ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಘನಕ್ಕೆ ಘನವೆಂಬವರ ಮನಕ್ಕೆ ತಂದು ಅನುಗೊಳಿಸಿದೆಯಲ್ಲಾ, ಅಲ್ಲಮದೇವಾ. `ಸರ್ವಂ ಖಲ್ವಿದಂ ಬ್ರಹ್ಮ' ಎಂದು ವಾಸಿದಲ್ಲಿ, ಲಿಂಗತ್ರಯದಲ್ಲಿ ಬೋಧಗೊಳಿಸಿದೆಯಲ್ಲಾ, ಅಲ್ಲಮದೇವಾ. ಮಾಡಿ ನೀಡುವೆನೆಂಬವರ ರೂಹು ಮೂಡದಂತೆ ಮಾಡಿದೆಯಲ್ಲಾ, ಅಲ್ಲಮದೇವಾ. ದೃಷ್ಟಿಗೆ ಬಿದ್ದವರ ಮಹದೈಶ್ವರ್ಯಕ್ಕಿಟ್ಟು, ನೀ ನೆಟ್ಟನೆ ಬೆಟ್ಟದಲ್ಲಿಯ ಬಟ್ಟಬಯಲ ಕದಳಿಯ ಹೋಗಿ ಬಟ್ಟಬಯಲಾಗಿ, ಜಗದಂತರ್ಯಾಮಿ ಕಪಿಲಸಿದ್ಧಮಲ್ಲಿಕಾರ್ಜುನನಾಗಿ ನಿಂದೆಯಲ್ಲಾ ಅಲ್ಲಮದೇವಾ
--------------
ಸಿದ್ಧರಾಮೇಶ್ವರ
ಘಟ್ಟಣೆಯ ಲೋಕದ ಬೆಟ್ಟಗಳಾರಾಗಿ ಇಕ್ಕೆಲಲೀರಾರು ಸೂರಿಯನನೂ ಮತ್ತೆ ಪ್ರಭೆಯನು ಮಾಡಿ ಹೊತ್ತಿಪ್ಪ ತತ್ವಕ್ಕೆ ಸೀಮೆ ತಾನೂ ಒತ್ತೆರನು ಮುತ್ತೆರನು, ಮುತ್ತೆರನು, ಒತ್ತೆರನು ಮತ್ತೆ ತ್ವಮಸಿಯ ರೂಪು ತಾನು ವಿಚಿತ್ರ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಭಕ್ತಿತಾತ್ಪರ್ಯದ ಪರಿಯಿಂತುಟು.
--------------
ಸಿದ್ಧರಾಮೇಶ್ವರ
ಘರ್ಜನೆಯಿಂ ಸಿಡಿಲು ಅಡಸಿ ಬಂದು ಪೊಯ್ವುತ್ತಿರಲಿ, ಪೊಯ್ಯವೊಲ್ಲದೆ ವಾಯವಿಮಾನಂಗಳಿಂದ ಎತ್ತಿಕೊಳ್ಗ್ವೆ ಎತ್ತಿಕೊಂಡಡೆ, ಮನವಿಚ್ಛಂದವಾಗದೊಂದೆಯಂದದ್ಲಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಘಟವ ಮಾಡಿದವ ಘಟದ್ಲರವಂತೆ, ಭೂಷಣವ ಮಾಡಿದವ ಭೂಷಣದ್ಲರದಂತೆ, ಕೃಷಿಯ ಮಾಡಿದವ ಕೃಷಿಯ್ಲರದಂತೆ, ತೈಲವ ತೆಗೆದವ ತೈಲದ್ಲರದಂತೆ, ಮನೆಯ ಕಟ್ಟಿದವ ಮನೆಯ್ಲರದಂತೆ, ಪಿಂಡವ ಮಾಡಿದವ ಪಿಂಡದೊಳಿರದಂತೆ, ಬ್ರಹ್ಮಾಂಡವ ರಚಿಸಿದವ ಬ್ರಹ್ಮಾಂಡದೊಳಿರದಂತೆ, ಅರಿಯದ ಮನುಜರ ಅರುಹಿನ ಮನೆಯೊಳಿಪ್ಪ ನೋಡಾ, ಕಪಿಲಸಿದ್ಧಮಲ್ಲೇಂದ್ರನೆಲೆ ಮಲ್ಲಶೆಟ್ಟಿ.
--------------
ಸಿದ್ಧರಾಮೇಶ್ವರ
ಘಟವೆಂಬುದು ದಿಟವಲ್ಲ ನೋಡಾ, ಕೇದಾರಯ್ಯಾ. ಪಟವೆಂಬುದು ದಿಟವಲ್ಲ ನೋಡಾ, ಕಲ್ಲಯ್ಯಾ. ಮಾಡಿದ ಘಟ, ನೆಯ್ದ ವಸ್ತ್ರಪಟ ಕಡೆ ಕಾಣಬಲ್ಲಡೆ, ಲಯವೆಂಬುದಲ್ಲಿಹುದು ಹೇಳಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನನ ಸಾನ್ನಿಧ್ಯದಲ್ಲಿ?
--------------
ಸಿದ್ಧರಾಮೇಶ್ವರ
ಘನಸುಖದ ಸಂಪನ್ನನಾಗಿ ನಿಮ್ಮ ಕರುಣಕಾವುದು ಕಡೆಯು, ಮನಸಿಜನ ಮದವ ಮಾಯೆಯನೆಲ್ಲವ ಹರಿದು ನಿಮ್ಮ ಪದದ ಹದುಳವಿರಿಸಿದಿರಯ್ಯಾ ಕರುಣಾಕರನೆ ಕಪಿಲಸಿದ್ಧಮಲ್ಲೇಶ್ವರಾ.
--------------
ಸಿದ್ಧರಾಮೇಶ್ವರ
ಘಾತವಪ್ಪ ಸರಧಿ ಪ್ರೇತವಪ್ಪ ಅಡವಿ ಪಾತಕ ಭವಕೆ ಬಹ ಕೂಪದೊಳಗೆ ನೂಕಿದರೆ ಬೀಳೆ, ನಿನ್ನಾಧಾರವುಂಟು. ಅನಾಸಂಸಿದ್ಧ ಯೋಗಮೂರ್ತಿ ನಿನ್ನ ಒಡನಾಡಿ ನಾ ನಿನ್ನ ಠಕ್ಕನರಿಯೆನೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಘಟಸರ್ಪನ ಘಣಾಮಣಿಯ ಬೆಳಗಿನ ಪ್ರಭೆ ಹಿರಿದು: ಸ್ಥಿರವಾಗಿ ಇರಬಲ್ಲಡೆ. ನಿಸ್ತಾರ, ನಿಸ್ತಾರ, ನಿಸ್ತಾರವು ಸತ್ಯಪ್ರಭೆಯಿಂದಲು ವಿಚಿತ್ರಸ್ಥಾನವಾದಡೆ, ಮತ್ತೆ ನಿತ್ಯ ತಪ್ಪದು, ಕಪಿಲಸಿದ್ಧಮಲ್ಲಿನಾಥಯ್ಯ.
--------------
ಸಿದ್ಧರಾಮೇಶ್ವರ
ಘನಕ್ಕೆ ಘನವಾದ ಪರವಸ್ತು ಲಿಂಗಮ್ರ್ಕೂ ಬಂತ್ತೆನ್ನ ಕರಸ್ಥಲಕ್ಕೆ. ಬಂದ ಲಿಂಗಮೂರ್ತಿಯಂ ಕಂಡು ಮನ ಹಾರೈಸಿ ತನು ಕರಗಿತ್ತು. ಆ ಲಿಂಗವಂ ಕಂಡು ಕಪಿಲಸಿದ್ಧಮಲ್ಲಿನಾಥನೆನ್ನ ಅಂತರಂಗದಲ್ಲಿದ್ದನು.
--------------
ಸಿದ್ಧರಾಮೇಶ್ವರ