಂಡವಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾನ ಲೀಲೆಯಿಂದ ಕಲ್ಲಯ್ಯಾ.
--------------
ಸಿದ್ಧರಾಮೇಶ್ವರ
ತಟ್ಟುವ ಮುಟ್ಟುವ ಭೇದವುಳ್ಳನ್ನಬರ ಶರಣನಲ್ಲ. ಅದೇನು ಕಾರಣವೆಂದಡೆ, ತಟ್ಟದೆ ಮುಟ್ಟದೆ ಕೊಂಬನಾಗಿ. ತಟ್ಟುವ ಮುಟ್ಟುವ ಭೇದಂಗಳೆಲ್ಲಾ ತನುಗುಣಕ್ಕೆ ದಾರಿ. ತಟ್ಟದೆ ಮುಟ್ಟದೆ ಬಟ್ಟಬಯಲಾಗಿ, ಕೊಂಬಾತನೆ ತತ್ವಮಸಿಯಾದ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ತನು ನಿಮ್ಮದಾಗಿ ಮನ ನಿಮ್ಮದಾಗಿ ಧನ ನಿಮ್ಮದಾಗಿ ಇನಿತೆಲ್ಲ ನೋಡಲು ಸರ್ವಸ್ವವೂ ನಿಮ್ಮದಾಗಿ ನಿಮಗರ್ಪಿತವಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು ತಾ ಮಾಡಿದ ಹೆಣ್ಣು ತನ್ನ ತೊಡಯನೇರಿತ್ತು ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಗೆಯನೇರಿತ್ತು ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು ಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ ; ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!
--------------
ಸಿದ್ಧರಾಮೇಶ್ವರ
ತುಂಬಿ ತುಳುಕಿ ಅಂಬರಕೆ ಗಂಬ್ಥೀರ ತೆರೆ ಹಾಯುತ್ತಿರಲು, ಸಂಭ್ರಮದ ಶರದ್ಥಿ ಹೆಚ್ಚಿತೇ ಕಾಡುತ್ತಿದ್ದೆ ನಾನೂ ಎಲೆ ಅಯ್ಯಾ, ಆಕಾರವ ಮೀರಿದ ನಿರಾಕಾರ ಭಕ್ತಿ ಏಕೋದೇವ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತಿಳಿ ನೀರೆಂಬೆ ತಿಳಿನೀರೆಂಬೆ, ತಿಳಿ ನೀ ಎಂದು ಒಂದು ದಿನ ಅಂದಿಲ್ಲೆಲೆ ಮಾನವಾ. ಕ್ಷಣಕ್ಕೆ ಕ್ಷಣಕ್ಕೆ ತಿಳಿ ನೀ ಎಂದಡೆ, ತಳುಹುದೆ ತನ್ನ ನಿಜವ ಕೊಡನೆ ಕಪಿಲಸಿದ್ಧ ಮಲ್ಲೇಂದ್ರ ?
--------------
ಸಿದ್ಧರಾಮೇಶ್ವರ
ತತ್ವಮಸಿಯೊಳಗೆ ನಿತ್ಯ ಹೊಕ್ಕಿಪ್ಪುದನು ಮತ್ತೆ ಶೂನ್ಯಾಂಗರಿಗೆ ಅರಿಯಲಹುದೆ? ಕಡಲ ಒಳಗಿಹ ಕಿಚ್ಚು ಕಡಲ ಸುಡದಿಹ ಭೇದ ಒಡಗೂಡಿದಾ ಭೇದ, ಶರಣರಿಗಾ ಕಡಲ ದಾಂಟಿಯೆ ನಿಂದು ತಡಿಯೊಳಗೆ ತಾ ಮಿಂದು ಒಡಗೂಡಿದನು ಶುದ್ಧಧವಳಾಂಗನ ಹಲವು ಚಿತ್ತವು ಬಿಟ್ಟು ಗುರುವಿನ ಅನುಮತ ಅನುಮಿಷಂಗದ ಭೇದವರಿದು ತನುತ್ರಯದ ಮಲತ್ರಯದ ಅನುಭೇದವನು ಸುಟ್ಟು, ತನುಜ್ಞಾನಿ ಸಂಬಂದ್ಥಿಲಿಂಗ ಮೂರರೊಳಗೆ ಅಂಗಸುಖವನೆ ಬಿಟ್ಟು ಲಿಂಗಸುಖಿ ತಾನಾಗಿ ಮಂಗಳಾಂಗನಾ ಕಪಿಲಸಿದ್ಧಮಲ್ಲೇಶ್ವರ.
--------------
ಸಿದ್ಧರಾಮೇಶ್ವರ
ತಮ್ಮಿಚ್ಛೆಗೆ ಬಂದ ಪದಾರ್ಥ ಲಿಂಗದಿಚ್ಛೆ ಎಂಬರು; ತಮ್ಮಿಚ್ಛೆಗೆ ಬರದ ಪದಾರ್ಥ ಲಿಂಗದಿಚ್ಛೆ ಇಲ್ಲವೆಂಬರು. ಹೋದ ವಾಕ್ಕು ಶಿವಾಜ್ಞೆ ಎಂಬರು. ಇದ್ದ ಮಾತು ತನ್ನಾಜ್ಞೆ ಎಂಬರು, ಅದೆಂತಯ್ಯಾ? ಇಚ್ಛೆಗೆ ಒಳಗಾಗುವನಲ್ಲಯ್ಯಾ ಲಿಂಗವು. `ಶಿವೋ ದಾತಾ ಶಿವೋ ಭೋಕ್ತಾ' ಎಂಬುದ ತಿಳಿದು, ಲಿಂಗಮುಖಂದ ಬಂದ ಪದಾರ್ಥವ ಕೈಕೊಂಬಡೆ, ಅಚ್ಚ ಲಿಂಗೈಕ್ಯನೆಂಬೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತನುತ್ರಯ ಮಲತ್ರಯಂಗಳೆಂಬ ಶಂಕೆಯಲ್ಲಿ ಕೆಡದೆ, ಹಮ್ಮಿನ ಬೊಮ್ಮನ ನೀನಾಡದೆ ಮಾಡಾ ಲಿಂಗಾರ್ಚನೆಯ, ಶ್ರೋತ್ರಿಯ ಕೈಗಳಿಂದ ಇಷ್ಟಂಗಾರ್ಚನೆಯ, ನೇತ್ರದ ಕೈಯಿಂದ ಗುರುಲಿಂಗಾರ್ಚನೆಯ. ಇಂತು ತ್ರಿವಿಧ ಮುಟ್ಟಿ ಕರಕರಂಗಳಲ್ಲಿ ಚರಂಗಾರ್ಚನೆಯ ಮಾಡಿರಯ್ಯಾ ಮನಮುಟ್ಟಿ. ಚರಂಗಾರ್ಚನೆಯಿಂದ ಭಕ್ತನೆನಿಸುವೆ, ಮಾಹೇಶ್ವರನೆನಿಸುವೆ, ಪ್ರಾಣಲಿಂಗಿ, ಶರಣ, ಪ್ರಸಾದಿ, ಐಕ್ಯನೆನಿಸುವೆ, ಜನನ ಮರಣಾದಿಗಳಿಗೆ ದೂರನೆನಿಸುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ ಶುದ್ಧಸಿದ್ಧ ಪ್ರಸಿದ್ಧ ಏಕ ಏಕ ಎನಿಸುವೆ.
--------------
ಸಿದ್ಧರಾಮೇಶ್ವರ
ತನು ಉಂಟೆಂಬ ಭಾವ ಮನದಲ್ಲಿಲ್ಲವಯ್ಯಾ; ಮನ ಉಂಟೆಂಬ ಭಾವ ಅರುಹಿನಲಿಲ್ಲವಯ್ಯಾ; ಅರುಹು ಉಂಟೆಂಬ ಭಾವ ನುಡಿಯೊಳಗಿಲ್ಲವಯ್ಯಾ. ಇಂತೀ ತನು ಮನ ಜಾÐನವೆಂಬ ತ್ರಿವಿಧವು ಏಕಾರ್ಥವಾದ ಬಳಿಕ, ಆವ ತನುವಿನ ಮೇಲೆ ಸ್ವಾಯತವ ಮಾಡುವೆ? ಎನ್ನ ಕಾಯವೆ ಬಸವಣ್ಣನು, ಎನ್ನ ಪ್ರಾಣಲಿಂಗವೆ ಪ್ರಭುದೇವರು, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಒಳಗು ಹೊರಗೆಂಬುದಿಲ್ಲ ಕಾಣಾ, ಚೆನ್ನಬಸವಣ್ಣಾ.
--------------
ಸಿದ್ಧರಾಮೇಶ್ವರ
ತನು ಕೊಟ್ಟು ಭಕ್ತನಾದೆಹೆನೆಂದಡೆ, ತನು ಮಲಭಾಂಡವಯ್ಯಾ. ಮನ ಕೊಟ್ಟು ಭಕ್ತನಾದೆಹೆನೆಂದಡೆ, ಮನ ವಾಯುಮಿತ್ರನಯ್ಯಾ. ಧನ ಕೊಟ್ಟು ಭಕ್ತನಾದೆಹೆನೆಂದಡೆ, ಎನ್ನ ಬಂಧುಗಳ ಭಾವ ಅದರಲ್ಲಯ್ಯಾ. ಇವೆಲ್ಲ ಅಶುದ್ಧ ಪದಾರ್ಥಂಗಳ ಕೊಟ್ಟು ಭಕ್ತನಾಗುವೆನೆ? ಆಗಲರಿಯೆನು. ಮಾಡಿ ಮಾಡಿ ಭಕ್ತನಾಗಿಹೆನೆಂಬವರಿಗೆ ಕೊಟ್ಟು ಭಕ್ತನಾಗುವೆನೆಂದಡೆ, ನೀವೆಯಾಗಿ ನಿಂದಲ್ಲಿ ಕೊಡಲಿಕ್ಕಿಂಬಿಲ್ಲಾ, ತೆಗೆದುಕೊಂಬುವಡೆ ಹಸ್ತವಿಲ್ಲಾ, ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ ತಂದೆ.
--------------
ಸಿದ್ಧರಾಮೇಶ್ವರ
ತೋರಿಪ್ಪ ಒಳಗೊಂದು ಮೀರಿವೌ ಎಂಟು, ಗಾರು ಮಾಡುತ್ತವೆ ವರ್ಗವಾ ಮೀರಿ ಮೀರಿ, ನೂರೆಂಟರ ಕಳಾಪ್ರವೇಶದಲ್ಲಿ ತೋರಿಪ್ಪುದು ಧಾತುವೇಳು ಅನಾ ಮೂರುತಿ ಕಪಿಲಸಿದ್ಧಮಲ್ಲೇಶ್ವರಯ್ಯ ನಿನ್ನ ನೆನಹಿನ ಮೂರುತಿಯ ಮೂಲ.
--------------
ಸಿದ್ಧರಾಮೇಶ್ವರ
ತರ್ಕವನು ಮೀರಿಪ್ಪ ತತ್ವ ಕ್ರೀಯಾಗಿಪ್ಪ ಮತ್ತೆ ತ್ವಮಸಿಯ ಸೀಮೆ ಒಡಲಪ್ಪನೈ. ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಂಗಿಯ ಮುಟ್ಟಿದ್ದ ಆರರ ಪರಿಯಿಂತುಟೈ. ಕಪಿಲಸಿದ್ಧಮಲ್ಲಿಕಾರ್ಜುನನ ಭಕ್ತಿಕ್ರೀಯನು ಕೂಡಿದಾತ ನಾನು.
--------------
ಸಿದ್ಧರಾಮೇಶ್ವರ
ತತ್ತ್ವ ಸಾಂಗತ್ಯಂದತ್ತಲಾಗಿಹ ಬ್ರಹ್ಮ ಸುತ್ತಿಪ್ಪ ಕ್ರೀ ತಾನು ಭಕ್ತಿಯಾಗಿ ತ್ವಮಸಿ ಸಂಗಮದಂಗಪಾಶದ ತದ್ರೂಪವಾದ ಈಷಣತ್ರಯಗಳನು ಮೀರಿರ್ಪುದು ಬಂದ ಬಟ್ಟೆಯ ಬಾರ, ಉಂಡ ಊಟವನುಣ್ಣ ಹಿಂದುಮುಂದರಿದಾತ ಸಂದಿಲ್ಲದೆ ಶಿವಭಕ್ತಿಯನರಿದು ನೀವಿಪ್ಪೆಡೆಗೆ ಬಂದ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತನುಮುಖ ತಾನೆ ಎಂಬ ಯೋಗದ ಹೊಲಬನರಿದವರು ಅತ್ತಲೂ ಚರಿಸುವರು ಇತ್ತಲೂ ಚರಿಸುವರು ಪರಮಾರ್ಥವ ಮಿಂಚಿನ ರವೆ ರವೆಯಂತೆ ಅಪ್ಪುವರಡಗುವರಯ್ಯ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತಾತ್ಪರಿಯ ವರ್ಮ ಕಳೆಯನರಿತು ಶುದ್ಧ ಸಿದ್ಧ ಪ್ರಸಿದ್ಧದಲ್ಲಿ ಪ್ರಭಾವಮುಖದಲ್ಲಿಪ್ಪವರ ಅವರನೇನೆಂಬೆ? ಅವರ ಸಿದ್ಧರೆಂಬೆನೋ? ಅವರ ಶುದ್ಧರೆಂಬೆನೋ? ಅವರ ಪ್ರಸಿದ್ಧರೆಂಬೆನೋ? ಅವರ ಸರ್ವಾಂಗ ಸನುಮತರೆಂಬೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತನುವೆಂಬ ಮಹಾಪರ್ವತದಲ್ಲಿ ಒಸರುತ್ತಿಪ್ಪ ನಿರುರ್sುರಿಗಳಿಂದ ಆ ಘನವನೊಡಗೂಡುವಿರ ಹೇಳಿರೆ? ಸ್ಥೂಲಸಮುದ್ರ ಅರವತ್ತುನಾಲ್ಕು ಕೋಟಿಯು ಮೂವತ್ತೆರಡು ಲಕ್ಷವು ಮೂವತ್ತೆರಡು ಸಾವಿರದ ಪರಿಪೂರ್ಣವಾಗಿಪ್ಪುದಾಗಿ ಅವು ತಮ್ಮ ತಮ್ಮ ಘನತೆಗೆ ತಾವೆ ಘನವೆಂದು ಮೊರವುತೈದಾವೆ. ಅವು ನೀವು ಸಿಡಿದುಬೀಳುವ ತುಂತುರುಮಾತ್ರಕ್ಕೆ ಸಮವಪ್ಪುದೆ? ಅಂತಪ್ಪ ಸಮುದ್ರಂಗಳು ಸವಾಲಕ್ಷಕೂಡಿ ನೀನೆಯ್ದುವ ಮಹಾಸಮುದ್ರದ ಒಂದು ಬಿಂದುವಿಗೆ ಸರಿಯೆ? ಅಯ್ಯಾ ನೀವೆಂಬ ಮಹಾಸುಧಾಸಮುದ್ರಕ್ಕೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತನುಮಧ್ಯ ವಿದಳಾಚಲದೊಳಗೆ ಭಾಸ್ಕರಭವನ ಬೆಳಗುತಿಪ್ಪುದು ಲೋಕ ಹದಿನಾಲ್ಕರ ಅಜಲೋಕದೊಳಗೆ ಆತ ಬೆಳಗುವ ಪ್ರಜ್ವಲದ ಪ್ರಭೆಯ ಮಂಟಪವು ತಾನೆರಡಾಗುತ ದಿವ ರಾತ್ರೆ ಒಡಗೂಡಿ ಭರಿತ ಪರಿಮಳವಾಗೆ ವಳಯ ಹದಿನಾಲ್ಕುರೊಳು ಬೆರೆಸಿಪ್ಪ ಜ್ಯೋತಿಯನು ತಿಳಿದು ನೋಡಿದಡತ್ಯದ್ಥಿಕ ಸರ್ವಜ್ಞನೆನಿಪ ಲೋಕಾಲೋಕದ ಏಕವ ಮಾಡಲಿಕಾತ ಆಕಾರ ಚತುಷ್ಟಯವ ಮೀರಿದಾತ ವರ್ಣಾಶ್ರಮವ ಕಳೆದು ನಿರ್ಮಳಾನಂದದೊಳು ಸೊಮ್ಮುಗೆಟ್ಟಾತ ಪರಶಿವ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ತನುಗುಣಗಳನತಿಗಳೆದ ಪ್ರಸಾದಿ; ತಾಮಸಂಗಳ ಮೀರಿದ ಪ್ರಸಾದಿ; ವರ್ಗಂಗಳ ದಾಂಟಿದ ಪ್ರಸಾದಿ; ಇಂದ್ರಿಯಂಗಳು ಈಶನ ಮುಖವಾದ ಪ್ರಸಾದಿ; ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದ ಪ್ರಸಾದಿ.
--------------
ಸಿದ್ಧರಾಮೇಶ್ವರ
ತನುಗುಣಾದಿಗಳೆಲ್ಲ ನೀ ಮಾಡಲಾದವು. ಮನ ಪ್ರಾಣ ನೆನಹಿನ ಸಂಗಮದಲಿ ಸಮನಿಸಬಲ್ಲನೆ ಅಯ್ಯ? ಸ್ಥೂಲ ಸೂಕ್ಷ ್ಮ ಕಾರಣವೆಂಬವು ನೀ ಮಾಡಲಾದುವಲ್ಲದೆ ನಿಮ್ಮ ಧರ್ಮ. ನಿನ್ನ ಮೀರಿ ಅಧಿಕವುಂಟೆ? ಸರ್ವರಲ್ಲಿ ಸಿದ್ಧನು. ಎನ್ನ ಹೊದ್ದಿಯೂ ಹೊದ್ದದಂತಿರೆ, ಎನ್ನ ಸರ್ವಾಂಗದಲ್ಲಿ ನೀನೆಯಾಗಿ ತೋರಯ್ಯಾ!ಲ್ಲ [ಅನಂಗ]ವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಧರ್ಮ! ನಿಮ್ಮ ಧರ್ಮ!
--------------
ಸಿದ್ಧರಾಮೇಶ್ವರ
ತನುತ್ರಯದಲ್ಲಿ ಘನಂಗ ಪ್ರಾಣಸಂಬಂಧಿಯಾದವರ ತೋರಯ್ಯಾ, ನಿಮ್ಮ ಧರ್ಮ. ಅವಯವಂಗಳೆ ನಿಮ್ಮ ವದನಂಗಳಾಗಿ, ಅರ್ಪಿತವಲ್ಲದ ಅನರ್ಪಿತವ ಕೊಳ್ಳರಾಗಿ, ಐದಾರು ಪ್ರಸಾದದಲ್ಲಿ ಅನುಮಾನವಿಲ್ಲದೆ ನಿತ್ಯರಪ್ಪವರ, ಈರೈದು ಪಾದೋದಕದಲ್ಲಿ ವಿರಳವಿಲ್ಲದೆ ವಿಮಲರಪ್ಪವರ, ನೋಡಿ ಕಂಡೆಹೆನೆಂದಡೆ, ಎನಗೆ ಕಾಣಬಾರದು. ಅವರಿಚ್ಛಾಮಾತ್ರದಲ್ಲಿ ನೀನಿಪ್ಪೆಯಾದಂತೆ, ನಿನಗೆ ಕಾಣಬಹುದು. ಅಲ್ಲದ್ದಡೆ ನಿನಗೆಯೂ ಅಭೇದ್ಯ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...