ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಷಷ್ಟಮ ಬ್ರಹ್ಮಕ್ಕೆ ಪಟ್ಟಗಟ್ಟಿತು ಮಾತೆ ಹೆತ್ತು ಹೆಸರಿಟ್ಟುದೈ ಅಕ್ಷರಾಂಕ. ಆರುವನು ಐದುವನು ಮೇಲಿಪ್ಪ ಮೂರುವನು ಕೂಡಿ ಹದಿನಾಲ್ಕರೊಳು ಲೋಕವಾಗಿ, ಏಕೈಕ ರುದ್ರ ನಿನ್ನಾಕಾರ ಚತುಷ್ಟಯಕೆ ಅನೇಕ ಪರಿಯಿಂ ಮಾತೆ ಬಸವಾಕ್ಷರ. ನೀನಾದಿಮುಖ ಶೂನ್ಯನಾಗಿಪ್ಪ್ಲ ನಿನ್ನುವನು ಖ್ಯ್ಕಾಮಾಡಿದ ಬಸವ ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಷಡಾಧಾರದಲ್ಲಿ ಅಡಿಗದ್ದಿ ಹೋದವರ ಕಂಡೆ. ತತ್ತ್ವಂಗಳ ಗೊತ್ತ ಹೇಳಿ ಮುಟ್ಟದೆ ಹೋದವರ ಕಂಡೆ. ಮಾತಿನ ಮಾಲೆಯನಾಡಿ ವಸ್ತುವನರಿಯದೆ ಭ್ರಾಂತರಾಗಿ ಕೆಟ್ಟವರ ಕಂಡೆ. ಅಷ್ಟಾಂಗಯೋಗವ ಮಾಡಿಹೆನೆಂದು ಘಟಕೆಟ್ಟು ನಷ್ಟವಾದವರ ಕಂಡೆ. ಇಂತಿದನರಿದು ಕರ್ಮಯೋಗವ ಮಾಡದೆ ಮರ್ಮಜ್ಞನಾಗಿ ಸರ್ವಗುಣಸಂಪನ್ನನಾಗಿ ನಿಜವನರಿದಾತಂಗೆ ತನಗೇನು ಅನ್ಯ್ಕಭಿನ್ನವಿಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಷಡುಸ್ಥಳ ಸಮನಿಸದಯ್ಯಾ ಎಲ್ಲರಿಗೆ. ಷಡುವ್ರತ ಸಮನಿಸದಯ್ಯಾ ಎಲ್ಲರಿಗೆ. ಅರಿದರಿದು ಗುರುಭಕ್ತಿ, ಅರಿದರಿದು ಲಿಂಗಭಕ್ತಿ ಅರಿದರಿದು ಜಂಗಮಭಕ್ತಿ. ಅರಿದಯ್ಯಾ, ಸುಲಭವೆ ಎಲ್ಲರಿಗೆ? ಅವ್ಯಯ ಕರುಣ ಅಳವಟ್ಟವರಿಗಲ್ಲದೆ ಗುರು-ಚರ-ಇಷ್ಟತ್ರಯ ಅಳವಡದು. ವ್ರತವಾರರ್ಲ ನಿಪುಣತೆಯಯ್ಯಾ. ನಿನ್ನ ಕೃಪೆ ಎತ್ತಾನೊಬ್ಬರಿಗಲ್ಲವೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಷಟ್‍ಸ್ಥಲವೆಂಬ ಷಣ್ಮುಖಮುದ್ರೆಯೊಳು, ನವವಿಧಭಕ್ತಿ ಎಂಬ ನವನಾದ ಕೇಳದವ ಶರಣನೆ ಅಯ್ಯಾ? ಷಟ್‍ಸ್ಥಲವೆಂಬ ಷಣ್ಮುಖಮುದ್ರೆಯೊಳು, ಷಡಕ್ಷರವೆಂಬ ಮಂತ್ರವ ಜಪಿಸಿ, ಷಡ್ವಿಧಂಗವ ಪೂಜಿಸದವ ಶರಣನೆ ಅಯ್ಯಾ? ಷಟ್‍ಸ್ಥಲವೆಂಬ ಷಣ್ಮುಖಮುದ್ರೆಯೊಳು, ಬೀಜಾಕ್ಷರತ್ರಯಂಗಳನೋ ಷಡಕ್ಷರಂಗಳ ಸಾಧಿಸಿ, ಷಣ್ಮುಖಶಿವನಾಗದವ ನಿಮ್ಮ ಶರಣನೆ ಅಯ್ಯಾ? ಎಲೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ