ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿಮ್ಮನರಿವರನರಿವೆನಯ್ಯಾ. ನಿಮ್ಮ ಮರೆವರ ಮರೆವೆನಯ್ಯಾ. ಮಾಯಿದೇವಿಗೆ ಮತವ ಕೊಟ್ಟು ಎಲ್ಲ ಹಿರಿಯರ ಜರಿವೆಯಯ್ಯಾ. ಇವೆಲ್ಲವ ತೋರಿ ನೀ ಗೆಲುವೆಯಯ್ಯಾ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ನಿಜವ ನಂಬಿದ ಬ್ರಹ್ಮ ಅಜಲೋಕದಲ್ಲಿಪ್ಪ. ಭಜನಾಕ್ಷರದ್ವಯದ ಸಿಂಹಾಸನದ ನೆಲೆಯ ಮೇಟ್ಟು ಕುರುಹುಗೆಡಬಲ್ಲಡೆ, ತೆರಹಿಲ್ಲ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನೀನು ಸಕಲದಲ್ಲಿ ಸ್ವಾತ್ಮಿಸುವ ಭೇದವ ನೀನು ನಿಃಕಲದ್ಲ ಪ್ರವೇಶಿಸುವ ಭೇದವ ನೀನು ಸಕಲ ನಿಃಕಲಾತ್ಮಕವಾಗಿ ತೊಳಗಿ ಬೆಳಗುತಿಪ್ಪ ಭೇದವ ಅರಿಯಬಹುದೆ ಎಲ್ಲರಿಗೆ? ಆನಂದಸ್ಥಾನದಲ್ಲಿ ಬೆಳಗುತ್ತಿಪ್ಪ ಅಕ್ಷರದ್ವಯದ ಭೇದವ ಅನ್ಯರಿಗೆಂತರಿಯಬಹುದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನಿರ್ವಾಣ ಹೋಹರ ಕಂಡರೆ ಅವರನರಿವ ಕೇಳಿರಣ್ಣಾ. ಕ್ರೋಧ-ಲೋಭ-ಹರುಷಾವೆರಸಿಹರ ಕಾಣೆವಣ್ಣಾ. ಅಯ್ಯಾ, ಅನೀಸುವೆರಸಿ ನಿರ್ವಾಣಿಯೆಂದರೆ, ಕಪಿಲಸಿದ್ಧಮಲ್ಲಿನಾಥಯ್ಯನು ನಗುವನಯ್ಯಾ.
--------------
ಸಿದ್ಧರಾಮೇಶ್ವರ
ನಲ್ಲನ ನೋಟದ ಬೇಟದ ಕೂಟದ ಪರಿಯ ನಾನೇನೆಂದು ಹೇಳುವೆ? ವಿಪರೀತ ಕೆಳದಿ. ಕೂಟದ ಸುಖದಲ್ಲಿ ನೋಟ ಕಂಬೆಳಗಾದಡೆ ಬೇಟ ಬೇರುಂಟೆ? ಹೇಳು ಅವ್ವಾ. ನೋಡಿದ ದೃಷ್ಟಿ ಎವೆಗುಂದದೆ? ಮೋಹದ ಪರಿ ಎಂತುಂಟು? ಹೇಳಾ ಅವ್ವಾ. ನೋಟ ಬೇಟ ಕೂಟ ಸಮಸುಖ ಸಮರತಿಯಾದಡೆ ಕಪಿಲಸಿದ್ಧಮಲ್ಲಿನಾಥಯ್ಯಾ ಬೇರಿಲ್ಲವವ್ವಾ.
--------------
ಸಿದ್ಧರಾಮೇಶ್ವರ
ನೀಲಬಿಂದುವಿನಲ್ಲಿ ಲೋಲುಪ್ತರೆಲ್ಲರೂ ಆಲಸ್ಯವೇನವ್ವ ಅವನೆಡೆಗಳಲ್ಲಿ. ಬಾಲಕನ ಕನಸಿನ ಮೇಲೆ ತಾನಾದೊಡೆ ಆಲಸ್ಯವಿಲ್ಲವದು ಮುಂದೆ ತತ್ವಂಗಳ ಎರಡು ಮೂರನು ಐದನಾಲ್ಕು ಏಳನು ಎಂಟ ಏಕಮಾಡಿ ಕೂಡುವ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ನುಡಿದೆಹೆನೆಂಬ ಉಲುಹಿನ ಗಲಭೆಯ ತೋಟಿ ಬಿಡದು. ಉತ್ತಮ ಮಧ್ಯಮ ಕನಿಷ್ಠವೆಂಬುವ ತಿರುಗಿ ಕಂಡೆಹೆನೆಂಬ ಕಾಲಿನ ಎಡೆಯಾಟ ಬಿಡದು. ಎನಗೆ ಗರ್ವ ಮೊದಲಾದಲ್ಲಿ ನಿಮಗೆ ಗರ್ವ ವೆಗ್ಗಳವಾಯಿತ್ತು. ಈ ಉಭಯ ತೋಟಿಯ ನಾನಿನ್ನಾರಿಗೆ ಹೇಳುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ನೋಟವೆ ಕೂಟವಾಗಿ ಕೂಟವೆ ಜೀವನವಾಗಿ ನಿರ್ದಾಟಿಸುವ ಗಂಡನೆನಗೆಂದಪ್ಪನಯ್ಯಾ, ಎಂದಪ್ಪನಯ್ಯಾ? ಅಪ್ಪು[ವೆ] ಗುರುಕರುಣಂದ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನಡೆ ನೋಡುವ ಸುಖದ ಸುಗ್ಗಿ ನೀನೆ ಅಯ್ಯಾ, ಕಾಯ ಜೀವದ ಗುಣ ನೀನೆ ಅಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ. ||
--------------
ಸಿದ್ಧರಾಮೇಶ್ವರ
ನಿಮ್ಮ ನುಡಿಯ ಇರವಿನಂತೆ, ಪ್ರಮಥರ ಇರವೊ, ನಿಮ್ಮ ಇರವೊ? ಒಂದಕ್ಕೊಂದು ಒಂದಕ್ಕೊಂಬತ್ತು ಮಾಡಿ ನುಡಿದಡೆ, ಸಹಜವೆಂಬುವ ಭಾವ ಅದೆಂತು? ಕಪಿಲಸಿದ್ಧಮಲ್ಲಿಕಾರ್ಜುನ ಶರಣರಲ್ಲಿ ಸಹಜಪ್ರೇಮವುಳ್ಳಡೆ, ಸಕಲರ ನುಡಿಯೆ ಇಷ್ಟ ಕೇಳಾ, ಕಿನ್ನರಯ್ಯಾ.
--------------
ಸಿದ್ಧರಾಮೇಶ್ವರ
ನೀನು ತಾನು ಹಿಡಿಯದುದೆಲ್ಲವ ತೇಜದಲುಡಿಸಿ ಹೆರರಿಗೆ ಭಾಜನ ಮಾಡಿದೆಯವ್ವ ನೀನಿವನಲ್ಲಿದ್ದು ಉಣ್ಣದೆ ಹೋದೆ ಮಗಳೆ. ಅವ್ವಾ, ಇಂತು ಬರಿದಾಗಿ ಬರಿದಾತನ ಕೂಡಿದೆ ಕಪಿಲಸಿದ್ಧಮಲ್ಲಿನಾಥನನೆಯವ್ವಾ.
--------------
ಸಿದ್ಧರಾಮೇಶ್ವರ
ನೀರಿಲ್ಲದ ಭೂಮಿಯಲ್ಲಿ ಮೂರು ಹೇರು ನವಣೆಯ ಬೆಳೆದುದ ಕಂಡೆ. ಆ ನವಣೆ ಅಳೆದುಕೊಡುವಡೆ ಇಮ್ಮಡಿ ಮುಮ್ಮಡಿಯಾದುದ ಕಂಡೆ. ಕೊಂಡವಂಗೆ ಜನ್ಮಜನ್ಮದಲ್ಲಿ ಭೋಗಿಸುವುದಕ್ಕೆ ಕಣಜಗಳಾದುದ ಕಂಡೆ. ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ನೀರ ಕ್ಷೀರದ ಸಂದುಗಳ ಹಂಸೆ ಬಿಚ್ಚಬಲ್ಲುದು, ನೋಡಯ್ಯಾ. ದೇಹದ ಜೀವದ ಸಂದ ನೀವು ಬಿಚ್ಚಬಲ್ಲರಲ್ಲದೆ ನಾನೆತ್ತ ಬಲ್ಲೆನಯ್ಯಾ? ನೀವಿಕ್ಕಿದ ತೊಡಕ ಬಿಡಿಸಬಾರದು; ನೀವು ಬಿಡಿಸಿದ ತೊಡಕನಿಕ್ಕಬಾರದು. ಕಪಿಲಸಿದ್ಧಮಲ್ಲಿನಾಥಯ್ಯಾ, ಎನ್ನ ಕಾಯದ ಜೀವದ ಹೂಗೆಯ ಬಿಡಿಸಾ, ನಿಮ್ಮ ಧರ್ಮ.
--------------
ಸಿದ್ಧರಾಮೇಶ್ವರ
ನೆನೆವರ ಮನದೊಳಗೆ ಮನೆಗಟ್ಟಿಯಿಪ್ಪೆ ನೀನಯ್ಯಾ. ನಂಬಿದ ಶರಣರಿಗೊಲಿದು ಕೈಲಾಸವನೊಪ್ಪೆ ನೀನಯ್ಯಾ. ನಿಮ್ಮ ನಂಬಲೊಡನೆ ಕೈಲಾಸದಲೊಡಬೀಡಾಗಿಪ್ಪೆಯಯ್ಯಾ, ಎನ್ನ ಕಪಿಲಸಿದ್ಧಮಲ್ಲೇಶ್ವರದೇವ.
--------------
ಸಿದ್ಧರಾಮೇಶ್ವರ
ನಿತ್ಯ ನಿತ್ಯ ಕೋಣವ ತಿನ್ನಬಲ್ಲಡೆ, ಸದಾಚಾರಿ ಜಂಗಮವೆಂಬೆ. ನಿತ್ಯ ನಿತ್ಯ ಕೋಡಗನ ಹಿಡಿದು ಆಡುಗಳ ತಿನಬಲ್ಲಡೆ ಪ್ರಾಣಲಿಂಗಿ ಎಂಬೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನೋಡಿ ನೋಡಿ ಕಂದದಿದ್ದಡೆ, ಕೂಡಿ ಕೂಡಿ ಲೀಯವಾಗದಿದ್ದಡೆ, ಆ ನೋಟ ಕೂಟ ಏತಕ್ಕೆ ಹೇಳಾ, ಎಲೆ ಅವ್ವಾ? ಕಪಿಲಸಿದ್ಧಮಲ್ಲಿಕಾರ್ಜುನಾ, ನಿನ್ನ ಕೂಡಿ ನೀನಾಗದಿದ್ದಡೆ, ಆ ನೋಟ ಕೂಟ ಏತಕ್ಕೆ ಹೇಳಾ ಅವ್ವಾ?
--------------
ಸಿದ್ಧರಾಮೇಶ್ವರ
ನದಿಯ ನೀರು ಹೋದುವಯ್ಯಾ ಸಮುದ್ರಕ್ಕೆ ; ಸಮುದ್ರ್ ನೀರು ಬಾರವಯ್ಯಾ ನದಿಗೆ. ನಾನು ಹೋದೆನಯ್ಯಾ ಲಿಂಗದ ಕಡೆಗೆ; ಲಿಂಗ ಬಾರದು ನೋಡಯ್ಯಾ ನನ್ನ ಕಡೆಗೆ. ಮಗ ಮುನಿದಡೆ ತಂದೆ ಮುನಿಯನು; ನಾ ಮುನಿದಡೆ ನೀ ಮುನಿಯೆ ನೋಡಯ್ಯಾ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ನಾ ಮುನ್ನ ಉಳಿದೆ ಕಳೆದೆ ಮಿಂಡರ ನೀ ಹೋಗಿ ತಾರಗೆ ಅವ್ವಾ. ಚಿತ್ತವು ಮನವು ಹೋಗಿ ನಾನವನ ಹತ್ತಿದ ಮನವ ತರಲಿಕಾರೆನಹೊ. ಅಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ ನಾನೀಗ ಏಗೆಯ್ದರೂ ಬಿಡಲಾರೆನವ್ವ.
--------------
ಸಿದ್ಧರಾಮೇಶ್ವರ
ನನ್ನ ಕೋಪವೆಂಬುದು ನಿಮ್ಮ ಕಣ್ಣು ನೋಡಯ್ಯಾ; ನಾನೇತರೊಳಗೇನು ಹೇಳಯ್ಯಾ! ನಿಮ್ಮ ಜ್ಞಾನದ ತೇಜದ ಮುಂದೆ ಎನ್ನರಿವು ಏತರದು ಹೇಳಯ್ಯಾ! ಎನ್ನ ದಿಟದ ಭಕ್ತಿ ನಿಮ್ಮ ರೂಪು ಕಂಡಯ್ಯಾ. ಎನಗೆ ಬೇರೆ ಸ್ವತಂತ್ರತೆಯುಂಟೆ, ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ನಟ್ಟಡವಿಯೊಳಗೆ ಇರುಳು-ಹಗಲೆನ್ನದೆ ಅಪ್ಪಾ! ಅಯ್ಯಾ! ಎಂದು ನಾನರಸುತ್ತ ಹೋದಡೆ, `ನಾನಿದ್ದೇನೆ ಬಾ ಮಗನೆ' ಎಂದು ಕರೆದು, ಎನ್ನ ಕಂಬನಿದೊಡೆದು, ತನ್ನ ನಿಜವ ತೋರಿದ ಪಾದವಿಂದೆನ್ನಲ್ಲಿಗೆ ನಡೆದುಬಂದಡೆ ನಾನರಿಯದೆ ಮರುಳುಗೊಂಡೆಹೆನೆಂದು ಎನ್ನ ಮನದೊಳಗೆಚ್ಚರ ಮಾಡಿದೆ. ಆತನನರಸಿಕೊಂಡು ಬಂದೆನ್ನ ಹೃದಯದಲಿಂಬಿಟ್ಟುಕೊಂಬೆ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನನ.
--------------
ಸಿದ್ಧರಾಮೇಶ್ವರ
ನ ಒಂದರಲ್ಲಿ ವಾರ ಏಳು ನೋಡಾ. ಆ ಏಳು ವಾರಗಳೆಂಬುವುದು ಕಲ್ಪಿತವಲ್ಲದೆ ದೃಷ್ಟಿಯನ್ನಿಟ್ಟು ನೋಡಬಾರದು ನೋಡಾ. ದೇವರೆಂಬುವುದೊಂದು ನೋಡಾ. ಆ ದೇವರೆಂಬುವುದೊಂದರಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ವಿರಾಟ್ಪುರುಷರೆಂಬುವುದು; ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ನೋಟದ ಭಕ್ತಿ ಬಸವನಿಂದಾಯಿತ್ತು; ಕೂಟದ ಜ್ಞಾನ ಬಸವನಿಂದಾಯಿತ್ತು ಕಾಣಾ. ಎಲ್ಲಿಯ ಶಿವಜ್ಞಾನ ಎಲ್ಲಿಯ ಮಾಟಕೂಟ ಬಸವನಲ್ಲದೆ? ಮಹಾಜ್ಞಾನ ಮಹಾಪ್ರಕಾಶ ಬಸವಣ್ಣನ ಧರ್ಮವಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ನಾಗೇಶನ ತಿಳಿದೆವೆಂಬರು ಆನಾಗದೆ ಹೋದರು, ನಾಗಾಯಿ. ನಾಗಕುಂಡಲನರಿದೆವೆಂಬರು ನಾಗದೇವತೆಗಳಾದರು, ನಾಗಾಯಿ. ನಾಗಾಂಕನ ಅರಿದು ತಾನಾಗದೆ ನಾಗಕಂಕಣನಾದ, ನಾಗಾಯಿ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
--------------
ಸಿದ್ಧರಾಮೇಶ್ವರ
ನಾ ಬಲ್ಲೆನೈ ನಿನ್ನ, ನೀ ಬಲ್ಲೆಯೈ ಎನ್ನ. ಆರಯ್ಯ ಬಲ್ಲನೈ ಬಸವಣ್ಣನು. ಭಾನುವಿನ ಉದಯಕ್ಕೆ ಆಯಕ್ಷರ ಭೇದ ಆನತದಿ ನೀನಾದೆ ಬಸವ ತಂದೆ. ಸೀಮೆಗೆಟ್ಟಾ ಲೋಕ ಏನಾದಡೇನಯ್ಯಾ ಆನು ನಿನ್ನೊಳಗಡಗಿ ಐಕ್ಯಪದದ ಆನತವನೈದಿ ನಾ ಕೂಡೆ ಸುಖಿಯಾದ ಬಳಿಕೇನಾದಡೇನಯ್ಯ ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ನಿಶ್ಚಲ ಶರಣರ ಮನೆಯಂಗಳದಲ್ಲಿ ಅಷ್ಟಾಷಷ್ಟಿ ತೀರ್ಥಂಗಳು ನೆಲಸಿಪ್ಪವಯ್ಯಾ. ನೀನು ಇನಿಸುವೆರಸಿ ಒಲಿದಲ್ಲಿ ನೆಲಸಿಪ್ಪವಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ
--------------
ಸಿದ್ಧರಾಮೇಶ್ವರ

ಇನ್ನಷ್ಟು ...