ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಂದು ಮಣಿಪರೀಕ್ಷೆಗೆ ಮೂವತ್ತಾರು ಮಣಿ ನೋಡಿದೆನಯ್ಯಾ. ಮೂವತ್ತಾರು ಮಣಿ ಕೂಡಿ ಒಂದು ಮಣಿ ಪರೀಕ್ಷಿಸಿದಡೆ, ಮೂವತ್ತಾರು ಮಣಿ ಇಲ್ಲ ನೋಡಯ್ಯಾ. ಪರೀಕ್ಷೆಯಾಗದಿರೆ, ಆ ಮಣಿಗಳು ಮಣಿಮಣಿಗೆ ಸೇರ್ಪಡೆಯಾದವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಒಣಗಿದ ಮರವದು ಭೂಮಿಯಲ್ಲೇ ಲೀನ ನೋಡಾ, ಒಣಗದ ಮರವದು ಭೂಮಿಯಲ್ಲೇ ಲೀನ ನೋಡಾ, ತಿಳಿದ ಯೋಗಿಯ ಲಯವಿಲ್ಲೆ! ಸ್ವರ್ಗಕ್ಕೆ ಹೋದೆಹೆನೆಂಬುದು ಗೊಡ್ಡು-ಹುಸಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಒಂದೇ ವಸ್ತು, ತನ್ನ ವಿಚಿತ್ರಮಹಿಮೆಯ ಕೇಳುವಲ್ಲಿ ಕರ್ಣವಾಗಿ, ಸ್ಪರ್ಶಿಸುವಲ್ಲಿ ತ್ವಕ್ಕಾಗಿ, ನೋಡುವಲ್ಲಿ ನೇತ್ರವಾಗಿ, ರುಚಿಸುವಲ್ಲಿ ರಸನೆಯಾಗಿ, ಪರಿಮ[ಳವಘ್ರಾಣಿ]ಸುವಲ್ಲಿ ಘ್ರಾಣವಾಗಿ ನಿಂದೆ ನೀ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಒಂದರಲ್ಲಿ ಓಂಕಾರ ಭವಿಸಿತ್ತು. ಎರಡರಲ್ಲಿ ವ್ಯಾಪ್ತಿ ಭವಿಸಿತ್ತು. ಮೂರರಲ್ಲಿ ಮುಕ್ತ್ಯಂಗನೆಯ ಸಂಗ ಸಮನಿಸಿತ್ತು. ನಾಲ್ಕರಲ್ಲಿ ಆ ಎಂಬ ಅಕ್ಷರದಂತುವನರಿದೆ. ಅಯ್ದರಲ್ಲಿ ಆ ಬ್ರಹ್ಮತಾತ್ಪರ್ಯಶುದ್ಧವ ನಿರೀಕ್ಷಿಸಿದೆ. ಆರರಲ್ಲಿ ಅವ್ಯಯ ಅನಿಮಿಷಸ್ಥಾನವ ಕಂಡೆ. ಮೀರಿದೆ ಮೂವತ್ತಾರ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ `ತತ್ವಮಸಿ' ಸಂಗಮದಲ್ಲಿ ಸಂಯೋಗಿಯಾದೆ.
--------------
ಸಿದ್ಧರಾಮೇಶ್ವರ
ಒಂದೊಂದು ಮಠದಲ್ಲಿ ತುಂಬಿ ಒಂಬತ್ತರಾಳಾಪ ಸಂಭ್ರಮ ಮೊರೆವುತದೆ ಅಯ್ಯಾ. ಆನತದ ಮೀರಿಪ್ಪ ಮೇಣು ಆದಿಯ ಆಧಾರದಿಂದತ್ತ ತುಂಬಿದಾ ಕೊಡದಲಿ ಒಂದು ಬಿಂದು ಭವಿಸಲು ಸಂದುದಖಿಳ ಬ್ರಹ್ಮಾಂಡವು. ಎನ್ನ ತಂದೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ನಿಮ್ಮ ಭಕ್ತಿಯಾದಂದ ವಾರುದ್ಥಿಯ ಪರಿಯಾಯ.
--------------
ಸಿದ್ಧರಾಮೇಶ್ವರ
ಒಳಗಣವರೈವರ ಎನ್ನ ಕಣ್ಣಿಂಗೆ ತಳವೆಳಗು ಮಾಡಯ್ಯಾ. ಬೆಳವಿಗೆಯ ಬೀಜವ ಬಿತ್ತಿ, ಆ ಫಲದ ರುಚಿಯನುಂಡುಕೊಳ್ಳಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಒಬ್ಬ ಸಿದ್ಧಸಾಧಕ ಚಿಗರಿಯ ಸಾಕುತಲಿದ್ದಾನೆ; ಮತ್ತೊಬ್ಬ ಸಿದ್ಧಸಾಧಕ ಚಿಗರಿಯ ಮರಿಯ ಸಾಕುತಲಿದ್ದಾನೆ. ಆ ಸಿದ್ಧಸಾಧಕನ ನುಂಗಲು ಬರುತ್ತವೆ ಚತುರ್ದಶ ವ್ಯಾಘ್ರಂಗಳು. ನುಂಗಲು ಬಂದ ವ್ಯಾಘ್ರಂಗಳ ಚಿಗರಿಯು, ಚಿಗರಿಯ ಮರಿಯು ಹೊಡೆದುದ ಕಂಡು ನಾನಂಜಿ ಸಾಗರವ ಹೊಕ್ಕೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಒಪ್ಪು ಮೂರಾರರಲಿ. ಅಪ್ಪು ತಾನೆಂಟರಲಿ. ತಪ್ಪದೆ ತುರಿಯದನುಮಿಷವನಾದಾ. ತತ್ವ ತ್ವಮಸಿಯಪ್ಪ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಒಂದ ತೋರಿದಡದರ ಹಿಂದು ಮುಂದರಿದನೈ ಸಂದುಗೆಟ್ಟಾನಂದ ಸಕಲನಿಷ್ಕಲದಲ್ಲಿ. ಮುಂದಿಪ್ಪ ಬ್ರಹ್ಮಾಂಡದಂತರವನು ಅರಿದಾತ ಆನಂದಮಯ ಶಿಷ್ಯನೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಒಬ್ಬ ಮೂರ್ತಿ ಹಲವು ರೂಪಾಗಿ ಪೂಜಿಸಿಕೊಂಡ ನೋಡಾ, ಮನವೆ: ಆಂಗವಾಗಿ ತುಪ್ಪದ ಅಭಿಷೇಕ ಕೈಕೊಂಡ; ಅಮೃತಲಿಂಗವಾಗಿ ಅಮೃತದಭಿಷೇಕ ಕೈಕೊಂಡ; ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವಾಗಿ ಸರ್ವಾಭಿಷೇಕ ಕೈಕೊಂಡ ನೋಡಾ ಮನವೆ.
--------------
ಸಿದ್ಧರಾಮೇಶ್ವರ
ಒಂದಾಕಳು ಒಂಬತ್ತೂರ ಸೋದು ಸವಿಯಹೋದಡೆ, ಕೈವಲ್ಯ ಸೂರೆಯೆಲ್ಲಿಹುದಯ್ಯಾ? ಒಂಬತ್ತು ಆಕಳು ಒಬ್ಬ ಸೋದ ಸವಿಗಾರಂಗೆ ಬೇಹುದೇನಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ಒಂದು ಮುಳ್ಳು ಮೂರು ಲೋಕದ ಜನರಿಗೆ ನಟ್ಟಿತ್ತು. ಆ ನಟ್ಟ ಮುಳ್ಳು ಮುರಿಯಬೇಕೆಂದಾರರಿಯರು. ಆ ಮುಳ್ಳು ಮುರಿದವ ಮೂಲೋಕದರಸು ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ, ಹಾವಿನಹಾಳ ಕಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಒಂದು ಮೂಲಸ್ತಂಭವಿಡಿದ ದೇವಾಲಯದಲ್ಲಿ ಚಂದಚಂದದ ಬಾಗಿಲು ಮೂವತ್ತಾರು. ಒಂದೊಂದು ಎಂಟೆಂಟೆಂಬ ಘನಕ್ಕೆ ಘನ ಸಂತಸ ಸುಖವಾಯಿತ್ತಯ್ಯಾ. ಇಂದ್ರಿಯಾರ್ಪಣ ಸುಖಗೋಷಿ* ಸಾಧ್ಯವಾಯಿತ್ತಯ್ಯಾ. ನಿಮ್ಮ ದಯದಿಂದ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಒಡಲು ಪ್ರಾಣವನ್ನು ಇಕ್ಕಿ ಒಡಗೂಡಿದ ಶರಣರ ಒಡಗೂಡಿರಿಸಾ ಎನ್ನನು. ನುಡಿಯ ಬ್ರಹ್ಮಾಕ್ಕಾನಾರೆನು ಅಯ್ಯಾ ಎನ್ನ. ಅಡಿಗಡಿಗೆ ಎನ್ನ ಜರಿಯದೆ. ಎಲೆ ಮೃಡನೆ, ಶೂನ್ಯ ತಾನಾದ ಕರುಣನಾಗು ಕಪಿಲಸಿದ್ಧಮಲ್ಲಿನಾಥಯ್ಯ.
--------------
ಸಿದ್ಧರಾಮೇಶ್ವರ
ಒಲುಮೆಯ ನಲ್ಲನನು ಒಲಿಸಿ ನೆರೆದೆನೆಂಬ ಮರುಳತನವನೇನೆಂಬೆನಯ್ಯಾ. ಒಲಿಸಲೇಕೆ? ತಾನೆ ಒಲಿದಾನು. ನಿನ್ನಲ್ಲಿ ದೃಢಕೆ ಸಂಬಂಧ ಸಮನಿಸಲುಳ್ಳಡೆ ತಾನೆ ಒದಾನು. ನಿನ್ನಲ್ಲೀಕ್ಷಾತ್ರಯ ಸಂಪನ್ನತೆಯುಳ್ಳಡೆ ತಾನೆ ಒದಾನು. ಒಲಿದಾನು. ಒಸದೊಡೊಲಿವನೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಒಬ್ಬರಸು ಮೋಹಿತನಾಗಿ, ಅಂದೇ ಲಗ್ನವಾಗಿ, ಅಂದೇ ರತಿಯಾಗಿ ಅಂದೇ ಪತಿ ಮೃತಿಯಾದ ದರಿದ್ರ ನಾರಿಯ ತೆರನಾಯಿತ್ತೆನ್ನ ಮನ. ಒಬ್ಬರಸು ಭೂಪ್ರದಕ್ಷಿಣೆ ಮಾಡಿ ಭೂದೇವಿಯ ಮಗನ ಜನನ ವಾರ್ತೆಯನಂದೇ ಕೇಳಿ, ಅಂದೇ ಮಗನ ಮೃತಿಯಾದರಸನ ಮನವಾದ ತೆರನಾಯಿತ್ತೆನ್ನ ಮನ. ತನ್ನ ಕೊಟ್ಟು ತಾ ಹೋದಡೆ ಗುರುಸ್ಥಲ ಹೋಯಿತ್ತು. ಲಿಂಗಸ್ಥಲ ಹೋಯಿತ್ತು, ಜಂಗಮಸ್ಥಲ ಮೊದಲೆ ಹೋಯಿತ್ತು. ಇನ್ನಾರ ಪಾದವಿಡಿವೆ? ಕಪಿಲಸಿದ್ಧಮಲ್ಲಿಕಾರ್ಜುನ ಚೆನ್ನಬಸವ ಮಹಾಪ್ರಭುವೆ.
--------------
ಸಿದ್ಧರಾಮೇಶ್ವರ
ಒಂದೊಂದು ವೇಷ ದುರ್ವೇಷದಲ್ಲಿ ಬಂದುದ ಮಾಡಿದ ಮೇಲೆ ಕಂಡ! ಓಓ! ಅಯ್ಯಾ. ಪೂರ್ವಾಚಾರಿಯ ಮರೆಯರಾ, ಹಾ! ಹಾ! ಅಯ್ಯಾ. ಅಲ್ಲಿ ಭಕುತಿ ವಿಕೃತಿಗಳ ಮಾಡುವರೆ? ಕಪಿಲಸಿದ್ಧಮಲ್ಲೇಶ್ವರನನು ಕಂಡಾ!
--------------
ಸಿದ್ಧರಾಮೇಶ್ವರ
ಒಂದೊಂದು ಪರಿಯ ಪ್ರಕೃತಿಯ ಬೊಂಬೆಗಳಾಡಕೆ ಕಂಡೂ ಕಾಣದಂತೆ ಸೀಯ್ಯರವರು. ಗಂಡುಗ ಕಾಮನನು ಭಂಡುಮಾಡಿಯೆ ತಗುಳದ ಗಂಡುಗ ಶರಣರಾಳಯ್ಯಾ ನಾನು. ಕಾಮಹರ ನಿಸ್ಸೀಮ ಕಪಿಲಸಿದ್ಧಮಲ್ಲೇಶಾ ಶರಣು ಶರಣೆಂಬೆನಯ್ಯಾ ನಿಮ್ಮವರ ಶ್ರೀಚರಣಕ್ಕೆ
--------------
ಸಿದ್ಧರಾಮೇಶ್ವರ
ಒಂದೆ ವಸ್ತು ಅವಸ್ಥಾತ್ರಯ ಕಿಂಚಿದಜ್ಞತ್ವ ಹೊಂ ಜೀವನೆನಿಸಿತ್ತಯ್ಯಾ, ಆ ಜೀವ ಕರ್ತೃತ್ವಭೋಕ್ತೃತ್ವಕ್ಕೆ ಒಳಗಾಗಿ `ದೇಹ ನಾನು' ಎಂದಿತ್ತಯ್ಯಾ. `ದೇಹ ನಾನು' ಎಂಬುವ ವಾಸನೆಯೊಳಗಾಗಿ, ಕಾಲತ್ರಯಕ್ಕೊಳಗಾಗಿ, ಅಸ್ವತಂತ್ರನಾಗಿ ನೆಲಸಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಒಳಗೆಯೆಂದಡೆ ಹೊರಗೆ ಹತ್ತುವೆ. ಹೊರಗೆಯೆಂದಡೆ ಒಳಗೆ ಹತ್ತುವೆ. ಅಯ್ಯಾ, ಹಾ! ಅಯ್ಯಾ; ಹಿಡಹಿಡಿಯೊಳಗೊಂಬತ್ತೆಡೆಯ ತಿರುಗಿ ಹೋದೆಯಯ್ಯಾ. ಹಾ! ಅಯ್ಯಾ, ಕಣ್ಣೀರ ಕಣ್ಣೊಳಗಡಗುವೆ ಕಪಿಲಸಿದ್ಧಮಲ್ಲಿನಾಥಯ್ಯ.
--------------
ಸಿದ್ಧರಾಮೇಶ್ವರ
ಒಂದು ಕೈಯಾದುದು ಗಂಡು. ಅಂದು ಲಗ್ನವಾಗಬೇಕೆಂದು ಬಂದನಯ್ಯಾ ಲಿಂಗವು. ಆ ಲಿಂಗ ರಮಣನಾಗಬೇಕೆಂದು ಹೋದಡೆ ನೆರೆದು ಸುಮ್ಮನಾದ ನೋಡಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಒಂದಾದವಂಗೆ ಬಂದ ಸುಖದುಃಖಂಗಳ ಭಂಗವೇನಯ್ಯಾ? ಒಂದಾದವಂಗೆ ಇಂದುಧರನೊಲವೇನಯ್ಯಾ? ಒಂದಾದವಂಗೆ ಕನಕಲೋಷ*ವೆಂಬುದೇನಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಒಡೆಯರುಳ್ಳ ತೊತ್ತಾನು; ತಾಯುಳ್ಳ ಶಿಶುವಾನು; ಸ್ವತಂತ್ರವೇಕಯ್ಯಾ, ನಿಮ್ಮವರ ನಡುವೆ ಎನಗೆ? ನಿಮ್ಮವರು ಎನ್ನನೊಲ್ಲದಿದ್ದ ದುಃಖವನು ಮರೆವೆ ನಾನು; ನಿಮ್ಮವರಾಜೆÐಯ ಮೀರಿದೆನಾಯಿತ್ತಾದಡೆ ನಿಮ್ಮಾಣೆಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಒಂದೆ ವಸ್ತು ಭೇದವಾಗಿ ಕಾಡಿತ್ತಯ್ಯಾ: ಎನ್ನ ದೇಹ ವಸ್ತುವೆಂದಡೆ, ಹಲವು ರೂಪಾಗಿ ತೋರಿತ್ತು, ಕಾರಣ ವಸ್ತುವೆಂದಡೆ, ಸ್ಥೂಲಸೂಕ್ಷ್ಮ ್ಕಳಿಯದೆ ಹೋಯಿತ್ತು, ಕಾರಣಾತೀತವೆಂದಡೆ, ಸಾಕ್ಷಿಯಾಗಿ ಕ್ರಿಯಂಗಳ ಮಾಡಿಸಿತ್ತು. ಸಾಕ್ಷಿಯಾಗಿ ನಿಂದರಿವೆ ವಸ್ತುವೆಂದಡೆ, ಚೇತನವಾಗಿ ನಿಂದಿತ್ತು. ಇದರಿರವ ಬಲ್ಲಾತನೆ ಭಕ್ತ, ನೋಡಿ ಬಯಲಾದಾತನೆ ಜಂಗಮ, ಬಯಲಾಗಿ ರೂಪಕ್ಕೆ ಬಂದಾತನೆ ಪ್ರಾಣಲಿಂಗಿ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಒಂದಿಲ್ಲದಡೆ ಪರ್ವತ ಸಂಧಿಯದೇಕಯ್ಯಾ ಯತಿಗೆ? ಅಂದಾಶ್ರಯಿಸಿದ ಮಯೂರ ಚಂದವಾಯಿತ್ತೇನಯ್ಯಾ? ಇವೆಲ್ಲ ಬರಿಯ ಭ್ರಮೆ! ಸಂದಳಿದು ಇಂದುಧರ ತಾನಾಗಬಲ್ಲಡೆ, ಗಿರಿ ಗ್ರಾಮ ವನವಾಸದ ಗೊಂದಿ ಏಕಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...