ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಧವಳ ಮಂಟಪದೊಳಗೆ ಅವನಿಪ್ಪ ಎಮ್ಮ ನಲ್ಲ. ಅವನ ಕೃಪೆಯಿಂ ಮಠವು ಪ್ರಬಲವಾಗೆ ಕರುಣಾಕರನೆ ಕಪಿಲಸಿದ್ಧಮಲ್ಲೇಶ್ವರನ ನೆನಹಿನ ಮಠಕಾನು ನಿತ್ಯವಕ್ಕೆ
--------------
ಸಿದ್ಧರಾಮೇಶ್ವರ
ಧರೆಯಗಲದ ಜಲವು ಕರಣೇಂದ್ರಿಯಗುಣವು ತರತರದ ತೇಜದ ತೆರೆಯು ಬಂದು ಪರಿಭವದ ತಡಿಗೆ ಹಾಕದ ಮುನ್ನ ಮೃಡನೆ ನೀ ಕೈಗುಡಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಧರೆಯಗಲದೊಳಗೊಂದು ಹಿರಿದಪ್ಪ ಲೋಭವು ತನುವೆಂಬುದನು ತಾನು ಲೀಯ್ಯಮಾಡಿ ಮನ ಮಗ್ನದೊಳಗೆ ನೆಲೆಗೊಂಡನೆಂದಡೆ ನೆಲಗೊಳ್ಳಲೀಯ್ಯದೆ ತನ್ನ ಮಾಯವ ಮಾಡಿತ್ತು ಕರುಣಾಕರನೆ ಕಳೆದು ಕಾಯಯ್ಯ ತಂದೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಧರೆ ದೆಸೆವಳಯವೆಲ್ಲ ತನಗಾದಡೂ ನಿಲ್ಲಳು. ಎನಿತು ತ್ರಿಭುವನ ರಾಜ್ಯ ಪದಂಗಳು ತನಗಾದಡೂ ನಿಲ್ಲಳು. ಅನಿತರೊಳು ತೃಪ್ತಿವಡೆಯಳು. ಈ ಆಸೆಯೆಂಬವಳಿಂದವೆ ನಿಮ್ಮಡೆಗಾಣದಿಪ್ಪೆನು. ಈ ಆಸೆಯೆಂಬ ಪಾತಕಿಯನೆಂದಿಂಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದಿಪ್ಪೆನೊ, ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಧರೆ ಇಲ್ಲದೆ ಬೆಳೆಯಬಹುದೆ ಧಾನ್ಯವ ? ಮಳೆ ಇಲ್ಲದೆ ನೋಡಬಹುದೆ ಬೆಳೆಗಳ ? ಒಂದು ವಸ್ತುವಿಗಾದಡೂ ದ್ವಂದ್ವವೆ ಬೇಕು. ನಮ್ಮ ಕಪಿಲಸಿದ್ಧಮಲ್ಲನ ನೋಡುವಡೆ ಲಿಂಗಪೂಜೆ ಜಂಗಮದಾಸೋಹವೆ ಬೇಕು.
--------------
ಸಿದ್ಧರಾಮೇಶ್ವರ
ಧನಕ್ಕೆ ಮನಕ್ಕೆ ಕಾಮಿಸರು ಎನ್ನಯ್ಯಾ, ನಿಮ್ಮ ನೆನೆದು ನಿಮ್ಮ ನೋಡಿ ನಿಮ್ಮ ತೋರಿ ನಿಮ್ಮ ಚಿತ್ತದಲ್ಲಿರಿಸಾ. ಸಲೆ ನಿಮ್ಮ ಬೇಡುವ ಮನ, ದಾಸಿಮನ ಮಾಡರೆನ್ನ [ಕಪಿಲಸಿದ್ಧ] ಮಲ್ಲಿಕಾರ್ಜುನಯ್ಯ ತಂದೆ.
--------------
ಸಿದ್ಧರಾಮೇಶ್ವರ
ಧಾತುವ ಮೀರಿದ್ದ ಬಣ್ಣವ, ಅಜಾತ ನಿನ್ನ ಕೂಟವ, ಆರಿಗಯ್ಯಾ ಭೇದಿಸಲಕ್ಕು? ಅಭೇದ್ಯ ಕಾರಣ ಶಿವನೇ, ಆ ಅಕ್ಷರದಲ್ಲಿ ಅಮೋದದಾನತದ ಭೇದವ ಆ ಭೇದವ ಭೇದಿಸಲಾಹುದೆ ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಧರಿಸಿದ ಲಿಂಗವ ವರಿಸಬಲ್ಲಡೆ ಗಿರಿಜೆಯ ಅರಸನೆಂಬೆ. ಸ್ಥಾವರವ ಪೂಜಿಸಿದವನ ಉಮಾವರನೆಂಬವನ ಗಾವಿಲನೆಂಬೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಧ್ಯೇಯಕ್ಕೆ ಅ್ಕರೂಪು ದಾಯನುಂಗಿಪ್ಪುದೀ ತಾನೊಂದು ರೂಪಾಗಿ ದಾಯವಿಲ್ಲದೆ ಇಪ್ಪುದು. ಅದು ನಿಹಿತ ತಾನು ದಾಯವು ವಾಯವು ಕಾಯಕ್ಕೆ ಅತಿ ಬ್ರಹ್ಮವಾಯಂದರಿಯಲ್ಕೆ ಸುಲಭ ತಾನೆ ಕಾಳದಲಿ ಧವಳತೆಯ ಸಾನಂದದನ್ವತೆಯ ಸಾಯದೆ ಸತ್ತಾದ ಕಂಡನಿದನು. ಕಂಡು ಬ್ರಹ್ಮಾಂಡವನು ಉಂಡನದನನ್ವಯದ ಮಂಡಲಕ್ಕದು ಕರ ಚೋದ್ಯ. ತಾನು ಕಂಡು ಕಾಣದೆ ಈಗ ಉಂಡು ಉಣ್ಣದೆ ಈಗ ಕಂಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಧರ್ಮವ ಧರಿಸಿದ ಬಳಿಕ ಲಿಂಗಾರ್ಚನೆಯ ಮಾಡಿ ಸಾಯಬಹುದಯ್ಯಾ. ಸತ್ತಡೆ ಸಾಯಬಹುದು, ಹೊತ್ತಿಗೊಮ್ಮೆ ಸೂರ್ಯನಂತೆ ಬರಬಾರದಯ್ಯಾ. ಬಂದಡೆ ಬರಬಹುದು, ತನ್ನಾಯತವ ಮರೆದಿಬಾರದಯ್ಯಾ, ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ