ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎಂಟು ಹದಿನಾರೆಂಬ ಬಲೆಯನೊಡ್ಡಿ ಚೆನ್ನಮೃಗವೆಂಬ ಕಂಗಳ ಬೇಟೆ ಎಸುವೆನಯ್ಯಾ. ವಿಂಧ್ಯವನದೊಳಗೆ ಓ ಓ ಎಂದೆನುತಲಯಿದರೆ ಎಸುವೆನಯ್ಯಾ. ಎಯ್ದೆ ಬಾಣಕ್ಕೆ ಎಯ್ದೆ ಗುರಿಯಾಗದ ಮುನ್ನ ಎಯ್ದುವೆ ದಶಮುಖ ರಾಮತಂದೆ ಎಸುವೆನಯ್ಯಾ
--------------
ಸಿದ್ಧರಾಮೇಶ್ವರ
ಎಂಟಕ್ಕೆ ಗಂಟಾಗಿ ನಂಟನ ತಾಯಿ ನಮ್ಮೂರಿಗೆ ಹೋದಳು. ಅರಸುಗಳೈವರು ಅರಸಿಯ ಮುದ್ದಾಡ ಹೋದರು. ರೂಪುಳ್ಳ ಹೆಂಡತಿ ಕಂಡಡೆ ಏನೆಂದೊ: ನಮ್ಮ ಕಪಿಲಸಿದ್ಧಮಲ್ಲಿನಾಥ ಉಂಬಡೆ ಓಗರವಿಲ್ಲವೆಂದನು.
--------------
ಸಿದ್ಧರಾಮೇಶ್ವರ
ಎನ್ನ ಹೊತ್ತಿಪ್ಪವಳ ನೆತ್ತಿಯ ಕಣ್ಣಿನಲ್ಲಿಪ್ಪ ಂಗವ ನಾನೆಚ್ಚತ್ತು ನೋಡುವ ತೆರನೆಂತಯ್ಯಾ. ನೋಡ ಹೋದಡೆ ನೆತ್ತಿ ಒಡೆದು ಕಣ್ಣಾಯಿತ್ತು. ನೋಡರ್ದಡೆ ಎನಗವಳು ತೋರಳು. ಎನಗೆ ಕಾಬ ತೆರನ ತೋರಾ, ಕಪಿಲಸಿದ್ಧಮಲ್ಲಿಕಾರ್ಜುನ ಪ್ರಭುವೆ.
--------------
ಸಿದ್ಧರಾಮೇಶ್ವರ
ಎಕ್ಕೆವಿಂಡುಗಳೆಂಬವರು ಮುಕ್ಕಣ್ಣಾ, ನಿಮ್ಮ ಗಣಂಗಳು. ಬತ್ತಿದ ಕೆರೆ ಬಾಯಬಿಟ್ಟಂತೆ ಮೊರೆಯಿಟ್ಟು ಬರಲು, ಹೊತ್ತಿದ ಅಂಗಾಲ ಕಿಚ್ಚು ನ್ಕ್ತೆಯ ಮುಟ್ಟಿದಡೆ, ಚಕ್ಕನೆ ಕಪಿಲಸಿದ್ಧಮಲ್ಲಿನಾಥ ನೊಸಲಕಣ್ಣ ತೆಗೆದನು.
--------------
ಸಿದ್ಧರಾಮೇಶ್ವರ
ಎನ್ನ ರೋಮಂಗಳೆಲ್ಲವು ನಯನಂಗಳಾದಡೆ ಸಾಲ್ವವು ನೋಡಾ, ಜಗದಂಬೆಯ ಪಾದಪಂಕಜದರ್ಶನಕ್ಕೆ. ಎನ್ನ ನಯನಂಗಳೆಲ್ಲ ಜ್ಞಾನಚಕ್ಷುಗಳಾದಡೆ ಸಾಲ್ವವು ನೋಡಾ, ಜಗದಂಬೆಯ ಪಾದಪಂಕಜಧ್ಯಾನಕ್ಕೆ. ಎನ್ನ ಜ್ಞಾನಚಕ್ಷುಗಳೆಲ್ಲ `ಅಖಂಡಾದ್ವಯ ಏಕೋನೇತ್ರ'ವಾದಡೆ ಕೂಡುವುದು ನೋಡಾ, ಜಗದಂಬೆಯ ಪಾದಪಂಕಜದಲ್ಲಿ ಭಾವವು, ಭವಹರ ಪುರಹರ ಕಪಿಲಸಿದ್ಧಮಲ್ಲೇಂದ್ರಾ.
--------------
ಸಿದ್ಧರಾಮೇಶ್ವರ
ಎಲ್ಲ ಹೆಂಗೂಸುಗಳು ಬಂದು ಮುಟ್ಟಿ ಮೂವಟ್ಟೆಯ ನೆರೆವಳು ನಲ್ಲನ ಇವಳೈವರವರೆಲ್ಲರ ನಾವೀ ಮೂಗನ ನೆರೆವೆವವ್ವಾ ಉಸುರದೆ ಬಂದವನ, ಉಸುರದೆ ನೆರೆವ ಕಪಿಲಸಿದ್ಧಮಲ್ಲಿನಾಥನ.
--------------
ಸಿದ್ಧರಾಮೇಶ್ವರ
ಎಮ್ಮ ನಲ್ಲ ಮನೆಯೊಳಗೆ ಏಕಾಂತಂಬೊಕ್ಕಹನು, ಬೇಗ ಬೇಗ ಹೊರವಂಡಿರಣ್ಣಗಳಿರಾ. ನೀವಿದ್ದಡೆ ಮೃತ್ಯು ಬಪ್ಪುದು; ಆತ ಮನೆಯೊಳಗೊಬ್ಬರಿದ್ದಡೂ ಸೈರಿಸ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಲ್ಲನು.
--------------
ಸಿದ್ಧರಾಮೇಶ್ವರ
ಎನ್ನ ಮಸ್ತಕದಲ್ಲಿ ಹಕಾರವಾಗಿದ್ದಾತ ಪ್ರಭುದೇವ. ಎನ್ನ ಲಲಾಟದಲ್ಲಿ ಓಂಕಾರವಾಗಿದ್ದಾತ ಚೆನ್ನಬಸವ. ಎನ್ನ ಘ್ರಾಣದಲ್ಲಿ ನಕಾರವಾಗಿದ್ದಾತ ಮಡಿವಾಳಯ್ಯ. ಎನ್ನ ಬಾಯಿಯಲ್ಲಿ ಮಕಾರವಾಗಿದ್ದಾತ ಮರುಳು ಶಂಕರಯ್ಯ. ಎನ್ನ ನೇತ್ರದಲ್ಲಿ ಶಿಕಾರವಾಗಿದ್ದಾತ ಬಸವ. ಎನ್ನ ಕಪೋಲದಲ್ಲಿ ವಕಾರವಾಗಿದ್ದಾತ ಪಡಿಹಾರಿ ಬಸವಯ್ಯ. ಎನ್ನ ಶ್ರೋತ್ರದಲ್ಲಿ ಯಕಾರವಾಗಿದ್ದಾತ ಹಡಪದಪ್ಪಣ್ಣ. ಎನ್ನ ಜಿಹ್ವೆಯಲ್ಲಿ ಹ್ರೀಂಕಾರವಾಗಿದ್ದಾಕೆ ಅಕ್ಕನಾಗಮ್ಮ. ಎನ್ನ ಸರ್ವಾಂಗದಲ್ಲಿ ಸಕಲ ಪ್ರಣವರೂಪಾಗಿದ್ದಾತ ಗುರುವಿನ ಗುರು ಚೆನ್ನಬಸವ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಎನ್ನ ತನು ಕರಗಿ, ಎನ್ನ ಮನ ಕರಗಿ ಕೊರಗಿದ ದುಃಖವಿದಾರದಯ್ಯಾ? `ಅಯ್ಯಾ ಅಯ್ಯಾ' ಎಂದು ಆಳುವ ಅಕ್ಕೆ ಇದಾರದಯ್ಯಾ? ಮರಹೆಂಬ ಕೂರಸಿಗೆ ಗುರಿಮಾಡಿದವರಾರಯ್ಯಾ? ಹಾ! ಹಾ! ಎಂಬ ಧ್ವನಿಯ ಕೇಳಲಾರದೆ, ಕಂಡು ಕರುಣಂದ ಶಿರವ ಹಿಡಿದೆತ್ತಿ, ಎನ್ನ ಕಣ್ಣ ನೀರ ತೊಡೆದನು ಕಪಿಲಸಿದ್ಧಮಲ್ಲಿನಾಥಯ್ಯನು.
--------------
ಸಿದ್ಧರಾಮೇಶ್ವರ
ಎಂದಡಾ ಮಾಯೆಯನು ಕರದಿಂ ತಂದೆ ಇಕ್ಕೆ ಜಾರಿ ಕೆಡುಹುವುದು. ಮಾಯೆ ಆರೂಢವೆಂಬವರ ಏಡಿಸುವುದು. ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ ಶರಣರಿಗೆ ಅಂಜಿ ನಿಂದಿತು ಮಾಯೆ.
--------------
ಸಿದ್ಧರಾಮೇಶ್ವರ
ಎಮ್ಮ ವಚನದೊಂದು ಪಾರಾಯಣಕ್ಕೆ ವ್ಯಾಸನದೊಂದು ಪುರಾಣ ಸಮ ಬಾರದಯ್ಯಾ. ಎಮ್ಮ ವಚನದ ನೂರೆಂಟರಧ್ಯಯನಕ್ಕೆ ಶತರುದಿ[್ರಯಯಾಗ] ಸಮ ಬಾರದಯ್ಯಾ. ಎಮ್ಮ ವಚನದ ಸಾಸಿರ ಪಾರಾಯಣಕ್ಕೆ ಗಾಯತ್ರಿ ಲಕ್ಷ ಜಪ ಸಮ ಬಾರದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಎಂತೆಂತು ನೋಡಿದಡೀ ಮನವು ಸಂತವಿಡಲಿಯದಯ್ಯಾ. ನಿಮ್ಮಯ ಚಿಂತೆಗೆ ಒಳಗಾಗದೆ ದೆಸೆದೆಸೆವರಿವುದು, ಕಾಮಕಿಚ್ಚೆ ೈಸೂದು, ಕ್ರೋಧಕಿಚ್ಚೆ ೈಸೂದು, ಆಮಿಷ ತಾಮಸಕ್ಕೆ ತಾನೆ ಮುಂದಾಗಿಪ್ಪುದು. ಇದ ಮೂಲನಾಶವ ಮಾಡೆ ನೀ ಮುಂದಾಗಯ್ಯ ತಂದೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಎಮ್ಮ ನೋವೆ ನೋವು ನಿಮಗೆ, ಎಮ್ಮ ಸುಖವೆ ಸುಖವು ನಿಮಗೆ, ಮತ್ತೆ ನಿಮ್ಮುವ ತೋರೆಯಯ್ಯಾ. ನೀನು ಕರಕರಸೂಕ್ಷ ್ಮನು. ಸೂಕ್ಷ್ಮದಲ್ಲಿ ತಿಮಿರ ಹೂಸಿ ಬೆರಸಿ ನೋಡು ನೋಡೆಂಬೆನಯ್ಯಾ. ನಾ ಕಾಣಿಸಕಾರೆನಯ್ಯಾ; ನೀ ಬೆರಸಿ ಬೆರಸಿ ಒಲ್ಲೆನೆ. ಎನ್ನ ಕಪಿಲಸಿದ್ಧಮಲ್ಲಿನಾಥಾ, ನೀ ಶೂನ್ಯನಯ್ಯಾ.
--------------
ಸಿದ್ಧರಾಮೇಶ್ವರ
ಎನ್ನ ಸಕಲಕ್ಕೆ ಗುರು ಬಸವಣ್ಣ ಎನ್ನ ನಿಃಕಲಕ್ಕೆ ಗುರು ಬಸವಣ್ಣ ; ಎನ್ನ ಸಕಲ ನಿಃಕಲ ಕೂಡಿದಾನಂದದಾ ಪದವೆನಿತ ಆಗೆನಿಸಿ, ಪದವ ಮೀರಿದ ಸದಮಲಜ್ಞಾನಜ್ಯೋರ್ಮಯನೈ. ಬಸವಣ್ಣನೇ ಶರಣು, ಬಸವಣ್ಣನೇ ಶರಣು. ಬಸವಣ್ಣನೇ ಭಕ್ತಿಮುಕ್ತಿಗೆ ಮೂಲವು. ಬಸವಣ್ಣನ ನೆನೆದು ಅನಿಮಿಷಾಕ್ಷರದಿಂದ ಬಸವಪದವಾಯಿತ್ತೈ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಎಪ್ಪತ್ತೊಂದು ಅರಣ್ಯದಲ್ಲಿಪ್ಪತ್ತೊಂದು ಋಷಿಯರು ತಪ್ಪದೆ ಅಜಪೆಯ ಜಪಿಸುತ್ತ, `ಹವಿಷಾ ಹವಿಷಾ'ಯೆಂಬ ಆನಂದದ ಹಂಸನ ಜಪದಲ್ಲಿ, ತೋರಿಪ್ಪ ಬ್ರಹ್ಮಾಂಡವ ಮೀರಿಪ್ಪ ಜಪದಲ್ಲಿ, ಆರೂಢವಾದಳವ್ವೆ. ಕಪಿಲಸಿದ್ಧಮಲ್ಲಿನಾಥನ ಕೂಡಿ ಕೂಡಿಲೀಯವಾದಳು.
--------------
ಸಿದ್ಧರಾಮೇಶ್ವರ
ಎಲೆ ಭವಗೇಡಿ ನಿನ್ನುವನು ತೋರದೆ ಕಾಡಿದೆ ಹಿಂದೆ. ಅಯ್ಯಾ, ತನುಗುಣ ಸಾಹಿತ್ಯ ನೀನೆ. ನೀನೆನ್ನ ಮನದ ಮಹೋತ್ಸವನೆ ಅಯ್ಯಯ್ಯಾ, ಅವ್ವೆಯ ಅಯ್ಯನಾಗಿಯೆಂದಿಪ್ಪೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಎಣಿಕೆಯಿಲ್ಲದ ಘನವೆನ್ನ ಕಣ್ಣ ಮುಂದೆ ತೋರುತ್ತದೆ, ಎಲೆ ಅಯ್ಯಾ. ಇದ ಕಂಡು ಮನಕ್ಕೆ ಸಂತಸವಾಯಿತ್ತಯ್ಯಾ. ಎಣಿಕೆಯಿಲ್ಲದ ಘನವ ಕರುಣಿಸಿದಡಾನು ಬದುಕುವೆನಯ್ಯಾ, ಕಪಿಲಸಿದ್ಧಮ್ಲನಾಥಯ್ಯಾ.
--------------
ಸಿದ್ಧರಾಮೇಶ್ವರ
ಎಲ್ಲ ವಾಹಿ ಇವಗೆ ನೋಡಾ! ನೀರೆಣ್ಣೆ ಬೆಣ್ಣೆ ಇವಗೆ ನೋಡಾ! ಈ ವಾಹಿ ಕಿಚ್ಚು ಇವಗೆ ಸವೆದೆನವ್ವಾ! ಎಂತುಟನು ಸರಿಮಾಡಿ ನುಂಗುವ ಕಪಿಲಸಿದ್ಧಮಲ್ಲಿನಾಥಯ್ಯ!
--------------
ಸಿದ್ಧರಾಮೇಶ್ವರ
ಎಲ್ಲರ ನೆನಹಿನ ಆಯುಷ್ಯದ ಪುಂಜವೆ, ಅವಧಾರು ಅವಧಾರು; ಅಯ್ಯಾ ಎನ್ನ ನೆನಹಿನ ಮಂಗಳನೆ, ಅವಧಾರು ಅವಧಾರು, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಎಲೆ ದೇವಾ, ಒಂದು ಹೋಗಿ ಎರಡಾದುದು, ಎರಡು ಹೋಗಿ ಮೂರಾದುದು, ಮೂವತ್ತಾರಾಗಿ ಮೂರರಲ್ಲಿ ಆಡಿದುದು; ಆಡಿ ಆಡಿ ಅದೆ ಲಿಂಗವಾಯಿತ್ತು. ನಮ್ಮ ಗುರು ಚೆನ್ನಬಸವಣ್ಣನೊಂದು ಕೊಟ್ಟ್ಲ ಎಲ್ಲಾ ಒಂದೆ ಆಯಿತ್ತು, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಎಮ್ಮ ನಲ್ಲನೊದು ಒಲಿಸಿ ಕಾಡುತ್ತಿರೆ, `ಬಾರಾ ಬಾರಾ' ಎಂದೆನ್ನ ಕರಣ ಹರಣವ ತೋರಿದಡೆ ತಾನೆ ಒಲಿದು ಬಂದೆನ್ನ ತಲೆಯ ಪಿಡಿದು ನೆಗಹಿ, ಎನ್ನ ಮನೆಗೆ ಬಂದ ಕಪಿಲಸಿದ್ಧಮಲ್ಲಿನಾಥನ ಒಲುಮೆಯ ಘನವೇನೆಂದುಪಮಿಸುವೆನು.
--------------
ಸಿದ್ಧರಾಮೇಶ್ವರ
ಎಲೆ ದೇವಾ, ನೀನೊಬ್ಬನೆ ಹಲವು ರೂಪಾಗಿ ಬಂದೆಯಯ್ಯಾ ; ಭಕ್ತಿಯಲ್ಲಿ ಬಸವಣ್ಣನಾಗಿ ಬಂದಿರಿ ; ಮನದ ಮೈಲಿಗೆಯ ತೊಳೆಯುವಲ್ಲಿ ಮಡಿವಾಳನಾಗಿ ಬಂದಿರಿ; ಎನ್ನ ಭಕ್ತಿಗೆ ಸೊನ್ನಲಿಗೆಯಲ್ಲಿ ಕಪಿಲಸಿದ್ಧಮಲ್ಲನಾಗಿ ಬಂದಿರಿ.
--------------
ಸಿದ್ಧರಾಮೇಶ್ವರ
ಎಲೆ ಭ್ರಾಂತುಗೊಂಡ ಮರುಳೆ, ನೀ ಕೇಳಾ, ಹಾ! ಹಾ! ಅಯ್ಯಾ, ಈಶ್ವರ ತಾ ಮುನ್ನ ಹರಸಿ ಕಟ್ಟಿದ ನೊಸಲಪಟ್ಟವ ಬೇರೆ ಮತ್ತೊಬ್ಬರು ಹೆಚ್ಚಿಸಿ ಕುಂದಿಸಿ ಕಟ್ಟಬಲ್ಲರೆ? ಅಯ್ಯಾ ಎನ್ನ ಕಪಿಲಸಿದ್ಧಮ್ಲನಾಥಯ್ಯಾ, ತಾ ಮುನ್ನ ಹರಸಿ ಕಟ್ಟಿದಂತಹುದಯ್ಯಾ.
--------------
ಸಿದ್ಧರಾಮೇಶ್ವರ
ಎನಿತುಂ ತ್ರಿಭುವನಂಗಳು ತನಗಾದಡೆ ಅನಿತರ ತುಷ್ಟಿವಡೆಯಳು, ಈ ಆಸೆಯೆಂಬವಳಿಂದವೆ ನಿಮ್ಮೆಡೆಗಾಣಪ್ಪೆನು. ಈ ಆಸೆಯೆಂಬವಳನೆಂದಿಂಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನೊ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಎನ್ನನಾಗಳೆ ಬಂದಿವಿಡಿದೆ ಗಡಾ ನೀನು. ನಿಮ್ಮ ಹಿಡಿವಡೆ ಹಿಡಿವರು, ತನುವಿರೆ ತನು ಬೇರಾದವರು. ನಿಮ್ಮ ಹಿಡಿವಡೆ ಹಿಡಿವರು, ಮನವಿರೆ ಮನ ಬೇರಾದವರು. ನಿಮ್ಮ ಹಿಡಿವಡೆ ಹಿಡಿವರು, ಕೈಯಿರೆ ಕೈ ಬೇರಾದವರು. ಈಸುಳ್ಳವರು ಮೊದಲಾಗಿ ನಿಮ್ಮ ಹಿಡಿಯಲಾರರು. ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಹಿಡಿದು ತಡೆಯಲಾನೇತರವನಲ್ಲ. ಕರುಣದಿಂದ ಬಾರಾ, ಎನ್ನ ದೇವರ ದೇವಾ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...