ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸೊಲ್ಲಿಗೆ ಒಂದು ಖಂಡುಗ ನವಣೆ ನುಂಗಿತ್ತಯ್ಯಾ. ಆ ನವಣೆಯ ಹೊಯ್ದಳೆಯಬೇಕೆಂದಡೆ ಸ್ಥಲ ಸಾಲದಯ್ಯಾ- ಹಲಬರು ಛಲವಿಡಿದುವಿಡಿದು ಹೊಲಬುಗೇಡಿಯಾದರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸಾದಾಖ್ಯ ದೇಹದ ಆದ್ಯಂತ ಶೂನ್ಯದ ಆಮೋದದಕ್ಷರವು ಕಂಗಳಾಗಿ ಆನಂದ ರೂಪು ಕಪಿಲಸಿದ್ಧಮಲ್ಲಿಕಾರ್ಜುನನ ನೇಮಾಕ್ಷರದ ರೂಪಕಳೆಯ ಪೇಳುವೆನಯಾ
--------------
ಸಿದ್ಧರಾಮೇಶ್ವರ
ಸ್ತ್ರೀಯರ ಮೂವರ ಮುಂದುಗೆಡಿಸಿತ್ತು ಮೋಹ, ಅರಿಯರವ್ವಾ, ತಾವೊಂದು ದೇಹವುಂಟೆಂದೆಂಬುದ. ಅರಿಯರವ್ವಾ ತಾವೊಂದು ರೂಪುಂಟೆಂದೆಂಬುದ. ತ್ರಿಗುಣಾತ್ಮಕವೇ ರೂಪಾಗಿ, ರೂಪು ಅರೂಪಾದಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನೆರೆವ ನೆನಹಿನಲ್ಲಿಲೀಯವಾದರು.
--------------
ಸಿದ್ಧರಾಮೇಶ್ವರ
ಸಾಲೋಕ್ಯ ಪದ ಮೀರಿ ಸಾಮೀಪ್ಯ ಪದ ಮೀರಿ ಸಾಯುಜ್ಯ ಪದವೀವ ಆತನನು ವಶಮಾಡಿ ತಂದೆನ್ನ ಕರದೊಳಿತ್ತಾ ಗುರು ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸೀಮೆಯ ಮೀರಿದ ಸಂಬಂಧನೆ, ಸಂಬಂಧದಲ್ಲಿ ಸಮನಿಸದ ಸಂಯೋಗನೆ, ಎನ್ನ ಸಲಹುವ ಗುರು-ಲಿಂಗ-ಜಂಗಮ-ಪಾದೋದಕ-ಪ್ರಸಾದಕ್ಕೆ ಅರ್ಹನ ಮಾಡಿದೆ. ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀ ಬಸವನಾಗಿ ಬಂದು ನಿನ್ನವರಿಗೆ ಯೋಗ್ಯನ ಮಾಡಿ, ಭವವ ತಪ್ಪಿಸಿದೆ.
--------------
ಸಿದ್ಧರಾಮೇಶ್ವರ
ಸಕ್ಕರೆಯು ಆಕಾರ, ರುಚಿಯು ನಿರಾಕಾರ; ಲಿಂಗವಾಕಾರ, ಜಂಗಮ ನಿರಾಕಾರ; ಬೆಣ್ಣೆ ಆಕಾರ, ಘೃತ ನಿರಾಕಾರ. ಆಕಾರ ಬಿಟ್ಟು ನಿರಾಕಾರವಿಲ್ಲ, ನಿರಾಕಾರ ಬಿಟ್ಟು ಆಕಾರವಿಲ್ಲ. ಲಿಂಗ ಜಂಗಮವೆಂಬುಭಯ ಶಬ್ದ ಒಂದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಸಿಂಹ ಮದಕರಿಯ ಮೇಲೆ ಹಾರುವುದಲ್ಲದೆ, ಮದಮಹಿಷಿಯ ಮೇಲೆ ಹಾರುವುದೆ ಅಯ್ಯಾ? ಪಕ್ಷಿ ಆಕಾಶದಲ್ಲಿ ಹಾರುವುದಲ್ಲದೆ, ಪಂಜರದಲ್ಲಿ ಹಾರದು ನೋಡಯ್ಯಾ. ನಮ್ಮ ಕಪಿಲಸಿದ್ಧಮಲ್ಲೇಶನನರಿವವರು ಜಾÐನದ ಮೇಲೆ ಹಾರುವರಲ್ಲದೆ ಅಜಾÐನದಲ್ಲಿ ಹಾರರು.
--------------
ಸಿದ್ಧರಾಮೇಶ್ವರ
ಸಜ್ಜನವಾಳವೆ ತಾನಿನಿತೆಂಬೆ ಆಲಸಿದಡೆ ಹರಿವುದೆ ಅಯ್ಯ ಐಕ್ಯಪದವು? ಐನಾನಾಕ್ಷರದ ಅಂತಪೂರ್ವವನರಿದಡೆ ಐಕ್ಯನಿನಗರಿಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸ್ವಸ್ಥಿರವೆಂಬ ಭೂಮಿಯಲ್ಲಿ ಸ್ತಂಭಂಗಳು ಮೂರಾಗಿ, ಫಲಂಗಳಾರಾದವು. ಆ ಫಲ ಮೀರಿತ್ತು, ಮೇಲಣ ಮೂವತ್ತಾರ ಮೀರಿ, ಅವ್ವೆಗೆ ಯೋಗ್ಯವಾಗಿ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ ತತ್ವವಿದೆಂದರಿತು ತತ್ವಮಸಿಯಾದಳವ್ವೆ.
--------------
ಸಿದ್ಧರಾಮೇಶ್ವರ
ಸ್ಥೂಲವಾದಡೇನು ಸೂಕ್ಷ್ಮವಿಲ್ಲದನ್ನಕ್ಕರ? ಕಳೆಯುಳ್ಳವನಾದಡೇನು ಕುಲವಿಲ್ಲದನ್ನಕ್ಕರ? ಜಲವಾದಡೇನು ಸ್ಥಲಯೋಗ್ಯವಿಲ್ಲದನ್ನಕ್ಕರ? ಆ ಕಲಿ ಮಹಿಮನಾದಡೇನು, ಕಲಾಮೂರ್ತಿ ಇಷ್ಟಲಿಂಗವಿಲ್ಲದನ್ನಕ್ಕರ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸ್ತೋತ್ರವೆಂಬುದು ನೀನು ಮಾಡಲಾದವು ಕಂಡಯ್ಯಾ. ಮೂರ್ತಿಯೆಂಬುದು ನೀನು ನೆನೆಡಾದುದು ಕಂಡಯ್ಯಾ. ಆ ಮೂರ್ತಿಯೆಂಬುದು ನಿನ್ನ ಸ್ವಭಾವವು ಕಂದಯ್ಯಾ. ಎನ್ನ ಹೃತ್ಕಮಲದೊಳಗೆ ಹುಟ್ಟುವ ಸ್ಮರಣೆ ನಿನ್ನ ಗತಿ ನೋಡಯ್ಯಾ. ಕಪಿಲಸಿದ್ಧಮಲ್ಲನಾಥಯ್ಯಾ, ಬಾಣ ಮಯೂರ ಹಲಾಯುಧರಿಗೆಂತೊಲಿದೆ ಹೇಳಯ್ಯಾ.
--------------
ಸಿದ್ಧರಾಮೇಶ್ವರ
ಸಕಲ ನಿಃಕಲದಲ್ಲಿ , ಬ್ರಹ್ಮಾಂಡತತ್ತ್ವದಲ್ಲಿ ಕರ್ಮದ ಸೊಮ್ಮಿನ ಸೀಮೆಯನತಿಗಲೆದು ಅದ ಲಿಂಗವೆಂದು ತೋರಬಲ್ಲಾತ ಗುರು. ತನುಗುಣ ಸಂಬಂಧವ ತಾನೆಂದು ತೋರಲೀಯದೆ, ನಿಶ್ಚಯವ ಮಾಡಿ ತಾತ್ಪರ್ಯಕಲೆಯನಿರಿಸಿ, ಸಕಲದಲ್ಲಿ ನಿಃಕಲದಲ್ಲಿ , ರೂಪಿನಲ್ಲಿ ಅರೂಪಿನಲ್ಲಿ , ಭಾವದಲ್ಲಿ ನಿಭಾವದಲ್ಲಿ ಅವೆ ಅವಾಗಿ ತೋರಬಲ್ಲಾತ ಗುರು . ಈ ಪರಿಯಲ್ಲಿ ಎನ್ನ ಭವವ ತಪ್ಪಿಸಿದ ಕಪಿಲಸಿದ್ಧಮಲ್ಲಕಾರ್ಜುನಯ್ಯನೆಂಬ ಪರಮಗುರು.
--------------
ಸಿದ್ಧರಾಮೇಶ್ವರ
ಸೀಮೆಯನು ದಾಟಿಪ್ಪ ಸಂಬಂದ್ಥಿ ತಾನಲ್ಲ ಆನತದೊಳಗೆ ತನು ಬ್ರಹ್ಮ ತಲ್ಲೀಯ. ಶುದ್ಧ ಸಾನಂದ ತಾನೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸಂಸಾರ ತೆಪ್ಪದೊಳಗೆ ಆನೀಗ ಅದ್ದಿ ಅಳಲುತ್ತ ಬಳಲುತಿಪ್ಪೆನಯ್ಯಾ, ಬೇಗ ಬಾರಾ ಬಾರಾ ಅಯ್ಯಾ, ವಜ್ರಲೇಪದಲಿ ಬಿದ್ದಿದ್ದೇನೆ ಬೇಗ ಬಂದೆತ್ತಯ್ಯಾ, ಹೆತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜು£
--------------
ಸಿದ್ಧರಾಮೇಶ್ವರ
ಸಾಗರ ಸತ್ಯವ್ವೆ, ಹಲಬರ ಮುಖಪ್ರಭಾಳೆ, ನೀ ಬಾರವ್ವಾ, ಕಂಗಳ ಕೋಮಳೆ ಕಿವಿಗಳ ಸಂಬಂದ್ಥಿಯೆ, ನೀ ಬಾರವ್ವಾ. ಆತನ ಕಂಗಳ, ಕಿವಿಗಳ ಪರಿಯಾಣಕ್ಕೆ ಚೊಕ್ಕ ಸರದೋಗರನೆತ್ತುವೆ, ನೀ ಬಾರವ್ವಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯಂಗೆ.
--------------
ಸಿದ್ಧರಾಮೇಶ್ವರ
ಸಂಸಾರ ಭ್ರಮೆಯಿಂದಾಯಿತ್ತು ಅಜ್ಞಾನ, ಅಜ್ಞಾನದಿಂದಾಯಿತ್ತು ಅಹಂಮಮತೆ, ಅಹಂಮಮತೆಯಿಂದಾಯಿತ್ತು ಭವಬಂಧನ. ಈ ಭವಬಂಧನದ ಲಹರಿವಿಡಿದು, ಹರಿಸುರಬ್ರಹ್ಮಾದಿಗಳು ಜ್ಞಾನರತ್ನವ ನೀಗಿ, ಪ್ರಳಯಕ್ಕೊಳಗಾದರು, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸಂಚಿತಾದಿ ಕರ್ಮತ್ರಯಂಗಳು ಜೀವನಿಗಲ್ಲದೆ ಶಿವಸ್ವರೂಪನಿಗೆಲ್ಲಿಹವೂ? ಆಡುವ ಗೊಂಬೆಯನು ಆಡಿಸುವಾತಂಗಲ್ಲದೆ, ಆಡುವ ಗೊಂಬೆಗೆಲ್ಲಿಹದೊ ಸ್ವತಂತ್ರತೆ? ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಇದರಿರವು ಸ್ವತಂತ್ರನಿಗಲ್ಲದೆ ಅಸ್ವತಂತ್ರನಿಗೆಲ್ಲಿಹದೊ ?
--------------
ಸಿದ್ಧರಾಮೇಶ್ವರ
ಸರ್ವಾತ್ಮ ನೀನೆನ್ನ ಸರ್ವನನು ಮಾಡಿದೆ ಉರ್ವಿಯೊಳಗಣ ಶುದ್ಧಿಯ ಮೆರೆಸಿರಿ ನಿಮ್ಮ ನಿರ್ವಾಣಪದವಿತ್ತ ಗುರು ಬಸವಣ್ಣನೈ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸನಕ ಸಾನಂದ ಮುನಿಜನಂಗಳು ಅರಿಯರಯ್ಯಾ ನಿಮ್ಮಂತುವನು. ಒಂದರಲ್ಲಿ ಹಲವಾಗಿ, ಹಲವರಲ್ಲಿ ಒಂದಾಗಿ, ಸಾಕಾರ ನಿರಾಕಾರವಾಗಿಪ್ಪ್ಲ ಏಕವಾಗಿಪ್ಪೆ ಕಪಿಲಸಿದ್ಧಮಲ್ಲಿನಾಥ ನೀನೆಯಾಗಿ.
--------------
ಸಿದ್ಧರಾಮೇಶ್ವರ
ಸಿಂಬಿಗೆ ರಂಭೆತನವುಂಟೆ? ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ? ಡಿಂಗರಿಗಂಗೆ ಸಮವೆಂಬ ಸಂಭ್ರಮವುಂಟೆ? ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ ನೀ ಬಂದೆಯಲ್ಲಾ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನಂಗದಲ್ಲಿ ಪ್ರಭುದೇವರ ಕಾರುಣ್ಯದಿಂದ ಬದುಕಿದೆ.
--------------
ಸಿದ್ಧರಾಮೇಶ್ವರ
ಸಂತೆಯೊಳಿದ್ದ ಕಲ್ಲುಗಳೆಲ್ಲಾ ಲಿಂಗವೇನೊ ಅಯ್ಯಾ? ಪರ್ವತ ವಾರಣಾಸಿ ಬದರಿಕಾ ಕ್ಷೇತ್ರಂಗಳಲ್ಲಿದ್ದ ಕಲ್ಲುಗಳೆಲ್ಲಾ ಲಿಂಗವೇನೊ ಅಯ್ಯಾ? ಅಂತಕಾಂತಕ ಶ್ರೀಗುರುಮೂರ್ತಿ ತನ್ನರುಹಿನ ರೂಪವಿಂತೆಂದು ತೋರಿದ ಕಲ್ಲೇ ನಿಜಂಗ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಸೀಮೆಯ ಮೀರಿದ ಸಿರಿವಂತನೆ, ಪದವ ಮೀರಿದ ಬಹುರೂಪನೆ, ಆನಂದ ಆನಂದವಾದ ನಿತ್ಯ ಸಾನಂದನೆ, ಸುಗುಣದಲ್ಲಿ ಬೆಳಗುತಿಹ ನಿತ್ಯ ಸಾನಂದನೆಲೆ ಅಯ್ಯಾ, ನಿನ್ನಾನಂದವನಾರು ಬಲ್ಲರು? ನೀನು ಲಿಂಗತ್ರಯದೊಳಗೆ, ಎರಡೈದು ಪಾದೋದಕದ, ಐದಾರು ಕೂಡಿದ ಪ್ರಸಾದದಲ್ಲಿ, ನಿತ್ಯಸುಖಿಯೆಂಬುದ ಸತ್ಯಶುಚಿಯೆಂಬುದ ನಿನ್ನವರೆ ಬಲ್ಲರು. ಜಡವಿಡಿದು ನುಡಿವ ಅಜ್ಞಾನಿ ಹೊರಸುಗಳು ಬಲ್ಲರೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸತ್ಕುಲ ದುಷ್ಕುಲವೆಂಬುದದು ಜಗತ್ಪ್ರಸಿದ್ಧವಯ್ಯಾ. ಕುಲ ಸತ್ಕುಲ ನಡೆ ವಿಪರೀತವಾದಡೆ ದುಷ್ಕುಲ ನೋಡಯ್ಯಾ. ಮಧು ಮಕ್ಷಿಕ ಎಂಜಲು ಕುಲ ರುಚಿಯಾದ[ಲ್ಲಿಯೆ], ಚಂದ್ರಧರ ಕಪಿಲಸಿದ್ಧಮಲ್ಲಿಕಾರ್ಜುನ ತನ್ನ ಪೂಜೆಗೆಂದು ನೇಮಿಸಿದ ಬೊಮ್ಮಣ್ಣ.
--------------
ಸಿದ್ಧರಾಮೇಶ್ವರ
ಸರ್ವವನೂ ಕಂಡು ಕಂಠಣಿಸದೆ ಓಸರಿಸದೆ ಒಳಕೊಂಡಿಪ್ಪುದದಕೆ ಎಂತಿರಬೇಡಾ ಹಿರಿಯರ ಮನ? ಮನವಿಚ್ಛಂದವಾಗದದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಹೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸಾಕಾರದ ಲಕ್ಷ ್ಯವದು ನಿರಾಕಾರದಲ್ಲಿ ಲೀನವಲ್ಲದೆ, ಸಾಕಾರದಲ್ಲಿ ಲೀನವಾಗಬಾರದು. ಕೀಟ-ಭ್ರಮರ ನ್ಯಾಯದಂತೆ ಚರಿಸಬಲ್ಲಡವನೆ ನಿರ್ದೇಹ ಜೀವನ್ಮುಕ್ತನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...