ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದಿಟ್ಟ ಲಿಂಗವ ತನ್ನ ಇಷ್ಟ ಕರಸ್ಥಳದಲ್ಲಿಟ್ಟು ಬಟ್ಟೆಗಟ್ಟಿದನೆರಡು ದೆಸೆದೆಸೆಗಾಗಿ, ಅವ್ವ ನೀನೊಳಗಾಗಿ ಸೀಮೆ ಸಾಯುಜ್ಯದಲ್ಲಿ ಸೊಲ್ಲನಿಟ್ಟಾತ ಗುರುವವ್ವಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ದೇಹದ ಸಿರಿಯ ಆಗುಹೋಗನರಿಯಬಾರದು ಆಗೆಂದರಿಯಬಾರದು, ಈಗೆಂದರಿಯಬಾರದು ಇದನೋಜೆಮಾಡಿಕೊಳ್ಳಿ ಶಿವಭಕ್ತಿಯಿಂದ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ದುರಿತಘರಟ್ಟಂಗೆ ಧೂಪಾರತಿಯನು ಕೊಡುವ ಪುರಾತರು ಕೇಳಿರಯ್ಯಾ ಹೋಗು ಹೋಗೆಂಬ ಬೀಸಣಿಗೆ ಅಡಗಡಗೆಂಬ ಘಂಟೆಯ ಸಬುದಕ್ಕೆ ತೆರಳ್ದೋಡಿಹೋದವು ಪಾಪಂಗಳು. ಪಾಪಿಯ ಪಾದ ಬಂದರಸಿ ಕೊಂಡೊಯ್ದವು ಕಪಿಲಸಿದ್ಧಮಲ್ಲಿನಾಥನೊಲ್ಲದವರ.
--------------
ಸಿದ್ಧರಾಮೇಶ್ವರ
ದೀಪದಂತಿಹ ಜನ್ಮ ಬಂದುದು ತಿಳಿಯಬಾರದು, ಹೋಹುದು ತಿಳಿಯಬಾರದು. ಮೇಘದಂತಿಹ ಜನ್ಮ ಬಂದುದು ತಿಳಿಯಬಾರದು, ಹೋಹುದು ತಿಳಿಯಬಾರದು. ಶಿಶುವಿನಂತಹ ಜನ್ಮ ಬದುಕುವುದು ್ಕಳಿಯದು, ಬದುಕಿ ಬಾಳೀತೆಂಬುದು ತಿಳಿಯಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ದೀಕ್ಷಾತ್ರಯದಲ್ಲಿ ವ್ಯಕ್ತನಾದೆ ಶಿಕ್ಷ ಸಂಬಂದ್ಥಿಸುವಲ್ಲಿ ಬ್ಥೀತನಾದೆ ಮುಗ್ಧೆಯ ಕನಸಿನಲ್ಲಿ ಮುಕ್ತನಾದೆ ಧನ-ತನು-ಮನಂಗಳ ಮೂರ ಮರೆದವನ ತಾಮಸಂಗಳು ಹಲವನಳಿದವನ ರಜಂಗಳು ಕೆಲವನುಳಿದವನ ಭೇದಿಸಿ ಕಂಡೆ. ಅದೇನು ಗುಣ? ಅವ್ಯಯ ನಾನಾ ವಾಯಸ್ಥಾನದಲ್ಲಿ ಶುದ್ಧ ಸಂಗಮ ಪ್ರಯೋಗಿಸಿದ ಕಾರಣ! ೀಕ್ಷೆಯಾಯಿತ್ತು ಕಾಯಕ್ಕೆ, ಶಿಕ್ಷೆಯಾಯಿತ್ತು ಸರ್ವಾಂಗಕ್ಕೆ ಸ್ವಾನುಭಾವವಾಯಿತ್ತು ಕರಣೇಂದ್ರಿಯ ಸರ್ವಕ್ಕೆ. ದೀಕ್ಷಾತ್ರಯವು ಸಂಬಂದ್ಥಿಸಿದ ಕಾರಣ ನೀ ನಾನಾದೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ದಾನಿ ಮುನ್ನಾನಲ್ಲ, ಏನು ಗುಣವೆನ್ನಲ್ಲಿ? ನೀ ಕಾಡಲ್ಕೆ ಎನಗೆ ತೆರಹಿಲ್ಲವ್ವಾ. ದಾನವನು ಬೇಡಿದೆನು ಭಕ್ತಿ ಬ್ಥಿಕ್ಷವ ನೀಡಿ ಅನಾದನಾದನು ಚೆನ್ನಬಸವಣ್ಣನು. ಕೇಳೆಲೆಗೆ ಮಾಯೆ, ನೀ ನನ್ನತ್ತ ಹೊದ್ದದಿರು ಗಾರುಮಾಡುವರು ನಿನ್ನನೆನ್ನ ನಿರ್ಮಾಯರು. ಕಾರುಣ್ಯಕರ ಕಪಿಲಸಿದ್ಧಮಲ್ಲೇಶ್ವರನ ಭಾವಶುದ್ಧದ ಸತ್ವವನು ವಿಡಿದು.
--------------
ಸಿದ್ಧರಾಮೇಶ್ವರ
ದೇಹವೆಂಬುದು ಅವಿದ್ಯೆ ಎಂಬುವರು; ಅದೆಂತಯ್ಯಾ? ದೇಹ ತಾನಿಲ್ಲರೆ ಆಶ್ರಯಿಸುವ ಪರಿ ಎಂತಯ್ಯಾ? ಅರಿದಡೆ ಆಶ್ರಯಿಸ; ಮರೆದಡೆ ಆಶ್ರಯಿಸುವ. `ಅಜ್ಞಾನಾದಧಶ್ಚಲ್ಕ' ಎಂಬುದ ಅರಿದೆನಯ್ಯಾ, ದೇಹವದು ಜಡಸಾಕ್ಷಿ! ಅಜಡವೆಂಬ ಭಾವ ವಚನದಲ್ಲಲ್ಲದೆ ಅನುಭಾವದ್ಲಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ದೇವನಿಂತವನೆಂದು ನಂಬಲಾಗದಯ್ಯಾ: ಬಾ ಎಂದು ಹೇಳಿ ಬಯಲಾದ ದೇವನೊಳ್ಳಿದನೆ? ದೇವನಿಂತವನೆಂದು ನಂಬಲಾಗದಯ್ಯಾ: ತನ್ನ ಕಾರ್ಯಕ್ಕೆ ಹೆಣಗಾಡಿಸಿದವ ಒಳ್ಳಿದನೆ? ಕಪಿಲಸಿದ್ಧಮಲ್ಲಯಾ, ನಿನ್ನ ಲೀಲೆ ತಿಳಿಯದಾರಿಂಗೂ.
--------------
ಸಿದ್ಧರಾಮೇಶ್ವರ
ದೀಪ್ತಿ ಮೂರ್ತಿಗಳೊಳಗೆ ಮೂಲವಪ್ಪಡೆ ತಾನು ರೀತಿ ಧಾತುಗಳನು ಅವಗ್ರಹಿಸಿತೈ ಮಾತಿನ ಬ್ರಹ್ಮಾಂಡ ಮಾತೆಯಾಗಕಾನು ನೀತಿ ನಿಜನೆಂದನೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ದೀಪವಖಿಲಲೋಕದಲ್ಲಿ ಏಕವಾಗಿಪ್ಪಳೆ ಏಕಯ್ಯಾ ಮರುಗುತಿಪ್ಪರು? ಅಯ್ಯಾ, ಆಕಾರವನು ನಂಬದೆ ಅಯ್ಯಾ, ನಿಕಾರದೊಳಗೆ ಇಹರು, ಏಕದೇವನೆಂದು ಹೊಗಳುವ ಶ್ರುತಿಯ ಆಯರಿದು ಜಪಿಸಿದೆ ಕಪಿಲಸಿದ್ಧಮಲ್ಲಿನಾಥನಾ ಅವ್ವೆ.
--------------
ಸಿದ್ಧರಾಮೇಶ್ವರ
ದೇವರಿಗೆ ಕೃಷಿಯ ನೇಮಕವ ಮಾಡುವರಲ್ಲದೆ, ದೇವರ ಪ್ರಥಮ ಮುಖ ಭೂಮಿ ಎಂದರಿಯರೀ ಲೋಕ. ದೇವರಿಗೆ ನಯ ಜಲವೆರೆಯಬೇಕೆಂಬ ನೇಮಕವ ಮಾಡುವರಲ್ಲದೆ, ದೇವರ ದ್ವಿತೀಯ ಮುಖ ಜಲ ಎಂದರಿಯರೀ ಲೋಕ. ದೇವರಿಗೆ ದೇವಿಗೆಯ ನೇಮಕವ ಮಾಡುವರಲ್ಲದೆ, ದೇವರ ತೃತೀಯ ಮುಖ ಜ್ಯೋತಿಯೆಂದರಿಯರೀ ಲೋಕ. ದೇವರಿಗೆ ತಾಲವೃಂತದ ನೇಮಕವ ಮಾಡುವರಲ್ಲದೆ, ದೇವರ ಚತುರ್ಥಮುಖ ವಾಯುವೆಂದರಿಯರೀ ಲೋಕ. ದೇವರಿಗೆ ಆಶ್ರಯವ ಮಾಡಬೇಕೆಂಬ ನೇಮಕವ ಮಾಡುವರಲ್ಲದೆ, ದೇವರ ಪಂಚಮುಖ ಆಕಾಶವೆಂದರಿಯರೀ ಲೋಕ. ದೇವರಿಗೆ ಪ್ರಾಣಪ್ರತಿಷ್ಠೆಯ ಮಂತ್ರ ಹೇಳುವರಲ್ಲದೆ, ದೇವರ ಆರನೆಯ ಮುಖ ಆತ್ಮಪ್ರಾಣವೆಂದರಿಯದೀ ಲೋಕ, ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ದೆಸೆದಿಗ್ವಲಯದಲ್ಲಿ ಪಸರಿ ಪರ್ಬಿತ್ತು ನಿನ್ನ ನಾಮ. ವಸುಧೆಯೆಲ್ಲವು ಹೆಣ್ಣು, ನೀನು ಗಂಡು. ಬಸವಾಕ್ಷರತ್ರಯಂದುದ್ಭವಿಸಿ ಸಕಲ ಬ್ರಹ್ಮಾಂಡಂಗಳಾದವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ದರಿದ್ರಂಗೆ ಧನದಾಸೆ, ಶೂರಂಗೆ ರಣದಾಸೆ, ಕಾಮಿಗೆ ಸ್ತ್ರೀಯಾಸೆ, ನೀಚಂಗೆ ಕಲಹದಾಸೆ, ಪಂಡಿತಂಗೆ ಸಭೆಯಾಸೆ, ಕೋಗಿಲೆಗೆ ವಸಂತದಾಸೆ, ಪತತಿವ್ರತೆಗೆ ಗಂಡಸು ಮುನಿದಿಹನು[ಬಹ]ನೆಂಬಾಸೆ, ಎನಗೆ ಶ್ರೀಗುರು ಚೆನ್ನಬಸವ ಸ್ವಾಮಿಗಳ ಪಾದೋದಕದಾಸೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ದೇಹ ಕಂದಡೇನು? ದೇಹ ಇಂದುವಿನಂತಾದಡೇನು? ದೇಹ ಬಾತು ಬಿದ್ದಡೇನು? ದೇಹ ಇದ್ದ ಯೋಗ್ಯತೆಗೆ ಮೈಗೊಟ್ಟಡೇನಯ್ಯಾ? ಅಂತರಂಗ ಶುದ್ಧವಾದ ಬಳಿಕ ಹೇಗಿದ್ದಡೇನಯ್ಯಾ? ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ದೇವನಾನಂದದ ಭಕ್ತರ ನಿಲವ ಕೇಳಿರಯ್ಯಾ ಹರಿವ ನಯ ತೆರನಂತೆ ಹರವಾಗಿಪ್ಪರಯ್ಯಾ ತಾವು ಮಾಡುವರಲ್ಲದೆ ಮಾಟದೊಳಗಿರರು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ದೇಹಸಂಗವ ಕಳೆದು ವಾಯು ಪ್ರಾಣವ ಕೊಂದು ಕಾಯ ನಿರ್ಮಳತೆಯನು ಮಾಡಿ ಎನ್ನ ವಾಯದಲೋನ್ನತದ ವ್ಯಾಕುಲವ ಬಿಡಿಸೀಗ ಏಕಾಕ್ಷರದ ಭೇದವನರುಪಿ ಚತುಃಪದವನತಿಗಳೆದು ಶುದ್ಧ ಆನಂದ ಭಾವತ್ರಯ ಲಿಂಗ ಮೂಲವನು ಮಾಡಿ [ಭಾ]ವಿಸುತ ಸಕಳ ನಿಃಕಳ ತತ್ತ್ವ ತುರೀಯ ತ್ವಂಪದ ತತ್ತ್ವಾರ್ಥವನೋರಂತೆ ಅರುಪಿದ ಆನಂದ ತತ್ವಾತೀತನು ಶ್ರೀಗುರು ಚೆನ್ನಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ದೇಹವ ನಿರ್ದೇಹಿಗೊಪ್ಪಿಸಿದಲ್ಲಿ ದೇಹ ನಿರ್ದೇಹವಾಗಿತ್ತು. ಮನವ ಲಿಂಗಕ್ಕರ್ಪಿಸಿದಲ್ಲಿ ಮನಲಿಂಗವಾಗಿ ಮನ ಲೀಯವಾಯಿತ್ತು. ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತಯ್ಯಾ. ದೇಹ ಮನ ಭಾವವಳಿದಲ್ಲಿ ಕಾರಣಕಾಯ ಅಕಾಯವಾಯಿತ್ತು. ಎನ್ನ ದೇಹದ ಸುಖವ ಲಿಂಗ ಭೋಗಿಸುವುದಾಗಿ, ಶರಣಸತಿ ಲಿಂಗಪತಿ ಎಂಬ ಭಾವ ಅಳವಟ್ಟಿತ್ತಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ದೇಶ ಪರಿಭಾಷೆಯಲ್ಲಿ ಅಸುರದ ಲಾಂಛನ ದೂಸೆಯಪ್ಪವರೆಲ್ಲರರಿಯಲಹುದೆ? ಸರ್ವೇಶ ಕಪಿಲಸಿದ್ಧಮಲ್ಲಿಕಾರ್ಜುನನ ಭಕ್ತಿ ಭಾಷೆಯಾದಂಗಲ್ಲದರಿಯಲಿಲ್ಲ
--------------
ಸಿದ್ಧರಾಮೇಶ್ವರ
ದೇವರ ದೇವನಾಣೆಯನೂ ರಾಣಿ ವಾಸದಾಣೆಯನೂ ಇಡರಯ್ಯಾ. ಹಾ! ಹಾ! ಅಯ್ಯಾ ಬೇಡಯ್ಯಾ, ಮೇಲೆಕರದಿಮ್ಮಿತ್ತು. ಅವರ ಹಿಂಬಲ್ಲುಮುಂಬಲ್ಲುಗಳನೆ ಕೂರಹದಲೆ ತರಿತರಿದು ನರಕದಲ್ಲಿಕ್ಕುವರು ಕಪಿಲಸಿದ್ಧಮಲ್ಲಿನಾಥನಾಳು ನೇಮಕರು.
--------------
ಸಿದ್ಧರಾಮೇಶ್ವರ
ದರ್ಪಣದಲ್ಲಿ ಮುಖವ ನೋಡುವರಲ್ಲದೆ, ದರ್ಪಹರನಲ್ಲಿ ಮುಖವ ನೋಡುವರೊಬ್ಬರೂ ಇಲ್ಲ, ನೋಡಯ್ಯಾ. ನ್ಯಾಯದಲ್ಲಿ ದ್ರವ್ಯವ ಕೊಡುವರಲ್ಲದೆ, ನ್ಯಾಯಾತೀತನ ಪೂಜೆಗೆ ಒಬ್ಬನೂ ಭಂಡಾರವೀಡಾಡಲಿಲ್ಲ; ಕಪಿಲಸಿದ್ಧಮಲ್ಲಿಕಾರ್ಜುನಗಳ್ಳರು!
--------------
ಸಿದ್ಧರಾಮೇಶ್ವರ
ದೇಶ ಪರಿಭಾಷೆಯಲ್ಲಿ ಅಸುರದಲಾಂದ್ಯನದ ಘಾಸಿಯಪ್ಪವರೆಲ್ಲರರಿಯಲಹುದೆ? ಸರ್ವೇಶ ಕಪಿಲಸಿದ್ಧಮಲ್ಲಿಕಾರ್ಜುನನ ಭಕ್ತಿಭಾಷೆವೋದಂಗಲ್ಲದರಿಯಲ್ಲ.
--------------
ಸಿದ್ಧರಾಮೇಶ್ವರ
ದೇವರು ಕೈವೀಸಕೆ ಅವರಿವರೆನ್ನೆ ಕಂಡಯ್ಯಾ! ನೆಲೆಗೊಳ್ಳಲೀಯದು ಮೊಲೆಗಳಲೆಸೆವೆ ನೀ ಅಯ್ಯಾ! ಭಾಷೆಯಾಳು ಕಾಮನು. ಕಪಿಲಸಿದ್ಧಮಲ್ಲಿನಾಥನೆಸರ ಹೇಳಿದವರನೆಸುವನಯ್ಯಾ.
--------------
ಸಿದ್ಧರಾಮೇಶ್ವರ
ದೇಹವ ಮುಟ್ಟಿದವರು ನಿರ್ದೇಹಿಯ ಮುಟ್ಟುವುದದು ದುರ್ಲಭವಯ್ಯಾ. ನಿರ್ದೇಹಿಯ ಮುಟ್ಟಿದವರು ದೇಹವ ಮುಟ್ಟರು ನೋಡಯ್ಯಾ. ಮುಟ್ಟಿದವ ಕ್ಷಣಿಕ ಸುಖ ಕಂಡ; ಮುಟ್ಟದವ ನಿಜಾನಂದ ಸುಖ ಕಂಡ, ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ದೀಕ್ಷಾತ್ರಯದಲ್ಲಿ ಸಂಪನ್ನರಾಗಿ, ಪ್ರಸಾದದ್ಲ ಲೋಲುಪ್ತರಾಗಿ, ಜಂಗಮವೆ ಲಿಂಗವೆಂಬವರ ಸಂಗದೊಳಿರಿಸೆನ್ನ ಕಪಿಲಸಿದ್ಧಮಲ್ಲಿಕಾರ್ಜುನಲಿಂಗ ನಿಮ್ಮ ಧರ್ಮ.
--------------
ಸಿದ್ಧರಾಮೇಶ್ವರ
ದೇಹ ನಾನಲ್ಲ, ಜೀವ ನಾನಲ್ಲವೆಂಬುದದು ಶಿವನೆನಿಸಿತ್ತು. ಶಿವ-ಜೀವಂಗೆ ಭೇದವೆಂಬುದು ಇಲ್ಲ ಕಾಣಾ. ಉದಕವಿದ್ದೆಡೆಯಲ್ಲಿ, ಗಗನಪರಿಪೂರ್ಣದಲ್ಲಿ, ರವಿ ತಾರೆ ಮೇಘವಾದಂತೆ- ಪರಿಪೂರ್ಣ ವಸ್ತುವೆ ಚಿದಾಕಾಶದಲ್ಲಿ ಶಿವ ಜೀವ ಮಾಯಾ ಪ್ರಕೃತಿ ಎನಿಸಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...