ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಂದ್ರಿಯನಿಗ್ರಹ ಮಾಡಿದಡೇನಯ್ಯಾ, ಚಂದ್ರಧಾರಿಯಾಗಬಲ್ಲನೆ? ಇಂದ್ರಿಯ ಕಟ್ಟಿದ ಕುದುರೆ ಇಂದ್ರನ ಉಚ್ಚೆ ೈಶ್ರವವಹುದೆ ಅಯ್ಯಾ? ಇಂ್ರಯಂಗಳೆಂಬುದು ಮಾಯಾಜಾಲವು ತಾನೆ. `ನ ಸತೀ' ಎಂಬ ಶ್ರುತಿಯದು ಪ್ರಸಿದ್ಧ. ಂಗವೆಂಬುದ ತಿಳಿಯಬಲ್ಲಾತನೆ ಜಗದ್ವಂದ್ಯ ಜಂಗಮವೆಂಬೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಇಂದಿಗೆ ನಿಮಿಷಕ್ಕೆ ಬರ್ದುಂಕದೆ ಹೋಗೆಯ ಅನಂತಕಾಲ ಬರ್ದುಂಕುಗೆಯ; ಬರ್ದುಂಕಿದಡೆ ಮನ ವಿಚ್ಛಂದವಾಗದೊಂದೆಯಂದದ್ಲಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇಕ್ಷುವಿನ ಮನದ್ಲಪ್ಪ ಕುಟಿಲ ಕೇಸರಿಯ ರೂಪಕ್ಕಂಜುವರಲ್ಲದೆ, ರಾಗ ರಂಜನೆಗಂಜುವರೇನಯ್ಯಾ? ಸ್ಥಲದ್ಲಪ್ಪ ವೇಷಧಾರಿಯ ರೂಪಕ್ಕಂಜುವರಲ್ಲದೆ, ವಿಷಯಗುಣ-ರಂಜನೆಗಂಜುವರೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಶರಣರೆಂಬ ಮದದಾನೆಗಳು?
--------------
ಸಿದ್ಧರಾಮೇಶ್ವರ
ಇಂತಪ್ಪ ಘನತರಂಗವ ಕರಸ್ಥಲದಲ್ಲಿ ಬಿಜಯಂಗೆಯ್ಸಿಕೊಂಡು ಗುರುತೋರಿದ ಸದ್ಭಕ್ತಿಕ್ರೀಯಲ್ಲಿರದೆ, ಪಾದೋದಕ ಪ್ರಸಾದವ ಕೊಳ್ಳದೆ, ಯೋಗವೆಂದು ಅದ್ವೆ ೈತವೆಂದು ಭಂಡನೆ ಬಳಸುತಿಪ್ಪ ಮಿಟ್ಟೆಯ ಭಂಡರನೇನೆಂಬೆನೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇಂದ್ರ ನೋಡುವಡೆ ಭಗದೇಹಿ; ಚಂದ್ರ ನೋಡುವಡೆ ಗುರುಪತ್ನೀಗಮನಿ; ಉಪೇಂದ್ರ ನೋಡುವಡೆ ಬಾರದ ಭವದಲ್ಲಿ ಬಂದ ಅವತಾರಿ; ಬ್ರಹ್ಮ ನೋಡುವಡೆ ಸುಪುತ್ರೀಪತಿ ಮುನಿಗಣ ನೋಡುವಡೆ ಕುಲಹೀನರು; ಗಣಪತಿ ನೋಡುವಡೆ ಗಜಾನನ; ವೀರಭದ್ರ ನೋಡುವಡೆ ಮಹತ್ಪ್ರಳಯಾಗ್ನಿ ಸಮಕ್ರೋದ್ಥಿ; ಷಣ್ಮುಖ ನೋಡುವಡೆ ತಾರಕಧ್ವಂಸಿ. ಇವರೆಲ್ಲರು ಎಮ್ಮ ಪೂಜೆಗೆ ಬಾರರು. ನೀ ನೋಡುವಡೆ ಶ್ಮಶಾನವಾಸಿ, ರುಂಡಮಾಲಾದ್ಯಲಂಕಾರ; ನಿನ್ನ ವಾಹನ ಚಿದಂಗ ಆದಿವೃಷಭ. ನಿರೂಪಿಸಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇದ್ದೆಸೆಯನರಿದಾತ ತತ್ವವಾದನು ತನ್ನ ಸಪ್ತ ಧಾತುವನು ಗುರುವಿಗಿತ್ತು. ಮತ್ತೆ ಕಳೆಯೆಂದಡೆ ತತ್ವಪದ ಮೀರಿದನು ಸತ್ಯಶುದ್ಧನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನು ಹೊಗಳುವೆನಯ್ಯಾ, ಲಿಂಗದ ಕುಲಾವಳಿಯನ್ನೆತ್ತಿ ಇನ್ನು ಹೊಗಳುವೆನಯ್ಯಾ, ಜಂಗಮದ ಜ್ಞಾನವ ಕಂಡು; ಇನ್ನು ಹೊಗಳುವೆನಯ್ಯಾ, ಚೆನ್ನಬಸವಣ್ಣನೆಂಬ ಪರಾತ್ಪರ ಗುರುಮೂರ್ತಿಯ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಇಂತು ಹಲವು ಪರಿಯ ನಿಶ್ಚಿಂತರಪ್ಪರೈ, ಚಿಂತೆಗೆಟ್ಟಪ್ಪರಿಹಪರ ಲೋಕವಾ. ನಿಶ್ಚಿಂತ ಕಪಿಲಸಿದ್ಧಮಲ್ಲಿಕಾರ್ಜುನನ ಸಚ್ಚಿದಾನಂದಮಯರಪ್ಪರಯ್ಯ.
--------------
ಸಿದ್ಧರಾಮೇಶ್ವರ
ಇಂದೆನ್ನ ಮನದೊಡೆಯ ಬಂದ ತಾ ಕರಸ್ಥಳಕೆ, ಹಿಂದು ಮುಂದಿಲ್ಲದ ಪದವನಿತ್ತ. ಗಂಧವಾಸನೆ ಚಂದವೊಂದಾದ ಬಸವನ ಬಂಧುವಾದೆನು ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇಹಪರದ ಪರಿಯನು ಅಯ್ಯಾ ನೀನೇ ಬಲ್ಲೆ. ನಿನ್ನ ಶರಣನು ಬಲ್ಲ ಪ್ರಭುರಾಯನು. ಆತನನುಮತದಿಂ ಮಾಯೆಯ ಗೆಲುವ ಪರಿಯ ನೀನೆನಗೆ ಕಲಿಸುವುದು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇದಿರಿಂಗೆ ಕಿಂಕರನಾಗಿ ತನ್ನ ದೇಹಗುಣವಡಗಬಲ್ಲಡೆ, ಅಲ್ಲಿರ್ಪ ಆ ಮಹಾಮಹಿಮನ ನಿಜವ ಕೂಡಿ ಗಡಣದಲ್ಲಿರ್ಪಾತ್ಮನ ಕೂಡೆ ಆಡುತಿಪ್ಪನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನದೇವರ ದೇವನು ಭಕ್ತದೇಹಿಕನಾಗಿ.
--------------
ಸಿದ್ಧರಾಮೇಶ್ವರ
ಇನ್ನು ಜನಕವು ಇಲ್ಲ ಮುನ್ನವೆ ಸಂದಳಿದೆ ಕಳುಹಿದಂತೆ ಉನ್ನತೋನ್ನತನಾದೆ ಚೆನ್ನಬಸವಣ್ಣನ ಕರುಣದಿಂದೆ ನಿನ್ನ ರೂಪಾದೆ ಇನ್ನೆನಗೆ ಅರಿವುವುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಇಂತು ನಿನ್ನಯ ಭವದ ಚಿಂತೆಗೆಟ್ಟಿತು ಬ್ರಹ್ಮ ನಿಶ್ಚಿಂತನಾದನೈ, ಸಕಲದ ವಸ್ತು ಹಲವನು ಜರಿದು ತತ್ವ ಮೂವತ್ತಾರ ವ್ಯರ್ಥವೆಂದೆ ಕಳೆದು, ಸುಚಿತ್ತದಿಂದಾ ಮತ್ತೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ತತ್ವ ತುರಿಯದೊಳಗೆ ಲೀಯವಾದೆ.
--------------
ಸಿದ್ಧರಾಮೇಶ್ವರ
ಇಂದ್ರಿಯ ಕಟ್ಟಿದ ದೇಹವು ಚಂದ್ರನ ಲಕ್ಷಣ ಧರಿಸಿತ್ತು ನೋಡಾ. ಚಂದ್ರನ ಲಕ್ಷಣವದು ಇಂದ್ರಪದ[ವನೀ]ಡಾಡಿತ್ತು ನೋಡಾ. ಇಂದ್ರಪದವದು ಸಾಂದ್ರವಾಗಿ ಭೋಗಿಸುವುದಕ್ಕೆ ಮೈಗೊಟ್ಟಿತ್ತು ನೋಡಾ. ಸಾಂದ್ರವಾದುದಕ್ಕೆ ಮಹೇಂದ್ರಜಾಲವನೊಡ್ಡಿ, ಕಪಿಲಸಿದ್ಧಮಲ್ಲೇಂದ್ರನ ಇಂದ್ರಿಯಂಗಳಲ್ಲಿ ತಂದಿಟ್ಟಿತ್ತು ನೋಡಾ, ಬಾಚರಸಯ್ಯಾ.
--------------
ಸಿದ್ಧರಾಮೇಶ್ವರ
ಇಲ್ಲದ ಮಾಯೆಯ ಇಲ್ಲೆನಿಸುವುದದೆ ಅಲ್ಲನ ಅರುಹು ಕಂಡಯ್ಯಾ. ಇಲ್ಲದ ಮಾಯೆ ಅಹುದೊ ಅಲ್ಲವೊ ಎಂಬುಭಯ ಭಾವ ಜಲ್ಲರಿಯ ಕಳಂಕು ಕಂಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಇಹತ್ರ ಪರತ್ರದಲ್ಲಿ ಎರಡರಲ್ಲಿ ಇಪ್ಪುದು ಗೀತವು ನೋಡಯ್ಯಾ. ಇತ್ತ ಬಾರಾ, ಸಾರಾ ಎಂಬುದು ಗೀತವು ನೋಡಯ್ಯಾ. ಗೀತವನೂ ಗಿರಿಜೆಯನೂ ಬಾಯೆಂದು ಕೈವೀಸುವನೈ ಎನ್ನ ಕಪಿಲಸಿದ್ಧಮಲ್ಲೇಶ್ವರದೇವ, ಓ! ಅಯ್ಯಾ!
--------------
ಸಿದ್ಧರಾಮೇಶ್ವರ
ಇಹಲೋಕ ಪರಲೋಕವೆಂಬ ಸಂದಳಿಯಿತ್ತಯ್ಯಾ. ಗುರುವಿನ ಹಸ್ತದಲ್ಲಿ ಸತ್ತು, ಪಂಚಾಕ್ಷರಿಯಿಂದೆತ್ತಿದ ಕಾರಣದಲ್ಲಿ ; ನಿತ್ಯವೂ ಲಿಂಗಾರ್ಚನೆಯ ಮಾಡುವ ಕಾರಣದಲ್ಲಿ; ನಿತ್ಯವೂ ವಿಭೂತಿ ರುದ್ರಾಕ್ಷಿಯ ಧಾರಣ ಮಾಡುವ ಕಾರಣದಲ್ಲಿ; ಇಹಲೋಕವೆಂದೇನು, ಪರಲೋಕವೆಂದೇನು, ಹಂಗು ಹರಿದು ನಾನು ನೀನಾದ ಬಳಿಕ? ಎಲೆ ಅಯ್ಯಾ, ಭಕ್ತರ ಸವಾಂಗ ಲಿಂಗತನು; ಭಕ್ತರಿಪ್ಪ ಲೋಕವೆ ರುದ್ರಲೋಕ. ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿನ್ನ ಹಸ್ತವ ಮಸ್ತಕದಲ್ಲಿಟ್ಟಡಯಿತ್ತು! .
--------------
ಸಿದ್ಧರಾಮೇಶ್ವರ
ಇಲ್ಲಿರುವ ಕೋಂಟೆಗಳೆಲ್ಲ ಅಲ್ಲಿಹ ರುದ್ರಗಣಂಗಳ ಮಂದಿರವಯ್ಯಾ. ಇಲ್ಲಿರುವ ಗುಡ್ಡರೆಲ್ಲ ಅಲ್ಲಿಹ ಮಹಾಗಣಂಗಳಯ್ಯಾ. ಇಲ್ಲಿರುವ ಭಾಮಿನಿಯರೆಲ್ಲ ಅಲ್ಲಿಹ ರುದ್ರಕನ್ನಿಕೆಯರಯ್ಯಾ. ಇಲ್ಲಿರುವ ತಟಾಕಂಗಳೆಲ್ಲ ಅಲ್ಲಿಹ ದೇವಗಂಗೆಯಯ್ಯಾ. ಇಲ್ಲಿರುವ ಕಪಿಲಸಿದ್ಧಮಲ್ಲಿಕಾರ್ಜುನ ಅಲ್ಲಿಹ ಪಂಚಮುಖ, ಶತಮುಖ, ಸಹಸ್ರಮುಖ, ಅನಂತಮುಖ ಪಾರ್ವತೀಪ್ರಿಯ ಮಹಾದೇವ ನೋಡಾ, ಕೇದಾರ ಗುರುದೇವಾ.
--------------
ಸಿದ್ಧರಾಮೇಶ್ವರ
ಇಂತೀ ಭಕ್ತಸ್ಥಲದ ವರ್ಮವನು ಲೋಕಕ್ಕೆ ನಿಶ್ಚಿಂತವ ಮಾಡಿ ತೋರಿದ, ತನ್ನ ಪದದುನ್ನತವ ಏಕೈಕಸದ್ಭಾವರಿಗಿತ್ತ, ಎನ್ನ ಗುರು ಚೆನ್ನಬಸವಣ್ಣನು. ಬಸವಣ್ಣ ಚೆನ್ನಬಸವಣ್ಣನೆಂಬ ಮಹಾಸಮುದ್ರದೊಳಗೆ ಹರುಷಿತನಾದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಇಪ್ಪತ್ತುನಾಲ್ವರು ಚವುಕವ ಹೊಕ್ಕಾರು. ಆ ಚವುಕ ನಾಗರಕಟ್ಟೆಗೆ ಒಲೆದೀತು. ಆ ನಾಗರಕಟ್ಟೆಯಲ್ಲಿ ಇಪ್ಪತ್ತು ನಾಲ್ವರು ದುಃಖಪಟ್ಟಾರು. ನುಚ್ಚಿನ ನುಚ್ಚು ಕೊನೆನುಚ್ಚು ಮೂಗಂಡುಗವಾದಾವು. ಚಿಟ್ಟೆಯ ಹುಳು ಬಾಣಸಕ್ಕೆ ಬಂದಾವು. ಲೋಕಕ್ಕೆ ಕೆಂಡದ ಮಳೆ ಸುರಿದಾವು. ಹದಿನೆಂಟು ಜಾತಿಯೆಲ್ಲ ಏಕವರ್ಣವಾದೀತು. ಉತ್ತರ ದಕ್ಷಿಣ ಪೂರ್ವ ಪಶ್ಚಿಮದ ರಾಯರುಗಳೆಲ್ಲಾ ಗುಡ್ಡರುಗಳಾಗಿ ನಡೆದಾರು. ಕಪಿಲಸಿದ್ಧಮಲ್ಲಿಕಾರ್ಜುನದೇವರು ಲಕ್ಷದ ಮೇಲೆ ತೊಂಬತ್ತಾರುಸಾವಿರ ಲಿಂಗವ ಕಲಿಯಾಯಿತು ಕಲಿಯಾಯಿತು ಕಯುಗದೊಳಗೊಂದು ಸೋಜಿಗವ ಕಂಡೆನು ಸತ್ಯ ಸತ್ತೀತು, ಸಾತ್ವಿಕವಡಗೀತು, ಠಕ್ಕು ಠವಳಿ ಮುಂಡು ಮುರುಹು ಗನ್ನ ಘಾತಕ ಹದುರು ಚದುರು ಭೂಮಂಡಲವೆಲ್ಲಾ ಆಡೀತು. ಆಗಳೆ ಭಕ್ತರು, ಆಗಳೆ ಭವಿಗಳು ಅಂಗೈ ಮೇಗೈಯಾದರಲ್ಲಾ. ನಿಜಗುರು ನಿಶ್ಚಿಂತ ಕಪಿಲಸಿದ್ಧಮಲ್ಲಿಕಾರ್ಜುನದೇವಯಾ
--------------
ಸಿದ್ಧರಾಮೇಶ್ವರ
ಇವಳಾವಾವ ವಂಚಕದಲಿ ಹುಟ್ಟಿ ಬೆಳೆದವನೆಂದರಿಯೆ. ನೋಡಯ್ಯಾ, ಇಂತೀ ಲೋಕವ ಹೊರಿಸೆಂದು ತಲೆವಗ್ಗವಿಕ್ಕಿಕೊಟ್ಟಾ, ಕಪಿಲಸಿದ್ಧಮಲ್ಲಿನಾಥಯ್ಯನವ್ಯಯ!
--------------
ಸಿದ್ಧರಾಮೇಶ್ವರ
ಇಂದ್ರಾದಿ ದೇವತಾ ಸಂಕುಳಕ್ಕೆ ಅಂತಪ್ಪ ಪದವನಿತ್ತಾತ ಬಸವಣ್ಣನಯ್ಯಾ. ಬ್ರಹ್ಮ-ವಿಷ್ಣು ಮೊದಲಾದ ದೇವತಾಮೊತ್ತಕ್ಕೆ ಅಂತಪ್ಪ ಪದವನಿತ್ತಾತ ಬಸವಣ್ಣನಯ್ಯಾ. ಶಿವಲಿಂಗಭಕ್ತರಿಗೆ ಚರಲಿಂಗಧಾರಣೆಯ ಪರಿಯಾಯಂದಿದಲೊರೆದಾತ ಗುರು. ಇಹಲೋಕ ಪರಲೋಕದನುಮಿಷದ ಸುದ್ದಿಯನರುಹಿದಾತ ಗುರು ಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಇಹಪರವೆಂಬ ಇದ್ದೆಸೆಯನರಿತು ಇದ್ದೆಸೆಯಾದ ಗುರುಚರವಿಡಿದು ಇಹಪರವೆಂದರಿಯ. ಭಕ್ತನ ತನುವೆ ಶಿವನಿಪ್ಪಾಲಯವಾಗಿ ಇಹಲೋಕವೆ ಪರಲೋಕ; ಪರಲೋಕವೆ ಇಹಲೋಕ ನಿನ್ನ ಭಕ್ತಂಗೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇಂತಪ್ಪ ಸತ್ಯಾರ್ಥವನರಿದು ಸರ್ವಪ್ರಪಂಚ ಮರದು ಹಾಲುಳ್ಳಲ್ಲಿ ಹಬ್ಬವ ಮಾಡಿ, ಗಾಳಿ ಉಳ್ಳಲ್ಲಿ ತೂರಿಕೊಳ್ಳಿ! ಬಳಿಕ ಅರಸಿದರುಂಟೆ ಪರಮಸುಖವು ನಿಜಗುರು ಸ್ವತಂತ್ರ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ? ಹರುಗೋಲ ಪಡೆದಲ್ಲಿ ತೊರೆಯ ದಾಂಟಿಕೊಳ್ಳಿರಣ್ಣಾ.
--------------
ಸಿದ್ಧರಾಮೇಶ್ವರ
ಇಷ್ಟಲಿಂಗ ಪೂಜೆಯದು ಅಷ್ಟೆ ೈಶ್ವರ್ಯಪ್ರದವಾಯಿತ್ತು. ಪ್ರಾಣಲಿಂಗ ಪೂಜೆಯದು ಅಖಂಡಚಿದೈಶ್ವರ್ಯಪ್ರದವಾಯಿತ್ತು. ಭಾವಂಗಪೂಜೆಯದು ನಿರ್ಭಾವ ನಿಜಾನಂದ ವಸ್ತುಸ್ವರೂಪವಾಯಿತ್ತು, ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...