ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರಾಜಲಿಂಗವ ತಂದು ಪೂಜೆ ಕರದೊಳಗಿಟ್ಟು ಭೇದಿಸ ಬಾರದದ ಆನಂದವ. ಅಭೇದ್ಯಕರನಿತ್ಯವೆಂದಾ ಗುರುವ ಪಾಲಿಸಿದ ಅಭೇದ್ಯ ಶಿಷ್ಯನು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ರುದ್ರಂಗೆ ಪಾರ್ವತಿಯು, ವಿಷ್ಣುವಿಂಗೆ ಲಕ್ಷಿ ್ಮಯು, ಬ್ರಹ್ಮಂಗೆ ಸರಸ್ವತಿಯು ಮತ್ತೆ ತೃಣದಶನದ ಫಲದ ಆಹಾರದವರ ಸುತ್ತಿ ಮುತ್ತಿತ್ತು ನೋಡಾ ಮಾಯೆ; ಸಪ್ತಧಾತುವ ಮೀರಿ ಪಂಚಭೂತವ ಜರಿದ ಶರಣರಿಗೋಡಿತ್ತು ಮಾಯೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ರತ್ನಪರೀಕ್ಷೆಯ ಮಾಡುವ ಅಣ್ಣಗಳೆಲ್ಲ ದಿಮ್ಮಿದರಯ್ಯ. ಬಲ್ಲಿದ ಬೆಲೆ ಎಂದೆಡೆ ಹುಲುಕಡ್ಡಿಯೊಳೈತೆ; ಬೆಲೆ ಇಲ್ಲದುದೆಂದಡೆ ಬಲ್ಲವರ ಮುಂದುಗೆಡಿಸುತೈತೆ. ಇದರ ಬೆಲೆಯ ಬಲ್ಲ ನಮ್ಮ ಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
--------------
ಸಿದ್ಧರಾಮೇಶ್ವರ
ರಜತಗಿರಿಯ ಮೇಲೆ ಅಜಪಯೋಗದಲಿ ಭಜಿಸುವೊಡೆ ಅದಕೆ ಹಲವು ಬೆಟ್ಟದಾ ಶೂಲಾಕೃತಿಯ ಮೇಲೆ ಭಾಳಲೋಚನನಿಪ್ಪ ಭಾವದಲಿ ಗಿರಿಗಳಾರೇಳೆಂಟರಾನೀಲ ಕಂಬುವಿನಲ್ಲಿ ಬಾಲಕನು ನಿಂದೀಗ ಬಾಲ್ಯವನು ಕಳೆದು ತನ್ನಯ ರೂಪಿನಾ ಭಾವದಾ ಬೆಳಗಿನಲಿ ಗುರುವಿನಾ ಶುದ್ಧತೆಯ ಸಾಯುಜ್ಯವನು ಮೀರಿ ಸಂಬಂಧವಾತನು ತಾನೊಂದಾಗಿ ತವಕ ತವಕವ ಕೂಡಿ ಕಪಿಲಸಿದ್ಧ ಮಲ್ಲಿಕಾರ್ಜುನನ ತದ್ರೂಪಾದ.
--------------
ಸಿದ್ಧರಾಮೇಶ್ವರ
ರೂಹಿಲ್ಲದ ನೆಲದಲ್ಲಿ ಸಸಿಯನೇಂ ಬೆಳೆವುದಯ್ಯಾ? ಭಯವಿಲ್ಲದವನಲ್ಲಿ ಭಕ್ತಿಯನೇಂ ಬೆಳೆವುದಯ್ಯಾ? ಭಯ ಕೆಟ್ಟಡೆ ಭಕ್ತಿ ಬಿಡುವುದು, ಮಹದೇವನೊಲ್ಲ ಕಪಿಲಸಿದ್ಧಮಲ್ಲಿನಾಥನಾ ಹೋ! ಅಯ್ಯಾ!
--------------
ಸಿದ್ಧರಾಮೇಶ್ವರ
ರೇಖೆ ರೇಖೆ ಕೂಡಿದಲ್ಲಿ ಅಕ್ಷರವಾದುವು; ಅಕ್ಷರಾಕ್ಷರ ಕೂಡಿದಲ್ಲಿ ಶಬ್ದವಾಯಿತ್ತು; ಶಬ್ದ ಶಬ್ದ ಕೂಡಿದಲ್ಲಿ ಗ್ರಂಥಾನ್ವಯವಾಯಿತ್ತು. ಅಕ್ಷರದ್ಲಲ್ಲ, ಶಬ್ದದಲ್ಲಿ, ಗ್ರಂಥಾನ್ವಯದಲ್ಲಿ; ಏನೆಂಬುದಿಲ್ಲ, ಮೊದಲೆ ಇಲ್ಲ. ಇಲ್ಲೆಂಬುವ ಅಹುದೆಂಬುವ ಉಭಯ ಶಬ್ದಕ್ಕೆ ಲೋಪವಿಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ ಮಹಾಮಹಿಮನು.
--------------
ಸಿದ್ಧರಾಮೇಶ್ವರ
ರಾಯ ಬಿನ್ನಾಣಿಯ ಮಣ್ಣ ಗೋವಿಂದನ ಒಂದೆ ಗವಿಯ ಸಂಗತು ಒಂದೆ ಬೆಡಗಿನ ಕೊಳದಲಿಕ್ಕಿದನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯ! ಕೊಳವನೊಡಹೊಯ್ದರೆ ಸಂಗತ ಲಿಂಗತವಾಯಿತ್ತಯ್ಯಾ.
--------------
ಸಿದ್ಧರಾಮೇಶ್ವರ
ರೂಢಿಯರಿಯಲ್ಕೆ ಗಾಡಿಗನೆಂಬುದ ನಾ ಬಲ್ಲೆ, ಎನ್ನವರು ಬಲ್ಲರು. ನಿನ್ನನೇನ ಬೇಡಿಹರೆಲೆ ಅಯ್ಯಾ. ನೀ ಕೂರ್ತು ಕೊಡುವ ಸ್ವರ್ಗವನೊಲ್ಲರು ನಿನ್ನಲುಳ್ಳ ಫಲಪದಾಗಳನೆನ್ನವರೊಲ್ಲರು. ಬೇಡಿ ಅರ್ಥಿಸುವುದಾದಡೆ ಹುಸಿ ; ಕೊಡು ಕೊಡದೆ ಮಾಣು. ಬೇಡುವ ಹೀನ ನಿನಗಲ್ಲದೆ ಎನ್ನವರಿಗುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ರೂಪಿಂಗೆ ರೂಪು, ಜಾÐನಕ್ಕೆ ಸುಜಾÐನ, ಪ್ರಾಣಕ್ಕೆ ಪ್ರಸಾದ ಲಿಂಗತ್ರಯವ ವೇಧೆಯಿಂದವೆ ತಂದು ಅವರವರ ಕರದಲ್ಲಿ ದೀಕ್ಷೆಯ ಮಾಡಿದನು ಚೆನ್ನಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ರುಚಿಯನತಿ ರುಚಿಸಿದಲ್ಲಿ ವಿಷವಾಯಿತ್ತು ; ರುಚಿಯು ನಿಜಶಕ್ತಿಯಂತಿರಲು ಅಮೃತವಾಯಿತ್ತು. ಇದು ಕಾರಣ, ಗುರುಭಕ್ತರಿಗೆ ಗುರುಕರುಣವೆ ಸಾಕು; ಅನ್ಯರ ಅನುಭವ, ಅನ್ಯರ ಸಮರಸ ಕಪಿಲಸಿದ್ಧಮಲ್ಲಿಕಾರ್ಜುನನ ಶರಣನಿಗನಿಷ್ಟ ಕೇಳಾ, ಮಡಿವಾಳಯ್ಯಾ.
--------------
ಸಿದ್ಧರಾಮೇಶ್ವರ