ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏಕೈಕನೆಂ....... ಅನೇಕ ವಿಧ ಸದ್ಭಕ್ತಿ ಪದವನರಿದು ಆ ಗುರುವಿನಾ ಮನದ ಮತಿಯ ಬೆಳಗುವ ನಿರ್ಮಳಾಂಗನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಏನಯ್ಯಾ, ಏನಯ್ಯಾ! ಮಕ್ಕಳಿಗೆ ಜನಕರು ಕಾಡುವರೊ? ನಾನು ಗುರುಸ್ಥಲಕ್ಕೆ ಯೋಗ್ಯನಲ್ಲ, ಲಿಂಗಸ್ಥಲಕ್ಕೆ ಯೋಗ್ಯನಲ್ಲ, ಜಂಗಮಸ್ಥಲಕ್ಕೆ ಯೋಗ್ಯನಲ್ಲ, ನಾ ನಿಮ್ಮ ರಾಜಾಂಗಣದ ಕೂಲಿಕಾರ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಏಳೆಂಟು ಠಾವಿನ ಮಠವ ಶುದ್ಧವ ಮಾಡಿ ಧಾರುಣಿಯ ಸುದ್ದಿಯನು ಹದುಳಮಾಡಿ ಆರೈದು ಸಕಲ ನಿಷ್ಕಲದೊಳಗೆ ವೇದ್ಯ ಗೊಟ್ಟಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಏಕೋದೇವಾಯೆಂದು ಮನೆಮನೆದಪ್ಪದೆ ಗಿರಿಯ ತಡಿಯ ಕಡಲ ಮುಡಿಯ ಜಡೆಯನೆಂಬರು. ಅಯ್ಯಾ, ಎಂದಡಾನು ನಗುತ್ತಲಿರ್ದೆ, ಆ ಆಧಾರದಲ್ಲಿ ರೂಪುಯೆಂಟು ಇಲ್ಲದಂದು ಹೆಸರು ನಿನಗೇನು ಹೇಳಾ? ಕಪಿಲಸಿದ್ಧಮಲ್ಲಿಕಾರ್ಜುನ ನೀನು ಆಮುಖಶೂನ್ಯ ಕಾಣಾ
--------------
ಸಿದ್ಧರಾಮೇಶ್ವರ
ಏನೋ ಏನೋ ಗಂಡಾ, ನಿಮ್ಮ ತಂದೆ ಬಂದೈದಾನೆ; ನಾನೇನುವನರಿಯೆನೈ. ನೀನೆ ನಿಮ್ಮ ತಂದೆಯ ಸಂತೈಸಿ, ಎನಗವರ ಕರುಣವ ಪಾಲಿಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಏನೆಂಬೆ ಏನೆಂಬೆ ಕೊಟ್ಟ ದೇವರಂದವ ! ಮನದಲ್ಲಿ ಘನಲಿಂಗವಾಯಿತ್ತು, ಧ್ಯಾನದಲ್ಲಿ ಭಾವಲಿಂಗವಾಯಿತ್ತು, ನೇತ್ರದಲ್ಲಿ ಶಿವಲಿಂಗವಾಯಿತ್ತು, ಹೃದಯದಲ್ಲಿ ಮಹಾಲಿಂಗವಾಯಿತ್ತು, ಎನ್ನ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಅಳವಟ್ಟಿತ್ತು. ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ಎಲ್ಲ ಕಡೆಯಲ್ಲಿ ಪರಾತ್ಪರ ವಸ್ತುವಾಗಿ, ಚೆನ್ನಬಸವಣ್ಣನಾಗಿ, ನಾನು ಮರೆದೆನಯ್ಯಾ ಎನ್ನ ನಾಮವ, ನೋಡಯ್ಯಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಏಕೆನ್ನ ಸಿರಿಗಳು ಕೆರೆಗಳು ಮರಗಳು ಫಲಗಳು ಬೀಯದ ಮುನ್ನ ಒಯ್ಯನೆ ಮಾಡಿ ಭೋ, ಹಾಲುಳ್ಳಲ್ಲಿ ಹಬ್ಬವನು. ಎನ್ನ ಭಕ್ತಿ-ಮುಕ್ತಿ ಸವೆಯದ ಮುನ್ನ ಲಿಂಗವೆ ಜಂಗಮವೆಂದು ಮಾಡಿ ಭೋ. ಸ್ವಾತಂತ್ರಯ್ಯ ತನ್ನನೀವ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಏನೆಂದೆನಲ್ಲದ ಅಖಂಡ ಪರಿಪೂರ್ಣ ಪರಮಾನಂದ ಪರಬ್ರಹ್ಮವು ತಾನೆಂಬ ಅರಿವಿನ ಬಲದ ಅಹಂಕಾರವಿಲ್ಲವಾಗಿ, ಅದ್ವೆ ತಿಯಲ್ಲ; ಉಭಯವಿಟ್ಟರಸುವ ಗಜೆಬಜೆಯಲ್ಲಿ ಸಿಲುಕನಾಗಿ, ದ್ವೈತಿಯಲ್ಲಿ. ಇಂತೀ ದ್ವೆ ೈತಾದ್ವೆ ೈತವೆಂಬ ಉಭಯನಾಮ ನಷ್ಟವಾದ ಅಭೇದ್ಯಮಹಿಮನ ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಶರಣರೆ ಬಲ್ಲರು
--------------
ಸಿದ್ಧರಾಮೇಶ್ವರ
ಏನೆಂದೆನಿಸದ ವಸ್ತು, ಅಪ್ರಮಾಣಮೂರ್ತಿ ಬಸವ ಎಂಬ ಪದಕ್ಕೆ ನಿಂದಿತ್ತಯ್ಯಾ ನಿಮ್ಮ ಪ್ರಸಾದ, ಅರಿಯಬಾರದ ಬಸವನೆಂಬ ವಸ್ತುವನರುಹಿತ್ತಯ್ಯಾ ನಿಮ್ಮ ಪ್ರಸಾದ. ಬಸವನೆಂಬ ನಿಜವ ನಿಮ್ಮಲ್ಲಿ ನಿಲಿಸಿತ್ತಯ್ಯಾ ನಿಮ್ಮ ಪ್ರಸಾದ. ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಅರ್ಪಿತ ಅನರ್ಪಿತವಾಯಿತ್ತಯ್ಯಾ, ನಿಮ್ಮ ಬಸವವಿಡಿದು.
--------------
ಸಿದ್ಧರಾಮೇಶ್ವರ
ಏಕಪಂಕ್ತಿಯಲ್ಲಿ ತಾ ಭೋಜನಭೇದ ಮಾಡಬಾರದು. ಭೋಜನಭೇದ ಮಾಡಿದಡೆಯು ತಾನೆಣಿಸಬಾರದು. ತಾನೆಣಿಸಿದಲ್ಲಿಯೂ ಅನ್ಯರಿಗೆ ್ಕಳಿಯಬಾರದು. ಅನ್ಯರಿಗೆ ತಿಳಿದಡೆಯು ಮನೆ ಬೇರಾಗಬಾರದು. ಮನೆ ಬೇರಾದಡೆಯು ಮನ ಬೇರಾಗಬಾರದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಏರಿಯನೇರಿ ಬರುವಲ್ಲಿ ಮೂವತ್ತಾರು ಮಂಟಪದ ಮಣಿಯ ತುಂಬಿ ಕೇರಿ ಕೇರಿಯ ತುದಿಯ ತಿರುಗಲು, ಸುಂಕಿಗರಿನ್ನೂರ ಹದಿನಾರು ಮಂದಿ ಮೂವತ್ತಾರು ಮಂಟಪದಲ್ಲಡಗಿದರಯ್ಯಾ. ಏರಿ ಬರುವ ಪುರುಷ ಮೂವರು ತಳವಾರರ ಕೂಡಿಕೊಂಡು, ಮೂವತ್ತಾರು ಮಂಟಪದಲ್ಲಿ ಅಡಗಿದ ಇನ್ನೂರ ಹದಿನಾರು ಸುಂಕಿಗರನರಸಲು ಮೂವರು ತಳವಾರರು ತನ್ನ ನುಂಗಿದರಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಏಳು ಸೀಮೆಯನು ದಾಟಿಪ್ಪಳವ್ಯಯದ ಸೋಮ ಕುಂಭವನು ಹೊತ್ತು ನಿತ್ಯತ್ವದಾ ಸ್ವಾನುಭೂತೈಕ್ಯದಲಿ ತಾನು ಸಂಗಮವಾಗೆ ಸೋಮ ಕೊಡ[ನೊಡೆ]ದುದೈ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ