ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಈಗರಸುವ ನುಡಿವಿರಹಿತ ಂಗವ ನಿಲುಕಡೆ ಬೇರೆ ಉಂಟೆ? ಮುಕುಳದಲ್ಲಿ ಪರಿಮಳ ತೋರುವ ಕಾಲಕ್ಕೆ ತೋರದಿಪ್ಪುದೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಈರೈದು ಸೀಮೆಯಿಂದಾರಯ್ಯ ಬಂದಾರೆ, ಓರಂತೆ ಅವರುವನು ನೀನೆಂಬೆನು; ಕಾರುಣ್ಯಕರ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಅವರ ದ್ವಾರಕಿಂಕರನಾಗಿಯಾನಿಪ್ಪೆನು.
--------------
ಸಿದ್ಧರಾಮೇಶ್ವರ
ಈ ಆಸೆಯೆಂಬವಳು ನೋಡಾ ಜಲ ಸಮುದ್ರಂಗಳಂ ಕಟ್ಟಿಸುವಳು, ಕ್ಷಣ ಬೇಗ ಮೂಷೆಗಳಂ ಮಾಡಿ ರಸಂಗಳಂ ಪಡೆವಳು. ಈ ಆಸೆಯೆಂಬವಳಿಂದವೆ ನಿಮ್ಮೆಡೆಗಾಣದಿಪ್ಪೆನು. ಈ ಆಸೆಯೆಂಬವಳನೆಂದಿಂಗೆ ನೀಗಿ ಎಂದು ನಿಮ್ಮನೊಡಗೂಡಿ ಬೇರಾಗದೆಂದಿನೊ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಈ ಧರೆ ದೆಸೆವಳೆಯವೆಲ್ಲವು ತನಗಾದಡೆ ಅನಿತರ ನಿಲ್ಲಳು, ಮತ್ತಂ ಬೇಕೆಂದು ಪೊರಯಿಂಕೆ ಕೈದೋರುತಿಪ್ಪುದು. ಈ ಆಸೆಯೆಂಬವಳಿಂದವೆ ನಿಮ್ಮೆಡೆಗಾಣದಿಪ್ಪೆನು. ಈ ಆಸೆಯೆಂಬವಳನೆಂದಿಂಗೆ ನೀಗಿ, ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನೊ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಈ ರಚನೆಯೆಂಬುದು ಇಮ್ಮಡಿ ಮುಮ್ಮಡಿಯಿಂದಲ್ಲದೆ ಒಮ್ಮಡಿಯಿಂದಾಗದು. ಆದಿಯಲ್ಲಿ ಬ್ರಹ್ಮ, ಅನಾದಿಯಲ್ಲಿ ಏನೆಂಬುದಿಲ್ಲ. ಇತ್ತಲದು ಮಾಯಾಶಕ್ತಿಯಿಂ ಮಾಧವನ ಉತ್ಪತ್ತಿ; ಮಾಧವನ ಉತ್ಪತ್ತಿಯಂ ಮೂಲೋಕ ನಿಮಿರಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಈ ಆಶೆಯೆಂಬುವಳು ಒಂದು ನಿಮಿಷಂ ಬರಿರೀಯಳು; ಆರನಾದಡೆಣಿಸುತ್ತಿರ್ಪಳು. ಈ ಆಶೆಯೆಂಬ ಪಾತಕಿಯನೆಂದಿಂಗೆ ನೀಗಿ, ಎಂದು ನಿಮ್ಮೊಡಗೂಡಿ ಬೇರಾಗದಿಪ್ಪೆನೋ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಈ ರಿತುಕಾಲ ಹುಟ್ಟಿ ಮುಟ್ಟಿ ಕೆಡುವಡೆ ಒಳಗಡೆ ಬೆಳೆಯಲೇಕಯ್ಯಾ! ಹೋ! ವಾ! ಹೋ! ಅಯ್ಯಾ! ನೀ ಮುಟ್ಟಿ ಕೆಡುವಡೆ ಒಳಗೆ ಬೆಳೆಯಲೇಕಯ್ಯಾ. ಈ ಬಟ್ಟೆ ಹುಸಿಬಟ್ಟೆ. ಕಪಿಲಸಿದ್ಧಮ್ಲನಾಥಯ್ಯನ ಅಂಜದೆ ನೆನೆಯಿರೊ, ನೆನೆಯಿರೊ! ಹೋ! ವಾ! ಹೋ! ಅಯ್ಯಾ!
--------------
ಸಿದ್ಧರಾಮೇಶ್ವರ