ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪರತರವ ಸಾದ್ಥಿಸುವಡೆ ಪ್ರಪಂಚದ ವಿಷಯ ಅಳಿದಿರಬೇಕು. ರಾಜ್ಯವ ಸಾದ್ಥಿಸುವಡೆ ಪ್ರಾಣದಾಸೆಯ ಮರೆದಿರಬೇಕು. ವಿದ್ಯೆಯ ಸಾದ್ಥಿಸುವಡೆ ಅನ್ಯ ಆಸೆಯ ಮರೆದಿರಬೇಕು. ಕಪಿಲಸಿದ್ಧಮಲ್ಲಿಕಾರ್ಜುನನ ಕೂಡುವಡೆ ಸಂಶಯವಳಿದು ನಿಶ್ಚಿಂತನಾಗಬೇಕು.
--------------
ಸಿದ್ಧರಾಮೇಶ್ವರ
ಪಾವನವಾದೆನು ಬಸವಣ್ಣಾ, ನಿಮ್ಮ ಪಾವನಮೂರ್ತಿಯ ಕಂಡು. ಪರತತ್ವವನೈದಿದೆ ಬಸವಣ್ಣಾ, ನಿಮ್ಮ ಪರಮಸೀಮೆಯ ಕಂಡು. ಪದ ನಾಲ್ಕು ಮೀರಿದೆ ಬಸವಣ್ಣಾ, ನಿಮ್ಮ ಪರುಷಪಾದವ ಕಂಡು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದೆ; ಬಸವಣ್ಣಾ, ಬಸವಣ್ಣಾ, ಬಸವಣ್ಣಾ, ನೀನು ಗುರುವಾದೆಯಾಗಿ.
--------------
ಸಿದ್ಧರಾಮೇಶ್ವರ
ಪ್ರಾಣಲಿಂಗ ಸಂಬಂದ್ಥಿಯಾದ ಬಳಿಕ ಪರಸ್ತ್ರೀ ಪರದ್ರವ್ಯವ ಮುಟ್ಟದಿರಬೇಕು. ಅಂಗಲಿಂಗ ಸಂಬಂದ್ಥಿಯಾದ ಬಳಿಕ ಸ್ತ್ರೀಸಂಗವ ತೊರೆಯಲೇಬೇಕು. ಪ್ರಸಾದಲಿಂಗ ಸಂಬಂಧವಾದ ಬಳಿಕ ಆಪ್ಯಾಯನವರಿಯಲೇಬೇಕು. ಸರ್ವಾಂಗಂಗ ಸಮ್ಮತ ಸಂಬಂದ್ಥಿಯಾದ ಬಳಿಕ ಸರ್ವವೂ ತಾವಾಗಿರಬೇಕು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಇಂತಪ್ಪವರು ಸುಲಭರೆ? ಎತ್ತಾನಕೊಬ್ಬರಲ್ಲದೆ.
--------------
ಸಿದ್ಧರಾಮೇಶ್ವರ
ಪುಣ್ಯಪಾಪಂಗಳನರಿಯದ ಮುನ್ನ ಅನೇಕ ಭವಂಗಳಲ್ಲಿ ಬಂದು ನಿಮ್ಮ ನಿಲುವನರಿಯದೆ ಕೆಟ್ಟನಯ್ಯಾ. ಇನ್ನು ನಿಮ್ಮ ಶರಣುವೊಕ್ಕೆನಾಗಿ, ನಾ ನಿಮ್ಮನೆಂದೂ ಅಗಲದಂತೆ ಮಾಡಾ ಅಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ! ನಿಮ್ಮಲ್ಲಿ ಒಂದು ಬೇಡುವೆ; ಎನ್ನ ಕರ್ಮಬಂಧನ ಬಿಡಿವಂತೆ ಮಾಡಾ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪೃಥುವಿಯ ಪ್ರಮಾಣಗಳನಿರ್ದಾಟಿಸಿ ಪ್ರಮಾಣ ಕಟ್ಟಿದ ನೆಲೆಮನೆ ಅಯ್ಯಾ ನಿನ್ನದು. ಬಳಸುತ್ತಿಪ್ಪ ಹಲವು ವ್ಯವಹಾರವ ಕೊಂಡ ಭಂಡಂಗಳೆಲ್ಲಾ ತೀರಿ ನಿನ್ನ ಮೆಲುವಾಯ್ದರೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಭಕ್ತಿ ಜ್ಞಾನ ವೈರಾಗ್ಯನಾದಾ.
--------------
ಸಿದ್ಧರಾಮೇಶ್ವರ
ಪಡೆವೆನೆಂಬ ದುಃಖದಿಂದ ಹಡೆದಡೆ ಕೈಕೊಂಬುದು ದುಃಖಕ್ಕೆಡೆಯಿಲ್ಲದೆ ಕಡು ದುಃಖವಪ್ಪುದು. ಈ ದುಃಖವ ಎಂದಿಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನೊ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪುತ್ರನ ಪೂಜೆಯು ಜನಕನಿಗೆ ದುಃಖಕರವಲ್ಲ. ಸತಿಯ ವೈಭವವು ಪತಿಗೆ ಪ್ರಾಣಹಾನಿಯಲ್ಲ. ತನ್ನ ಭೃತ್ಯನಿಗಾದ ಜಯಘೋಷ ಅರಸನಿಗೆ ಅಸಂತೋಷವಲ್ಲ. ಇದು ಕಾರಣ, ಶಿಷ್ಯನ ಸಮರಸದಲ್ಲಿ ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನಂಗೆ ಕೇಳಲು ಅದು ಯೋಗ್ಯವಲ್ಲ, ಅಲ್ಲಮಮಹಾಪ್ರಭುವೆ.
--------------
ಸಿದ್ಧರಾಮೇಶ್ವರ
ಪೂಜೆಯ ಉಪಕರಣ ನೋಡಿ ಎನ್ನ ಮನಕ್ಕೆ ಬಹಳ ಬಾಧೆಯಾಯಿತ್ತು. ಗುರುವಿನ ಪರಮಗುರು ಸಂಗನ ಬಸವಯ್ಯ ಪೂಜಿಸಬಂದಡೆ, ಕಪಿಲಸಿದ್ಧಮಲ್ಲಿಕಾರ್ಜುನನ ಬಾಲಕ ಅಂಗವಿರಹಿತನಾದನು, ಶ್ರೀಗುರುಮೂರ್ತಿಯೆ.
--------------
ಸಿದ್ಧರಾಮೇಶ್ವರ
ಪರ್ವತದ ಮಹಿಮೆಯದು ಘನವೆಂದಡೆ, ಪರ್ವತದಲ್ಲಲ್ಲದೆ ವೇಶ್ಯಾಕೋಶಕ್ಕೆ ಹರಿದು ಹರನೆಂದೆನಿಸದಿರಯ್ಯಾ. ಶರಣರ ಮಹಿಮೆಯದು ಘನವೆಂದಡೆ, ಶಿವಶರಣನಲ್ಲಲ್ಲದೆ ಕಿಂಚಿಜ್ಞ ಮಾನವನಲ್ಲಿ ಹರಿಯದು ನೋಡಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಪ್ರಾಣದ ತತ್ವದ ಪ್ರಾಪಂಚುವಿಲ್ಲದಿರು, ಏಕ ಏಕಾರ್ಥವೆಂದು ನಿರ್ವಾಣದ ಆಕಾರಧ್ಯಾನವು ಬೇಕು ಮನ ಕರದಲ್ಲಿ. ಸಾಕಾರದಿಂದತ್ತ ಶೂನ್ಯಭೇದ ಅನೇಕ ರೂಪನು ಕಪಿಲಸಿದ್ಧಮಲ್ಲಿಕಾರ್ಜುನನ ಬೇಕಾದವೀ ಪರಿಯ ತಪ್ಪದಿಹುದು.
--------------
ಸಿದ್ಧರಾಮೇಶ್ವರ
ಪಚ್ಚೆಯಗಿರಿ ಪ್ರಭೆಯೇರಿ ನಿಚ್ಚ ವಿನಯದ ಸುಖವ ಕಂಡು ಅನುಭವದ ಹೆಣ್ಣಿಗೆ [ಧವಳೆ]ವರ್ಣವನೇಕೀಕರಿಸಲು ನಿಚ್ಚಲನುವಾಯಿತ್ತಯ್ಯಾ ಅಚ್ಚ ಆರೆಸಳ ಪೀಠ. ಆ ಪೀಠದಲ್ಲಿ ವೀರದಾಸಯ್ಯನೆಂಬವ ಗುರುವಿಡಿದು ನಡೆಯೆ ನೀರಾಟ ನಿಂದು ನೆಲೆಗೊಂಡನಯ್ಯ ನಿಮ್ಮ ಶರಣ ಚೆನ್ನಬಸವಣ್ಣನು. ಕಪಿಲಸಿದ್ಧಮಲ್ಲಿನಾಥಯ್ಯಾ ಚೆನ್ನಬಸವಣ್ಣನಿಂದ ಬದುಕಿದೆನಯ್ಯಾ.
--------------
ಸಿದ್ಧರಾಮೇಶ್ವರ
ಪರಶಕ್ತಿ ಅದಿಯೈಯ್ದ ಬೆರೆಸಿ ಬೆರೆಯದೆ ಬ್ರಹ್ಮವನರಿದೆನೆಂಬ ಯೋಗಿ ಕೇಳಾ. ಅದು ಸಗುಣದಲ್ಲಿ ತಾತ್ಪರ್ಯ ಅದು ನಿಷ್ಕಳದಲ್ಲಿ ನಿತ್ಯ ಅರಿದೆನೆಂಬ ಯೋಗಿ ಕೇಳಾ. ಅದು ಅನಾಹತದಲ್ಲಿ ಆನಂದ, ಅದು ಭಕ್ತಿಜ್ಞಾನವೈರಾಗ್ಯವಂ ಕೂಡಿದ ಏಕಮತ ಅದು ಪದ ನಾಲ್ಕು ಮೀರಿದ ಮಹಾಮತ. ಅದು ಉಂಡುದನುಣ್ಣದು, ಅದು ಬಂದಲ್ಲಿ ಬಾರದು, ಅದು ಸಕಳದಲ್ಲಿಯೂ ತಾನೆ ನಿಷ್ಕಳದಲ್ಲಿಯೂ ತಾನೆ, ಅದು ಪ್ರಾಪಂಚಿಕದಲ್ಲಿಯೂ ತಾನೆ, ಅದು ತಾತ್ಪರ್ಯದಲ್ಲಿಯೂ ತಾನೆ. ಅದು ಸಕಲ ಸರ್ವದ ನಿಷ್ಕಳದ ನಿರ್ಮಳದ ಮದದ ಮಾತ್ಸರ್ಯದ ಬಣ್ಣ ಹಲವರಿದ ಅತಿಗಳೆದ ಪರಮಸೀಮೆಯ ಅರಿದೆನೆಂಬ ಯೋಗಿ. ಅದು ಒಂದರಲ್ಲಿ ನಿತ್ಯ, ಎರಡರಲ್ಲಿ ತಾತ್ಪರ್ಯ, ಮೂರರಲ್ಲಿ ಮುಕ್ತ, ನಾಲ್ಕರಲ್ಲಿ ಕ್ರೋದ್ಥಿ, ಐದರಲ್ಲಿ ಆನಂದ, ಆರರಲ್ಲಿ ತಾನೆ, ಇಪ್ಪತ್ತೈದು ಪಟ್ಟಣದ ತಾತ್ಪರ್ಯಂಗಳನ್ನರಿತು ಮೂವತ್ತಾರು ವೃಕ್ಷಂಗಳ ಮೇಲೆ ಹಣ್ಣೊಂದೆ ಆಯಿತ್ತು ಕಾಣಾ. ಆ ಹಣ್ಣು ಹಣಿತು, ತೊಟ್ಟುಬಿಟ್ಟು ನಿರ್ಮಳ ಜ್ಞಾನಾಮೃತಂ ತುಂಬಿ ಭೂಮಿಯ ಮೇಲೆ ಬಿದ್ದಿತು. ಆ ಬಿದ್ದ ಭೂಮಿ ಪರಲೋಕ. ಆ ಹಣ್ಣ ಗುರು ಕರುಣವುಳ್ಳವಂಗಲ್ಲದೆ ಮೆಲಲಿಲ್ಲ. ದೀಕ್ಷತ್ರಯದಲ್ಲಿ ಅನುಮಿಷನಾದಂಗಲ್ಲದೆ ಆ ಲೋಕದಲ್ಲಿರಲಿಲ್ಲ. ಆ ಲೋಕದಲ್ಲಿದ್ದವಂಗೆ ಅಜಲೋಕದ ಅಮೃತವನು ನಿತ್ಯವು ಸೇವಿಸಿ ಸತ್ಯಮುಕ್ತನಾಗಿ ಬೇಡಿದವಕ್ಕೆ ಬೇಡಿದ ಪರಿಯ ಕೇವಲವನಿತ್ತು ತಾನು ಕಾಂಕ್ಷೆಗೆ ಹೊರಗಾಗಿ ಕಾಲನ ಕಮ್ಮಟಕ್ಕೆ ಕಳವಣ್ಣವಾಗಿ ನಿತ್ಯಸಂಗಮಕ್ಕೆ ಸಂಯೋಗವಾಗಿ ಕಪಿಲಸಿದ್ಧ ಮ್ಲಕಾರ್ಜುನಯ್ಯನೆಂಬ ಅನಾಹತ ಮೂಲಗುರುವಾಗಿ, ಎನ್ನನಿಷ್ಟಕ್ಕೆ ಪ್ರಾಪ್ತಿಸಿದನಯ್ಯಾ.
--------------
ಸಿದ್ಧರಾಮೇಶ್ವರ
ಪ್ರಸಾದತತ್ವದ ಪ್ರಾದೇಶಿಕನು ನೀನೆ, ಸಾದಾಖ್ಯತತ್ವಗಳ ಸಮನಿಸದಿಹ ನಾದಬಿಂದುಕಳೆಯ ಆಮಧ್ಯಾವಸಾನ ಮೂದೇವರಿಗೆ ತಾನು ಶಕ್ತವಲ್ಲಾ. ಅವ್ವೆಯ ಕರದಲ್ಲಿ ಅವ್ಯಯ ತಾನಿಪ್ಪ ಒಯ್ಯನೆ ನಡೆಯಯ್ಯ ಮಠದೊಳಯಿಂಕೆ. ಮಠದೊಳಗಣ ಭೇದ ಕುಟಿಲಕ್ಕೆ ಇಂಬಿಲ್ಲ, ಮಠವ ಶುದ್ಧಿಯ ಮಾಡೆಲೆ ಮರುಳು ತಾಯೆ. ಅಡಿಗಡಿಗೆ ಸಂಗಮದ ನುಡಿಯ ನೀನಾಡಿ ಒಡಗೂಡವ್ವಾ ಕಪಿಲಸಿದ್ಧಮಲ್ಲಿಕಾರ್ಜುನನಾ.
--------------
ಸಿದ್ಧರಾಮೇಶ್ವರ
ಪ್ರಸಾದವೈದಾರ ಪಾದೋದಕವೆರಡೈದ ಆದಿಯಕ್ಷರದಲ್ಲಿ ದೀಕ್ಷಾತ್ರಯ. ನಾದದಿಂದವೆ ತೂಗಿ ಬಿಂದು ಸಮನಿಸದೀಗ ಆಧಾರಸ್ಥಾನಕ್ಕೆ ಅತ್ಯ್ಕತಿಷ್ಠತ್. ಮೂಲಸ್ಥಾನದಲ್ಲಿದ್ದ ಮುನ್ನೂರು ಕಮಲಕ್ಕೆ ಆದಿಭ್ರಮರನು ಬಸವ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪಾದೋದಕವು ಲಿಂಗದ ಮೇಲೆ ಎರದಲ್ಲಿ ಜಂಗಮ ಘನವಾಯಿತ್ತು. ಆ ಲಿಂಗೋದಕ ಸ್ವೀಕರಿಸಿದಲ್ಲಿ ಜಂಗಮಕ್ಕೆ ಲಿಂಗ ಘನವಾಯಿತ್ತು. ಲಿಂಗದ ಕಳೆಯೆ ಜಂಗಮ, ಜಂಗಮದ ಕಳೆಯೇ ಲಿಂಗ; ಆವುದ ಘನವೆಂಬೆ; ಆವುದ ಕಿರಿದೆಂಬೆ? ಲಿಂಗ-ಜಂಗಮ ನೇತ್ರದಲ್ಲಿಯ ಪ್ರಕಾಶದಂತೆ ತಿಳಿದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪೂಜಾಫಲವಂ್ಕಂತಲ್ಲ ; `ಪೂಜಾಫಲಂ ಫಲಂ ಮನ್ಯೇ ತವ ಪಾಣಿಗ್ರಹಂ ಶಿವೇ' ಪೂಜಾಫಲವಂ್ಕಂತಲ್ಲ ; `ಪೂಜಾಫಲಂ ಫಲಂ ಮನ್ಯೇ ಮದ್ಧಾ ್ಯನಾಸಕ್ತಪೂರುಷಃ' ಎಂದು ನೀ ಹೇಳಿದ ವಾಕ್ಯ ಹುಸಿಯೇನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ?
--------------
ಸಿದ್ಧರಾಮೇಶ್ವರ
ಪ್ರಾಣಲಿಂಗಿಯಾದಾತನು ಪ್ರಳಯಕ್ಕೊಳಗಾಗನು. ಅನ್ಯಕ್ಕೆ ಕೈಯಾನನು ಎಲ್ಲವೂ ತನ್ನೊಳಗೆ ಇಪ್ಪವಾಗಿ. ತನ್ನ ಮೀರಿದುದೊಂದು ಆದ್ಥಿಕ್ಯ ಬೇರಿಲ್ಲಾಗಿ. ಕೈವಲ್ಯಲಿಂಗವು ಪ್ರಾಣವೆಂಬ ಸತಿಗೆ ಸಂಯೋಗ ಸಮನಿಸಿದ ಬಳಿಕ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದ ಉರುತರ ಪ್ರಾಣಲಿಂಗಿ.
--------------
ಸಿದ್ಧರಾಮೇಶ್ವರ
ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯ - ಇಂತೀ ದಶವಾಯುಗಳು. ಅಲ್ಲಿ ಪ್ರಾಣವಾಯು ಇಂದ್ರನೀಲವರ್ಣ ಕಂಡದ ಅಧೋ ಭಾಗೆಯಲ್ಲಿರ್ದ ಹೃದಯ ಪಾದ ನಾಬ್ಥಿ ನಾಶಿಕವಧರಂಗಳಲ್ಲಿ ಉಚ್ಛಾ ್ವಸ ನಿಶ್ವಾಸಂಗಳಿಂದ ಚರಿಸುತ್ತಿಹುದು. ಅಪಾನವಾಯು ಇಂದ್ರಗೋಪವರ್ಣ, ವಾಯು ಶಿಶ್ನ ಉರ ಜಾನು ಪಾದ ಜಂಘೆ ನಾಬ್ಥಿಮೂಲ ಜಠರದಲ್ಲಿರ್ದು ಮಲ ಮೂತ್ರಂಗಳ ಪೊರಮಡಿಸುತ್ತಿಹುದು. ವ್ಯಾನವಾಯು ಗೋಕ್ಷೀರವರ್ಣ, ಕರ್ಣ ಅಕ್ಷಿ ಘ್ರಾಣ ಗಂಡಾಗ್ರ ಗುಲ್ಫಂಗಳಲ್ಲಿ ವರ್ತಿಸುತ್ತ ಹಿಡಿವುದು ಬಿಡುವುದು ಇವು ಮೊದಲಾದ ವ್ಯಾಪಾರಂಗಳ ಮಾಡುತ್ತಿಹುದು. ಉದಾನವಾಯು ಎಳೆಮಿಂಚಿನವರ್ಣ, ಹಸ್ತಪಾದಾ ಸರ್ವಸಂದುಗಳಲ್ಲಿರ್ದು ಸಂದು ಸಂದುಗಳಿಗೆ ಪಟುತ್ವಮಂ ಪುಟ್ಟಿಸುತ್ತಿಹುದು. ಸಮಾನವಾಯು ಶುದ್ಧ ಸ್ಫಟಿಕವರ್ಣ, ದೇಹ ಮಧ್ಯದಲ್ಲಿರ್ದು ಸರ್ವ ಸಂದುಗಳಲ್ಲಿ ವ್ಯಾಪಿಸಿಕೊಂಡು, ಕೊಂಡಂತಹ ಅನ್ನರಸವ ಸರ್ವಾಂಗಕ್ಕೆ ಸಮಾನವಂ ಮಾಡಿ ಅಷ್ಟಕೋಟಿ ರೋಮನಾಳಂಗಳಿಗೂ ಹಂಚಿಕ್ಕಿ ಅಂಗವಂ ಪೋಷಿಸುತ್ತಿಹುದು. ನಾಗವಾಯು ಬಾಲಸೂರ್ಯನ ವರ್ಣ, ಕಂಠಸ್ಥಾನದ್ಲರ್ದು ವದ್ರ್ಥಿ ನಿರೋಧಂಗಳಿಂದುದ್ಗಾರಮಂ ಮಾಡಿಸುತ್ತಿಹುದು. ಕೂರ್ಮವಾಯು ಕುಂದೇಂದುವಿನ ವರ್ಣ, ನೇತ್ರಮೂಲದಲ್ಲಿರ್ದು ಉನ್ಮೀಲನ ನಿಮೀಲನಾಡಿಗಳನು ಮಾಡುತ್ತಿಹುದು. ಕೃಕರವಾಯು ನೀಲವರ್ಣ ಕಾಯದಲ್ಲಿರ್ದು ಕ್ಷುಧಾ ಧರ್ಮಂಗಳಂ ಮಾಡುತ್ತಿಹುದು. ದೇವದತ್ತವಾಯು ಸ್ಫಟಿಕವರ್ಣ, ತಾಳಮೂಲದಲ್ಲಿರ್ದು ಅಗುಳಿಕೆಯಾರಡಿಗಳಂ ಪುಟ್ಟಿಸ್ಕ್ತುಹುದು. ಧನಂಜಯವಾಯು ಸಪ್ತ ಜಾಂಬೂನದ ವರ್ಣ, ಶೋಕರಾಗಂಗಳ ಪುಟ್ಟಿಸಿ ಹಾಡಿಸ್ಕ್ತುಹುದು. ಇಂತೀ ದಶವಾಯುಗಳ ದೇಹವನುದ್ಧರಿಸುತ್ತಿಹವು. ಈ ವಾಯುವನೇರಿ ಜೀವನು ಈಡಾಪಿಂಗಳ ಮಾರ್ಗದಲ್ಲಿ ವ್ಯವಹರಿಸುತ್ತಿಹನು. ಈ ವಾಯುಗ್ಕಯನರಿದು ಯೋಗಿಸುವುದೇ ಯೋಗ. ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಿಜವನೈದುವದೇ ಮಾರ್ಗವು
--------------
ಸಿದ್ಧರಾಮೇಶ್ವರ
ಪರಿಭವಕ್ಕೆ ಬಪ್ಪ ಪರಮಾಣು ನೀನಲ್ಲ. ಕುರುಹಿಂಗೆ ಬಂದ ಸೀಮ ನೀನಲ್ಲ. ಏಕಯ್ಯ ನಿನಗೆ ಪ್ರಾಪಂಚಿಕವು? ಆನಂದಮಧ್ಯದ ಅಪರವಾಗಿ, ಅಪರಮಧ್ಯದಲಿ ಪೂರ್ವನಾಗಿ ಆ ಪೂರ್ವಕ್ಕೆ ಒಡೆಯ ನೀನೆಯಾಗಿಪ್ಪೆ. ಆರಯ್ಯಾ ಬಲ್ಲರು ನಿನ್ನ ಪರಿಯ? ಶರಣಸತಿ ಲಿಂಗಪತಿಯಾಗಿದ್ದವರು ಬಲ್ಲರು. ಏಕಂಗನಿಷ್ಠಾಪರರು ಅವರು ಬಲ್ಲರು. ಕಪಿಲಸಿದ್ಧ ಮಲ್ಲಿಕಾರ್ಜುನಯ್ಯಾ ಏಕಯ್ಯಾ, ಓಡಿದೆಯೆಂದು ನಂಬುಗೆಗೊಡುವಂತೆ ಕರಂಗೊಟ್ಟರು.
--------------
ಸಿದ್ಧರಾಮೇಶ್ವರ
ಪ್ರಣವಾಕ್ಷರಂ ಮೇಲೆ ಒಪ್ಪಿಪ್ಪ ಬೀಜಾಕ್ಷರದ ಪರಿಯಿನ್ನೆಂತೊ? ವೈನೈಯೆಂಬ ಶುದ್ಧ ಧವಳತೆಯ ಮೀರಿಪ್ಪ ಅಕ್ಷರವೆರಡು, ಒಂದೆಸಳಿನ ಕಮಳ, ನಿತ್ಯನೆಂಬ ಅದ್ಥಿದೇವತೆ ಶುದ್ಧ ಸ್ಫಟಿಕ ಸಂಕಾಶವರ್ಣ ನಿತ್ಯನಿರಂಜನನೈಕ್ಯಪದವು, ಕಪಿಲಸಿದ್ಧಮಲ್ಲಿನಾಥಯ್ಯನ ಕೂಟ ಜಗದಾಟ ಭವದಾಟ ಜನ್ಮನಾಶ.
--------------
ಸಿದ್ಧರಾಮೇಶ್ವರ
ಪ್ರಪಂಚದಿಂದ ಪಾರಮಾರ್ಥವ ಕಂಡೆನೆಂಬುದು ದುರ್ಲಭ. ಶಿಷ್ಯನಾಗಿ ಗುರುವ ಕಾಣಬೇಕು; ಭಕ್ತನಾಗಿ ಜಂಗಮವ ಕಾಣಬೇಕು. ಇದು ಕಾರಣ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಗುರುವ ಕಂಡುದು ಸುಕೃತ; ಪ್ರಭುವಿನ ಪೂರ್ಣಕೃಪೆ ಕೇಳಾ, ಕೇದಾರಯ್ಯಾ.
--------------
ಸಿದ್ಧರಾಮೇಶ್ವರ
ಪ್ರಸಾದಿಯಾದಾತ ಪ್ರಳಯಕ್ಕೊಳಗಾಗ, ಇಂದ್ರಿಯಗಳ ಹರಿಯೀಯ, ಬಂದುದನ್ಕಗಳೆಯ - ಅದು ಲಿಂಗಮುಖದಿಂ ಬಂದುದಾಗಿ, ಆತನ ಅಂಗ ಸರ್ವಾಂಗಲಿಂಗಾಂಗ; ಆತನ ನಡೆ-ನುಡಿ ಚೈತನ್ಯ ಸಾಕ್ಷಾತ್ ಅಯ್ಯನ ಸದ್ಭಾವ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದ ನಿತ್ಯಪ್ರಸಾದಿಯ ಪರಿಯಿಂತುಂಟು.
--------------
ಸಿದ್ಧರಾಮೇಶ್ವರ
ಪಂಚವರ್ಣದ ಗಿಳಿಯೊಂದು ಪ್ರಪಂಚರಚನೆಗೆ ಬಂದು. `ಭವ ಬ್ರಹ್ಮ, ಭವ ಬ್ರಹ್ಮ' ಎಂಬುತ್ತಿದೆ, ಆ ಗಿಳಿಯು ಮೂರು ಮನೆಯ ಪಂಜರದಲ್ಲಿ ಕೂತು, `ಕುರುಷ್ವ ಲಿಂಗಪೂಜಾಂ, ಲಿಂಗಪೂಜಾಂ' ಎಂಬುತ್ತಿದೆ. ಆ ಗಿಳಿಯ ವಚನವ ಕೇಳಿದಾತಂಗೆ ಸುಖ, ಗಿಳಿಗೆ ಸುಖ; ಕೇಳದವಂಗೆ ಸುಖವಿಲ್ಲ, ಹೇಳಿದವಂಗೆಯು ಸುಖವಿಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪ್ರಸಾದ ಕಾಯನಾದ ಬಳಿಕ ರಸರಸಾಯನೌಷಧಿಯ ಹಂಗೇಕೊ? ಮನದಿಚ್ಛೆಯ ಪೂರ್ಣವಾದ ಬಳಿಕ ಮಂತ್ರದ ಲಕ್ಷ್ಯದ ಹಂಗೇಕೊ? ನೀನಿಲ್ಲಿಗೆ ಬಂದ ಬಳಿಕ ಪರ್ವತದ ಹಂಗೇಕಯ್ಯಾ ಎನಗೆ, ಕಪಿಲಸಿದ್ಧಮಲ್ಲಿನಾಥಾ?
--------------
ಸಿದ್ಧರಾಮೇಶ್ವರ
ಪತ್ರೆಯ ತಿಂದಾಡು ಮುಕ್ತವಾದುದೆಂಬುದ ಬಲ್ಲಡೆ ಹೇಳಿರಯ್ಯಾ. ಲಿಂಗವ ಪೂಜಿಸಿದ ವರ್ಣಿಕ ಲಿಂಗವಾದನೆಂಬುದ ಬಲ್ಲಡೆ ಹೇಳಿರಯ್ಯಾ. ಜಂಗಮವ ಸಂತೃಪ್ತಿ ಬಡಿಸಿದ ಭಕ್ತ ಭವವಿರಹಿತನಾದುದ ಬಲ್ಲಡೆ ಹೇಳಿರಯ್ಯಾ. ಇವೆಲ್ಲ ಚತುರ್ವಿಧ ಪದಕ್ಕೆ ಒಳಗು! ತನ್ನ ತಾ ತಿಳಿದ ವೀರಶೈವ ಭವಕ್ಕೆ ಬಂದನೆಂಬ ದ್ವಿರುಕ್ತಿಯನು ಬಲ್ಲಡೆ ಹೇಳಿರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ ಸಾಕ್ಷಿಯಾಗಿ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...