ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗ ಬಂದು ಲಿಂಗಗಳನಳಿಯಿತ್ತಯ್ಯ ಲಿಂಗವೆ. ಲಿಂಗ ಬಂದು ಲಿಂಗಗಳನೀಡಾಡಿತ್ತಯ್ಯ ಲಿಂಗವೆ. ಲಿಂಗ ಬಂದು ಲಿಂಗ ಉಳಿಯಿತ್ತಯ್ಯ. ಲಿಂಗವೆ ಗುರು ಲಿಂಗವೆ ಜಂಗಮ ಲಿಂಗವೆ ನಾನು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಲಿಂಗದ ಅಂಗವದು ಅಳವಡಿರೆ ಸಂಗವ ಮಾಡು ಪುರಾತರ, ಮನವೆ. ಕಂಗಳವರಿಯರೆ ತಿಂಗಳಧರನ ಪೂಜಿಸು ಮನವೆ. ಅಂಗಾಂಗ ಸಮರಸವಾಗದಿರೆ ಗಂಗಾಧರ ಕಪಿಲಸಿದ್ಧಮಲ್ಲಿಕಾರ್ಜುನ ಎನ್ನು, ಮನವೆ.
--------------
ಸಿದ್ಧರಾಮೇಶ್ವರ
ಲಿಂಗಿಗಳ ಸಂಗ ಸಲ್ಲದೆಂದಡೆ, ಉದರದಲ್ಲಿಹ ಲಿಂಗ ಲಿಂಗವಲ್ಲವೆ, ಲಿಂಗಯ್ಯಾ? ಅಂಗಿಗಳ ಭೋಜನ ಸಲ್ಲದೆಂದಡೆ, ಪಶು ಪೃಥ್ವಿಗಳು ಅಂಗವಲ್ಲವೆ, ಲಿಂಗಯ್ಯಾ? `ಲಿಂಗಮಧ್ಯೇ ಜಗತ್ ಸರ್ವಂ' ಎಂದ ಬಳಿಕ ಲಿಂಗವಲ್ಲವೆ, ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗಯ್ಯಾ?
--------------
ಸಿದ್ಧರಾಮೇಶ್ವರ
ಲೋಕದ ಗಂಡರ ಮಹಾತ್ಮೆಯ ಹೆಂಡರರಿವರೆ? ಹಾ ಹಾ! ಅಯ್ಯಾ! ಶರೀರದೊಳಗೆ ಸಂದು ನಿಮ್ಮನಂತುಗಾಣಲಾರದಾದನು ಬೇಟಗೊಂಡು ನಿಮ್ಮನೆ ಬೇಡುವೆನಯ್ಯ. ಅಯ್ಯಾ ಎನ್ನನೆನಿಸು ಭವ ಬರಿಸಿದಡೆ ನೀನೆ ಗಂಡ ನಾನೆ ಹೆಂಡತಿ, ಕಪಿಲಸಿದ್ಧಮಲ್ಲೇಶ್ವರ, ದೇವರ ದೇವಯ್ಯ.
--------------
ಸಿದ್ಧರಾಮೇಶ್ವರ
ಲೋಕದಲ್ಲಿಹ ವಿಟರೆಲ್ಲ ವಾರಂಗನೆಯ ನೋಡಿದರಲ್ಲದೆ, ನಮ್ಮ ವಾರಾಂಗನನೊಬ್ಬರೂ ನೋಡಲಿಲ್ಲಯ್ಯಾ. ಲೋಕದಲ್ಲಿಹ ಕುಶಲರೆಲ್ಲ ಜಂಗಮದೊಂಗೆ ನುಡಿದರಲ್ಲದೆ, ಎಮ್ಮ ಲಿಂಗದೊದಿಂಗೊಬ್ಬರು ನುಡಿದವರಿಲ್ಲ ಕಂಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ, ನಾನೊಬ್ಬನೆ ಪ್ರಮಥರ ಮುಂದೆ.
--------------
ಸಿದ್ಧರಾಮೇಶ್ವರ
ಲಿಂಗವಾದಡೆ ಚೆನ್ನಬಸವಣ್ಣನಂತಾಗಬೇಕಯ್ಯಾ; ವೀರನಾದಡೆ ಮಡಿವಾಳಯ್ಯನಂತಾಗಬೇಕಯ್ಯ; ನಿಗ್ರಹಿಯಾದಡೆ ಹೊಡೆಹುಲ್ಲ ಬಂಕಯ್ಯನಂತಾಗಬೇಕಯ್ಯ; ದ್ಥೀರನಾದಡೆ ಘಟ್ಟಿವಾಳಯ್ಯನಂತಾಗಬೇಕಯ್ಯ; ಲಿಂಗದಲ್ಲಿ ನಿರ್ವಯಲಾದಡೆ ನೀಲಲೋಚನೆಯಮ್ಮನಂತಾಗಬೇಕಯ್ಯ. ಈ ಐವರ ಕಾರುಣ್ಯಪ್ರಸಾದವ ಕೊಂಡು ಬದುಕಿದೆನಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಲಿಂಗ ಜಂಗಮ ಒಂದಾದ ಬಳಿಕ ಲಿಂಗಾರ್ಚನೆ ಸಲ್ಲದು ಜಂಗಮಕ್ಕೆ. ಲಿಂಗಾರ್ಚನೆ ಬೇಕು ಭಕ್ತಂಗೆ. ಲಿಂಗಾರ್ಚನೆ ವಿರಹಿತ ಭಕ್ತನ ಮುಖ ನೋಡಲಾಗದು, ನುಡಿಸಲಾಗದು, ಅವನ ಹೊರೆಯಲ್ಲಿರಲಾಗದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲಿಂಗಾರ್ಚಕನಾದ ಬಳಿಕ, ಲಿಂಗ ವಿದ್ಥಿವಿಧಾನಂಗಳನರಿದರಿದು ಮಾಡಬೇಕು. ಲಿಂಗದೇಹಿ ತಾನಾದ ಬಳಿಕ, ಅಂಗಿಗಳ ಸಂಗವಳಿದಿರಬೇಕು. ಲಿಂಗಧ್ಯಾನಿ ತಾನಾದ ಬಳಿಕ, ಅಂಗನೆಯರ ನೋಡದಿರಬೇಕು. ಲಿಂಗೈಕ್ಯ ತಾನಾದ ಬಳಿಕ, ಕರುಣಾಕರ ಅಭಯಕರ ಕಪಿಲಸಿದ್ಧಮಲ್ಲಿಕಾರ್ಜುನನ ಕಾರ್ಯದಲ್ಲಿ ಅಭೇದವಿರಬೇಕು ಕಾಣಾ, ಕೇದಾರಯ್ಯಾ.
--------------
ಸಿದ್ಧರಾಮೇಶ್ವರ
ಲಗ್ನಕ್ಕೆ ವಿಘ್ನ ಬಾರದೆಂದು ಜ್ಯೋತಿಷ್ಯ ಕೇಳುವ ಅಣ್ಣಗಳಿರಾ, ಕೇಳಿರಯ್ಯಾ: ಅಂದೇಕೆ ವೀರಭದ್ರನ ಸೆರಗು ಸುಟ್ಟಿತ್ತು? ಅಂದೇಕೆ ಮಹಾದೇವಿಯರ ಬಲಭುಜ ಹಾರಿತ್ತು? ಇಂದೇಕೆ ಎನ್ನ ವಾಮನೇತ್ರ ಚರಿಸಿತ್ತು? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲಿಂಗಪೂಜೆಯಿಂದೊಬ್ಬ ಜೀವನ್ಮುಕ್ತ, ಜಲಪ್ರಭಾವಂದೊಬ್ಬ ಜೀವನ್ಮುಕ್ತ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ ನಾನು ಬೇಸರುಗೊಂಡೆನಯ್ಯಾ. ವಿತ್ತಾಪಹಾರಿ ಗುರುಗಳು ನೂರಾರು; ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು; ಮಂತ್ರತಂತ್ರದಿಂದುಭಯ ಲೋಕದಲ್ಲಿ ಸುಖದುಃಖವೀವ ಗುರುಗಳು ನೂರಾರು; ಸತ್ಕರ್ಮೋಪದೇಶವನರುಹಿ ಸ್ವರ್ಗಮತ್ರ್ಯದಲ್ಲಿ ಸುಖವೀವ ಗುರುಗಳು ನೂರಾರು; ವಿಚಾರಮುಖದಿಂದ ಷಟ್ಸಾಧನೆಯನರುಹುವ ಗುರುಗಳು ನೂರಾರು. ವಿಷಯಂಗಳೆಲ್ಲ ಮಿಥ್ಯಂಗಳೆಂದರುಹಿ ಆತ್ಮಾನುರಾಗತ್ವವನೀವ ಗುರುಗಳು ನೂರಾರು; ಶಿವಜೀವರ ಏಕತ್ವವನರುಹಿ ನಿರ್ಮಲಜ್ಞಾನವೀವ ಗುರುಗಳು ಪ್ರಮಥರು. ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು ಚೆನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲಿಂಗದಲ್ಲಿ ಸಂಪನ್ನನಾಗಿ ಗುರುವಾದ ಬಸವಣ್ಣ. ಗುರುವಿನಲ್ಲಿ ಸಂಪನ್ನನಾಗಿ ಜಂಗಮವಾದ ಬಸವಣ್ಣ. ಜಂಗಮದಲ್ಲಿ ಸಂಪನ್ನನಾಗಿ ತ್ರೈವಿದ್ಯಕ್ಕೆ ವಿದ್ಯಾರೂಪವಾದ ಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ ಬಸವಣ್ಣ ಸಾಕ್ಷಾತ್ ಸಂಪನ್ನನಾದ.
--------------
ಸಿದ್ಧರಾಮೇಶ್ವರ
ಲಿಂಗವಂತರು ತಾವಾದ ಬಳಿಕ, ಅಂಗನೆಯರ ನಡೆನುಡಿಗೊಮ್ಮೆ ಲಿಂಗದ ರಾಣಿಯರೆಂದು ಭಾವಿಸಬೇಕು. ಲಿಂಗವಂತರು ತಾವಾದ ಬಳಿಕ, ಅನುಭವ ವಚನಗಳ ಹಾಡಿ ಸುಖದುಃಖಗಳಿಗಭೇದ್ಯವಾಗಿರಬೇಕು. ಲಿಂಗವಂತರು ತಾವಾದ ಬಳಿಕ, ಜಂಗಮವ ಪೂಜಿಸಿ ಸದಾ ಲಿಂಗೈಕ್ಯಸುಖಿಗಳಾಗಿರಬೇಕು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲಿಂಗಪೂಜಕರಿಗೆ ಭವವುಂಟೆಂದು ಹೇಳುತ್ತಿದ್ದೇನೆ. ಬ್ರಹ್ಮ ವಿಷ್ಣಾ ್ವದಿಗಳು ಲಿಂಗಾರ್ಚನೆಯ ಮಾಡಿ ಭವಕ್ಕೆ ಬಂದುದನರಿಯಾ. ಬಸವಣ್ಣ ಮೊದಲಾದ ಪುರಾತರೆಲ್ಲ ಪ್ರಸಾದಲಿಂಗ ಗ್ರಹಿಸಿ ಸಂದಿಲ್ಲದ ಕೂಟವ ಮಾಡಿದ ಗುರು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಲಿಂಗವಿಚಾರ, ಜಂಗಮವಿಚಾರ, ಪಾದೋದಕವಿಚಾರ ಬಹು ಸೂಕ್ಷ ್ಮ ಕೇಳಯ್ಯಾ. ಮೊದಲನೆಯ ಪಾದೋದಕ ಗುರುಸಂಬಂಧ; ಎರಡನೆಯ ಪಾದೋದಕ ಲಿಂಗ ಸಂಬಂಧ; ಮೂರನೆಯ ಪಾದೋದಕ ಜಂಗಮ ಸಂಬಂಧ. ಈ ತ್ರಿವಿಧೋದಕ ಭಕ್ತನಲ್ಲಿ ಸಂಬಂಧ. ಈ ತ್ರಿವಿಧೋದಕ ಗುರು-ಲಿಂಗ-ಜಂಗಮದಲ್ಲಿ ಸಂಬಂಧ. ಅದು ಕಾರಣ, ಭಕ್ತ-ಮಹೇಶ-ಪಾದೋದಕ, ಪ್ರಸಾದದಲ್ಲಿ ಭೇದವ ಮಾಡಿ ನಿಂದಡೆ, ಅಘೋರನರಕದಲ್ಲಿಕ್ಕುವ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಲೋಕ ಲೌಕಿಕಂಗಳೆಲ್ಲಾ ನೀವು ಕೇಳಿರೆ. ಏಕೈಕ ರುದ್ರನ ಅವತಾರವನರಿದೆವೆಂಬಿರಿ. ನೋಡಿ ನಚ್ಚಿರೆ ಶಿವನ. ಶಿವನು ಬಸವಣ್ಣನಾದ ನೋಡಿರೆ; ಬಸವಣ್ಣ ಗುರುವಾದ, ಬಸವಣ್ಣ ಲಿಂಗವಾದ, ಬಸವಣ್ಣ ಜಂಗಮವಾದ; ಬಸವಣ್ಣ ಪರಿಣಾಮ ಪ್ರಸನ್ನ ಪರವಾದ; ಬಸವಣ್ಣ ಮೂಲತ್ರಯವಾದ; ಬಸವಣ್ಣ ಭಕ್ತಿ ಎರಡು ತ್ರಯವಾದ; ಬಸವಣ್ಣ ಆರಾರರಿಂ ಮೇಲೆ ತೋರಿದ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ಪ್ರಸಾದವ ಕೊಂಡು ಭವಂ ನಾಸ್ತಿಯಾಗಿ ಬದುಕಿದೆನು.
--------------
ಸಿದ್ಧರಾಮೇಶ್ವರ
ಲಿಂಗವ ಪೂಜಿಸುವೆ ಕ್ಷುಧೆ ನಿಮಿತ್ತ, ಗುರುವ ಪೂಜಿಸುವೆ ಲಿಂಗವ ಕೊಟ್ಟ ಹಂಗಿಗೆ, ಂಗಾರ್ಪಣೆಯ್ಲ ಆನೆ ತೃಪ್ತ, ಗುರುವಾರ್ಪಣೆಯಲ್ಲಿ ಗುರು ಲಿಂಗತ್ರಯ ತೃಪ್ತ, ಜಂಗಮಾರ್ಪಣೆಯಲ್ಲಿ ಹಿಂಗದೆ ತ್ರಿವಿಧವು ತೃಪ್ತ. ಭವವಿಲ್ಲ ನಂಬು ಕಪಿಲಸಿದ್ಧ ಮ್ಲಕಾರ್ಜುನಯ್ಯನಾಣೆ.
--------------
ಸಿದ್ಧರಾಮೇಶ್ವರ
ಲಿಂಗವ ಪೂಜಿಸಹೋದಡೆ ಲಿಂಗರೂಪಾದೆನು. ಜಂಗಮವ ಪೂಜಿಸಿಹೋದಡೆ ಪ್ರಭುವಾದೆನು. ಗುರುವ ಪೂಜಿಸಿಹೋದಡೆ ಚೆನ್ನಬಸವಣ್ಣನಾದೆನು. ಎನಗಾಜ್ಞೆಯಾದಡೆ ಬರಿಯ ಸಿದ್ಧರಾಮನಾಗಿ ನಿಂದೆನು ನೋಡಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಶರಣರ ಸಮೂಹದಲ್ಲಿ.
--------------
ಸಿದ್ಧರಾಮೇಶ್ವರ
ಲೋಕದ ಲೋಕಿಗಳು ಏಕಯ್ಯಾ ನುಡಿವರು ಲೋಕನಾಥನಿಪ್ಪ ಠಾವನರಿಯರು. ಕಲ್ಲೊಳಗೆ ಹೇಮ, ಕಾಷ*ದೊಳಗಗ್ನಿ, ತಿಲದೊಳು ತೈಲ, ಜಲದೊಳು ಮುತ್ತು, ಹಾಲೊಳು ತುಪ್ಪ, ಸ್ಥಲದೊಳಗೆ ರತ್ನವಿಪ್ಪ ಪರಿಯಲ್ಲಿ ನೀವಿಪ್ಪ ಭೇದವ ನರರೆತ್ತ ಬಲ್ಲರೈ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲೋಕ ಹದಿನಾಲ್ಕರೊಳು ಹೋಗಿ ಅಡಗಿಹೆನೆಂದಡಾ ಪರಿಯ ತಾಮಸವು ತನ್ಮಯವೆ? ಅನೇಕ ಪರಿಯಲ್ಲಿ ಕೊಂದು ಕೂಗಿತ್ತು ಈ ಮಾಯೆ ಕಾಯಯ್ಯ ಕಪಿಲಸಿದ್ಧಮಲ್ಲೇಶ್ವರಯ್ಯಾ.
--------------
ಸಿದ್ಧರಾಮೇಶ್ವರ
ಲಿಂಗದಲ್ಲಿ ಬೆರೆದಲ್ಲಿ ಬಳಿಕ ಅಂಗದ್ಲ ಬೆರೆಯಲುಂಟೆ ದೇವಾ? ಅಲ್ಲಲ್ಲ. ಅಂಗದ್ಲ ಬೆರೆದ ಬಳಿಕ ಲಿಂಗ[ದಲ್ಲಿ] ಬೆರೆಯಲುಂಟೆ ದೇವಾ, ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಪೂಜಿಸಿದ ಫಲ ಪಕ್ವವಾಗದನ್ನಕ್ಕ?
--------------
ಸಿದ್ಧರಾಮೇಶ್ವರ
ಲಿಂಗ ಹೋಯಿತ್ತೆಂದು ಅಂಗವ ಬಿಡುವವನ ನೋಡಿ, ಎನ್ನಂಗ ನಡುಗಿತ್ತಯ್ಯಾ. ಲಿಂಗ ಹೋದಡೆ ನಿನ್ನ ಪ್ರಾಣಂಗಳುಳಿವವೆ? ಲಿಂಗಪ್ರಾಣಿ ಪ್ರಾಣಲಿಂಗಿ ಎಂಬುದದು ಹುಸಿಯೆ, ಅಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ಲಿಂಗ ಂಗವೆಂಬ ಸಂದೇಹ ಉಳ್ಳನ್ನಕ್ಕ ಸಂದಳಿಯದೆಂಬರೈ ನಿನ್ನವರೆನ್ನ. ಮನ್ನಣೆಯ ಕರಸ್ಥಲಕ್ಕೆ ಇನ್ನು ನೀ ಬಂದಡೆ ಉನ್ನತೋನ್ನತನಪ್ಪೆ ಸಂದಿಲ್ಲದೆ ನಾ ನಿಮ್ಮ ಸೊಮ್ಮಿನೊಳಗಾನೀಗ ಲೀಯ್ಯವಪ್ಪೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಲಿಂಗಾರ್ಚನಾತ್ಪರಂ ಪೂಜ್ಯಂ' ಎಂಬ ಶ್ರುತಿಶಾಖೆ ಇಂದನುಭವಕ್ಕೆ ಬಂದಿತ್ತಯ್ಯಾ. `ಲಿಂಗಾಂಗೀ ಪರಮಶುಚಿಃ' ಎಂಬ ಸಾಮವೇದ ಶಾಖೆ ಸಮನಿಸಿತ್ತಯ್ಯಾ. ಮುನ್ನ ಮಾಡಿದ್ದೇ ಮಾಡಿದೆ, ಹೋಮವನಿನ್ನು ಮಾಡಿದಡೆ ತಲೆದಂಡ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಲೀಲೆಯದು ಪರಬೊಮ್ಮದ ಇಚ್ಚೆ. ಇಚ್ಛೆಯದು ಸಕಲ ಜೀವಜಾಲೋತ್ಪ್ಕ್ತ.ತ್ತಿ ಸಕಲ ಜೀವಜಾಲೋತ್ಪತ್ತಿಯದು ಜಗದ್ರಚನೆ. ಜಗದ್ರಚನೆಯದು ಜಗತ್ಪ್ರಳಯ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...