ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಓಂ ಜಯ ಪರಮೇಶ್ವರಂ ಪರಮಾತ್ಮಂ ಈಶ್ವರನುರ್ವಿಪರ್ವಿ ಅಡಗಿಕೊಂಡಿಪ್ಪನು. ಒಬ್ರ್ಬಣಿಗೆಯಾಗಿ ಯೋಗಿಗಳ ಮನದ ಸಂಸಾರ ತೆಪ್ಪದೊಳಗೆ ಆನೀಗ ಅದ್ದು ಅಳಲುತಪ್ಪೆನಯ್ಯಾ, ಬೇಗ ಬಾರ ಬಾರಯ್ಯಾ ಬಾರಾ. ವಜ್ರಲೇಪದ ಬಿದ್ದಿದ್ದೇನೆ, ಬೇಗ ಬಂದೆತ್ತಯ್ಯಾ ಎತ್ತಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಓದುವುದದು ಸದ್ಗುಣಕ್ಕಲ್ಲದೆ ಕಿವಿಯನೂದುವುದಕ್ಕೇನೋ, ಅಯ್ಯಾ? ಮಾಡುವ ಭಕ್ತಿ ಮೋಕ್ಷಕ್ಕಲ್ಲದೆ ಡಂಬಾಚಾರಕ್ಕೇನೋ, ಅಯ್ಯಾ? ಆಡುವ ವೇಷ ದ್ರವ್ಯಕ್ಕಲ್ಲದೆ ಜನರಾಡಂಬರಕ್ಕೇನೋ, ಅಯ್ಯಾ? ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಓರಂತೆ ಮಾಡಯ್ಯಾ ನಿನ್ನವರೊಳಗೆ ಮನ್ನಣೆಯಿಂದ ಮಚ್ಚಿಸಯ್ಯಾ ನಿನ್ನವರ ಪಾದೋದಕವ ನಚ್ಚಿಸಯ್ಯಾ, ನಿನ್ನವರ ಪ್ರಸಾದವ ನಚ್ಚಿಸಿ ಮಚ್ಚಿಸಿ ಮನಕ್ಕೆ ನೀನೇ ಮಂಗಳವಾಗಿ ಅಚ್ಚಿಗಬಡಿಸದಂತಿರಿಸಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಓದಿದ ಫಲ ಶಿವಲೆಂಕ ಮಂಚಣ್ಣಂಗಾಯಿತ್ತು. ಓದಿದ ಫಲ ಹಲಾಯುಧಂಗಾಯಿತ್ತು. ಓದಿದ ಫಲ ಮಲಯರಾಜಂಗಾಯಿತ್ತು. ಓದಿದ ಫಲ ಜನ್ಮವಳಿದವಂಗಾಯಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಓದ ಫಲ ಕೂಚಭಟ್ಟನಂತಾಗಬಾರದು. ಓದ ಫಲ ಪರಾಶರನಂತಾಗಬಾರದು. ಓದ ಫಲ ಮಯೂರನಂತಾಗಬಾರದು. ಓದ ಫಲ ನಮ್ಮ ಹಾವಿನಹಾಳ ಕಲ್ಲಯ್ಯನ ಮನೆ ಶ್ವಾನನಂತಾಗಬೇಕು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ