ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಾಗ್ರದಲ್ಲಿಹ ಮನುಷ್ಯಂಗೆ ಸ್ವಪ್ನ ಸುಷುಪ್ತಿ ಮಿಥ್ಯವೆಂಬುದು ಪ್ರಸಿದ್ಧ. ಸ್ವಪ್ನದಲ್ಲಿಹ ಮನುಷ್ಯಂಗೆ [ಜಾಗ್ರ] ಸುಷುಪ್ತಿ ಎಂಬುದು ತೋರಬಾರದು, ಸುಷುಪ್ತಿಯಲ್ಲಿ ಜಾಗ್ರ ಸ್ವಪ್ನವೆಂಬುದು ತಿಲಮಾತ್ರ ತಿಳಿಯಬಾರದು, ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಜ್ಞಾನ ಜ್ಞಾನವೆಂದು ಕೇಳಿದೆವಯ್ಯಾ ಗುರುಹಿರಿಯರಿಂದ. ಕೇಳಿದಲ್ಲಿ ಅಂಗವಾಲಿಲ್ಲ, ಕೇಳದೆ ಬಿಟ್ಟ್ಲಲ್ಲಿ ಅಂಗವಾಯಿತ್ತು. ಇದೇನು ಕೌತುಕ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಜ್ಞಾನವೆ ಕಾರಣವಾಯಿತ್ತು ಭಕ್ತಿಯ ವ್ಯಕ್ತಿಗೆ. ನಿಷ್ಠಾಭಾವವೆ ಕಾರಣವಾಯಿತ್ತು ನಿಮ್ಮ ಒಲುಮೆಗೆ, ನಿಮ್ಮ ಸಮರಸಕ್ಕೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜಗವನಾಡಿಸುವನು, ಜಗವನೇಡಿಸುವನು. ಜಗದ ನಟನಾಟಕನ ಪರಿಯ ನೋಡಯ್ಯಾ! ಜಗವ ರಂಜಿಸುವನು, ಜಗವ ಭುಜಿಸುವನು. ಜಗದೊಳಗಿಪ್ಪನು, ಜಗದ ಹೊರಗಿಪ್ಪನು. ಜಗಕೆ ತೋರಿಯೂ ತೋರದಂತಿಪ್ಪನು. ದರ್ಪಣದೊಳಗಣ ಪ್ರತಿಬಿಂಬದಂತಿಪ್ಪನು. ಉದಕ-ಪದ್ಮಪತ್ರದಂತಿಪ್ಪನು. ನಿಜಗುರುವೆ, ಸ್ವತಂತ್ರ ಕಪಿಲಸಿದ್ಧಮಲ್ಲೇಶ್ವರನೆ, ನೋಟ ತೀರಲೊಡನೆ ಜಗದಾಟ ತೀರಿತು.
--------------
ಸಿದ್ಧರಾಮೇಶ್ವರ
ಜಪ ತಪವ ಮಾಡಿದಡೇನಯ್ಯಾ ತಾನು? ನೇಮ ಸಮಾದ್ಥಿಯ ಮಾಡಿದಡೇನಯ್ಯಾ, ನಿಮ್ಮ ಪಾದೋದಕ ಪ್ರಸಾದವ ವರ್ಮವನರಿಯದನ್ನಕ್ಕ? ಮುಂಡೆಯ ಬದುಕಿಂಗೆ ಮೂಲಸ್ವಾಮಿಯ ಕುರುಹಿಡಬಹುದೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜನ್ಮವನೊಮ್ಮೆ ಧರಿಸಿದ ಬಳಿಕ, ಜನನವಿನಾಶ ವಿಗ್ರಹ ಮೂರ್ತಿಯ ಪೂಜಿಸಲೆ ಬೇಕು. ಜನ್ಮವನೊಮ್ಮೆ ಧರಿಸಿದ ಬಳಿಕ, ಶ್ರೀಶೈಲ ಮಹಿಮೆಯ ಸಾದ್ಥಿಸಿ ನೋಡಲೇಬೇಕು ನೋಡಾ, ಕಪಿಲಸಿದ್ಧಮಲ್ಲಿಗಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಜ್ಞಾನಕ್ರಿಯಾಗಳಿಂದ ಲಿಂಗದಲ್ಲಿ ನಿಬ್ಬೆರಗಾದ ನೀಲಮ್ಮನ ಪಾದದ ಕಂದ ನಾನು, ಪಾದದ ದಾಸ ನಾನು, ಪಾದದ ಪಾದುಕೆ ನಾನು, ಪಾದುಕೆಯ ಧೂಳಿ ನಾನು, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜ್ಞಾನಿಗಳು ತಾವಾದ ಬಳಿಕ, ಅನ್ಯರ ಸ್ತೋತ್ರಕ್ಕೆ ಒಳಗಾಗಬಾರದು. ಜ್ಞಾನಿಗಳು ತಾವಾದ ಬಳಿಕ, ಗುರುಹಿರಿಯರಿಗಂಜಿ ನಡೆಯಬೇಕು. ಜ್ಞಾನಿಗಳು ತಾವಾದ ಬಳಿಕ, ಅನ್ಯಸ್ತ್ರೀ ತನ್ನ ಮಾತೆಯಂತಿರಬೇಕು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜಪವೆಂಬುದು ಪಾಪಕ್ಕೆ ಬಹು ತಾಪ ನೋಡಯ್ಯಾ. ಜಪವೆಂಬುದು ಪುಣ್ಯದ ನಾಣ್ಯ ನೋಡಯ್ಯಾ. ಜಪವೆಂಬುದು ಚೆನ್ನಬಸವಣ್ಣನ ಪಾದದಲ್ಲಿಯೆ ಐಕ್ಯ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಜಂಗಮವಾದುದಕ್ಕೆ ಇದೆ ಚಿಹ್ನೆ ನೋಡಾ: ಅಂಗವಿಡಿದು ಲಿಂಗವ ಪೂಜಿಸುವ; ಲಿಂಗವಿಡಿದು ಅಂಗವ ಪೂಜಿಸ ನೋಡಾ. ಶತದಳ ಸಹಸ್ರಸೂರ್ಯವರ್ಣದ ಪದ್ಮದೊಳಿಪ್ಪ ಮಹಾಂಗವನರುಹಿ, ಪ್ರಾಣಂಗಿಯ ಕೂಟವನರಿಪಾತನೆ ಜಂಗಮ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಜಗದಗಲದಲಿ ಹಬ್ಬಿ ಲಿವುತೈದುದೆ ಮಾಯೆ. ಅದ ಕೆಡಿಸಿ ಎನ್ನ ಹರುಷಿತನ ಮಾಡಿ ಉರುತರ ಕೈವಲ್ಯ ಪದವನಿತ್ತಾ ಗುರು ನೀನು ಕಪಿಲಸಿದ್ಧಮಲ್ಲಿಕಾರ್ಜುನ ದೇವ ಗುರುವಾದಿಲೈ.
--------------
ಸಿದ್ಧರಾಮೇಶ್ವರ
ಜಲವಿಡಿಯ ಪರಿವಿಡಿಯ ಪದವಿಡಿಯ ಭವವಿಡಿಯ ಒಲವನೊಲ್ಲೆನು ಅವನಕಾಂಕ್ಷೆ ಇಲ್ಲ. ಗುರುಕರುಣದಾಜ್ಞೆಯ ಪರುಷಂಗವ ಪಡೆದು ಒಳಹೊರಗೆನ್ನದೆ ಭೇದಿಸುವೆನು ಶ್ರೀಗುರು ಚೆನ್ನಬಸವಣ್ಣ ಸಹರೂಪದ ಭಾವಶುದ್ಧನಪ್ಪೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜಯಸಮಯವನಪ್ಪಿದ ಕರ ಬಸವಾ, ಕರುಣಗೃಹ, ವಿಮಲ ಶುದ್ಧಸಮಯ ಭಾವಭರಿತ, ಭರಿತಪೂರ ಪುರೋಪಜೀವ, ನಮೋ ಬಸವಾ, ನಮೋ ಪ್ರಾಣಲಿಂಗಿ ಬಸವಾ, ಕಪಿಲಸಿದ್ಧಮಲ್ಲಿನಾಥಾ, ನಮೋ ಬಸವಾ.
--------------
ಸಿದ್ಧರಾಮೇಶ್ವರ
ಜಲದಲ್ಲಿ ಉದಯಿಸಿ ಮತ್ತೆ ಜಲವು ತಾನಲ್ಲ; ಜಲವೆಂದಿಪ್ಪುದೀ ಲೋಕವೆಲ್ಲಾ. ಪರಮಗುರು ಬಸವಣ್ಣ ಜಗವ ಪಾಲಿಸ ಬರಲು ಎನ್ನ ಪರಿಭವದ ದಂದುಗ ಹರಿಯಿತ್ತಯ್ಯಾ. ಆ ಸುದ್ದಿಯನರಿಯದೆ ಅನೇಕ ಜಡರುಗಳೆಲ್ಲ ಬೇಕಾದ ಪರಿಯಲ್ಲಿ ನುಡಿವುತ್ತಿಹರು. ಸತ್ತಪ್ರಾಣಿಯನ್ನೆತ್ತಿ ಒಪ್ಪಿಪ್ಪ ನಿಶ್ಚಯವು ಮತ್ರ್ಯದವರಿಗುಂಟೆ ಶಿವಗಲ್ಲದೆ? ಶಿವಗುರು ಬಸವಣ್ಣ, ಬಸವಗುರು ಶಿವನಾಗಿ, ದೆಸೆಗೆಟ್ಟ ದೇವತಾಪಶುಗಳಿಗೆ ಪಶುಪತಿಯಾದನು. ಬಸವಣ್ಣನ ನೆನಹು ಸುಖಸಮುದ್ರವಯ್ಯಾ! ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ತೋರಿರಾಗಿ ಬದುಕಿದೆನಯ್ಯಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಜನ್ಮಕ್ಕೊಮ್ಮೆ ಬಂದು `ಶಿವಾಯ ನಮಃ' ಎಂದಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು `ಹರಾಯ ನಮಃ' ಎಂದಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಬಸವನ ಪ್ರಸಾದವ ತೆಗೆದುಕೊಂಡಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಚೆನ್ನಬಸವಣ್ಣನ ಪಾದೋದಕ[ವ] ತೆಗೆದುಕೊಂಡಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಪ್ರಭುವಿನ ಪಾದಕ್ಕೆ ವಂದಿಸಿದಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಮಡಿವಾಳಣ್ಣನ ಅನುಭವದಲ್ಲಿದ್ದಡೆ ಸಾಲದೆ? ಜನ್ಮಕ್ಕೊಮ್ಮೆ ಬಂದು ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸಿದಡೆ ಸಾಲದೇನೋ ಕಲ್ಲಯ್ಯಾ
--------------
ಸಿದ್ಧರಾಮೇಶ್ವರ
ಜಂಗಮವಾಗಿ ಫಲವೇನಯ್ಯಾ, ಜಗದ ಹಂಗುದೊರೆಯದನ್ನಕ್ಕ? ಯೋಗಿಯಾದಲ್ಲಿ ಫಲವೇನಯ್ಯಾ, ನಿನ್ನಂಗ ಬರದನ್ನಕ್ಕ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಜ್ಞಾನಿಗಳಾದ ಬಳಿಕ ಪರಿಪೂರ್ಣ ಜಗತ್ತೆಂದರಿಯಬೇಕು. ಜ್ಞಾನಿಗಳಾದ ಬಳಿಕ ಪಾಪವಾಸನೆ ತೊರೆದಿರಬೇಕು. ಜ್ಞಾನಿಗಳಾದ ಬಳಿಕ ಅನ್ಯರ ನುಡಿಗೆ ಒಳಗಾಗಬಾರದು. ಜ್ಞಾನಿಗಳಾದ ಬಳಿಕ ಅನ್ಯರ ನಿಂದೆಗೆ ಒಳಗಾಗಬಾರದು, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜಲವ ತರದೆ, ಪಾವಕವ ಹೊತ್ತಿಸದೆ, ಪಾಕವ ಮಾಡಿ ಉಣಬಲ್ಲಡೆ ಐಕ್ಯನೆಂಬೆ, ಆರೂಢನೆಂಬೆ, ಆರುಸ್ಥಲವ ಮೀರಿದ ಮಹಾಯೋಗಿ ಎಂಬೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಜಗಪ್ರಳಯದ್ಲ ಸುಳಿಯಬಹುದು ಅನೇಕ ಯುಗಜುಗಂಗಳ್ಲ. ನಿಮ್ಮ ಶರಣರ ಚಿತ್ತ ಬೇಸರವಾದ್ಲ ಸುಳಿಯಬಾರದೊಂದು ನಿಮಿಷ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜಗದೆರೆಯ ಮಾಡಿದನೊಂದು ಕುರಿಮರಿಯ. ಆ ಕುರಿಮರಿ ಮೇಯುತ್ತಿದೆ. ಸರ್ವಜಗದವರೆಲ್ಲ ಅನಂತರಕ್ಕಸರು ಹಿಂಸೆ ಮಾಡುತಲೈದಿದರು. ಹೋದ ರಕ್ಕಸರು ಸತ್ತರು:ಇದ್ದ ಕುರಿಮರಿ ಇದ್ದಂತಿಪ್ಪುದು! ಇದೇನು ಕೌತುಕ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜ್ಞಾನಿಗಳು ತಾವಾದ ಬಳಿಕ ತ್ರಿಕಾಲ ಲಿಂಗವ ಪೂಜಿಸಬೇಕು. ಜ್ಞಾನಿಗಳು ತಾವಾದ ಬಳಿಕ ಜಂಗಮ ದಾಸೋಹದಲ್ಲಿರಬೇಕು. ಜ್ಞಾನಿಗಳು ತಾವಾದ ಬಳಿಕ ನುಡಿಕೊಟ್ಟು ತಪ್ಪಬಾರದು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜಾರನಲ್ಲವೆ ಭವಭವದಲ್ಲಿ ಸೌಂದರನಂಬಿ? ಜಾರೆಯಲ್ಲವೆ ಭವಭವದಲ್ಲಿ ಸೂಳೆ ಪದ್ಮಲದೇವಿ? ಜಾರನಾಗಿ, ಜಾರೆಯಾಗಿ ಜಾರಿದರಂದು ಜನನ ಬವಣೆಯಲ್ಲಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಜಾರನೆಂಬುವ ನಾಮ ಮಾರಹರಂಗೆ ಸಲುವಳಿಯಯ್ಯಾ! ಜಾರನು ಜಾರನು ಕಪಿಲಸಿದ್ಧಮಲ್ಲಿಕಾರ್ಜುನನ ಶರಣರ ಮನದ ಮನೆಯ ಕೊನೆಯಲ್ಲಿ
--------------
ಸಿದ್ಧರಾಮೇಶ್ವರ
ಜನನ ಮರಣ ದೇಹಧರ್ಮವಲ್ಲದೆ ಜಂಗಮಕ್ಕೆಲಿಹದೋ! ಕ್ಷುದಾ-ತೃಷೆ ಪ್ರಾಣಧರ್ಮವಲ್ಲದೆ ಜಂಗಮಕ್ಕೆಲಿಹದೊ! ಸುಖ-ದುಃಖ ಮನೋಧರ್ಮವಲ್ಲದೆ ಜಂಗಮPಕ್ಕೆಲಿಹದೊ! ಜ್ಞಾನಾಜ್ಞಾನಂಗಳು ಮುಮುಕ್ಷುವಿಂಗಲ್ಲದೆ, ನಿಮ್ಮಲ್ಲಿ ಸಮರಸವಾದ ಸಚ್ಚಿದಾನಂದ ಶಿವಯೋಗಿ ಜಂಗಮಕ್ಕೆಲ್ಲಿಹದೊ, ಕಪಿಲಸಿದ್ಧಮಲ್ಲಿಕಾರ್ಜುನಾ!
--------------
ಸಿದ್ಧರಾಮೇಶ್ವರ
ಜನನವಿಲ್ಲದ ಮೂರ್ತಿ ಮನದ ಮೊನೆಯಲ್ಲಿ ಚರಿಸ್ಕ್ತುದೆ ನೋಡವ್ವಾ. ಘನಕ್ಕೆ ನಿಲುಕದ ಮೂರ್ತಿ ಅಣುರೇಣುವಿನಲ್ಲಿ ಮನೆಮಾಡಿ ಚರಿಸುತ್ತಿದೆ ನೋಡವ್ವಾ. ತಿಳಿಹೆ ನಾನೆಂದಡೆ ತಿಳಿಯದೆ ದೂರವಾಗಿ ಚರಿಸುತ್ತಿದೆ ನೋಡವ್ವಾ. ಇದರಂದವನರಿದರಿದು ಬೇಸತ್ತು ಬೆಂಬಿದ್ದೆನವ್ವಾ, ಕಪಿಲಸಿದ್ಧಮಲ್ಲಿಕಾರ್ಜುನಂಗೆ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...