ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಫಲಪದಾದಿಗಳ ಭಕ್ತರಿಗೆ ಕೊಟ್ಟೆನೆಂದೆಂಬೆ; ಅವರವನೊಲ್ಲರು! ಅವರು ನಿನಗೆ ನಿನ್ನ ರೂಪಿಂಗೆ ತನುಮನಧನಾದಿಗಳ ಕೊಡುವರು. ಎಲೆ ವಂಚಕನಾದ ಶಿವನೆ, ನಿರ್ವಂಚಕರೆಮ್ಮವರು! ನಿನ್ನನೇನ ಬೇಡುವರವರು? ನೀನೇನನವರಿಗೆ ಕೊಡುವೆ? ನಿನ್ನ ಕೊಡನೆಮ್ಮವರೊಲ್ಲರು ಕಾಣಾ, ಕೊಡು, ಕೊಡದೆ ಹೋಗು, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಫಲಪದವನತಿಗಳೆದು ಹಲವು ಸೀಮೆಯ ಮೀರಿ ಹೊಲಬುಗೆಟ್ಟಾತನ್ಕ ಬ್ರಹ್ಮವಾದ, ತನ್ನೊಳಗೆ ಜಗವಾಗಿ ಜಗದೊಳಗೆ ತಾನಾಗಿ ತನುಗುಣಕೆ ತಾ ದೂರವಾಗಿ. ಕುರುಹುಗೆಟ್ಟಾ ಸೀಮೆ ಹಲಬರೊಳಗಿದ್ದು ಒಲವು ನೀನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಫಲವ ಮೀರಿದ ಪದವು, ಪದವ ಮೀರಿದ ಸೀಮೆ, ಫಲಪದಕೆ ದೂರವಾಗಿಯೆ ಚಿತ್ರಿಸಿ ಕರುಣವ ಹಿಡಿದಾಚಾರ್ಯ ಕರುಣಶುದ್ಧತೆಯಿಂದ ತರುಣಿಯ ಮಸ್ತಕದ ಸಿಂಹಾಸನಾ ಕಾಲಕರ್ಮವ ಕಳೆದು ಬೆಳಗು ಬೆಳಗಿನಲೀಗ ತಿಳಿದ ಬ್ರಹ್ಮಾಂಡದಾ ಸೊಮ್ಮು ಭಕ್ತಿ ವೀರಮಾಹೇಶ್ವತಿರವು ಆರಿಗಾಗದು ದೇವ, ಸೋಹಮೆಂಬುದಕ್ಕತ್ಯ್ಕತಿಷ* ಕಾನನದ ಕಾವೋದ ಕಂಬನಿಯ ಭಾನು ತಾ ಕಪಿಲಸಿದ್ಧಮಲ್ಲೇಶ್ವರಾ
--------------
ಸಿದ್ಧರಾಮೇಶ್ವರ
ಫಲ ಪದವನತಿಗಳೆದು ಹೊಲೆಗಲಸಿ ದಲಗೆಟ್ಟು ಕುಲವನಾಳಿದವರಾರೊ ಅಯ್ಯಾ. ನೀ ಸಲ್ಲದಿನ್ನು ನೆಲೆಗಟ್ಟು ಬ್ರಹ್ಮದೊಳಗೆ, ಅಯ್ಯ, ನಿನ್ನ ಹೊಲೆಗಲಸಿ ಹೊರಗಾದೆ. ಅಯ್ಯಾ, ದಲವೆ ಫಲವಾಗಿ ಹೊಲೆಯ ನೆಲೆಯಾದಡೆ ಒಲವು ತಪ್ಪದು ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಫಲಪದಭವಕ್ಕೆ ತಾರರಯ್ಯಾ ನಿನ್ನ ಧರ್ಮ. ಫಲಪದದಿಂದ ಭವ, ಆ ಭವದ ನರಕ. ಇಂತಪ್ಪವನೆನಗೆಯು ಎನ್ನವರಿಗೆಯು ತೋರರಯ್ಯಾ, ನಿನ್ನ ಧರ್ಮ. ನಾನು ಎನ್ನವರು ನಿನ್ನನೇ ಬೇಡಿಕೊಂಬೆವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ