ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತಿಸ್ಥಲದ ವರ್ಮವನು ಲೋಕಕ್ಕೆ ನಿಶ್ಚಿಂತವ ಮಾಡಿ ತೋರಿದ ಬಸವಣ್ಣ. ತನ್ನ ಪದದುನ್ನತವ ಏಕೈಕಸದ್ಭಾವರಿಗಿತ್ತ ಎನ್ನ ಗುರು ಚೆನ್ನಬಸವಣ್ಣನು. ಬಸವ, ಚೆನ್ನಬಸವನೆಂಬ ಮಹಾಸಮುದ್ರದೊಳಗೆ ಹರುಷಿತನಾದೆನೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಭಕ್ತರಿಪ್ಪರು ಮೂಲೋಕದಲ್ಲಿ ; ಮಹೇಶರಿಲ್ಲ ಲೋಕಲೋಕದಲ್ಲಿ ಮಹೇಶರಿಪ್ಪರು ಎಮ್ಮ ಪ್ರಮಥರಲ್ಲಿ ; ಮಹಾಶಾಂತರಿಲ್ಲ ನೋಡಾ, ಕಲಿಕಲ್ಮಿಷದಲ್ಲಿ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಭಕ್ತನಾದುದಕ್ಕೆ ಇದೆ ಚಿಹ್ನವು ನೋಡಾ, ಎಲೆ ದೇವಾ. ಕೈಯಲ್ಲಿರಲು ಮಾಂಸದ ಮುದ್ದೆ, ಬಾಯಲ್ಲಿರಲು ವಾರಾಂಗನೆಯ ತಾಂಬೂಲ, ಮನದಲ್ಲಿರಲು ಕ್ಕ್ರಯ ಭಾವ, ಕೊರಳಲ್ಲಿರಲು ಲಿಂಗ, ದೇಹದಲ್ಲಿರಲು ಲಿಂಗಲಾಂಛನ, ಜಂಗಮವೆಂದು ನಂಬುವುದು ಕಾಣಾ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ಹೆಸರಿಟ್ಟುಕೊಂಬಿರಿ. ಆರು ಪರಿಯಲ್ಲಿ ಆರಾದವನರಿಯಿರಿ. ಭಕ್ತನಾದಡೇಕೆ ಭವದ ಬೇರು? ಮಾಹೇಶ್ವರನಾದಡೇಕೆ ಪ್ರಳಯಕ್ಕೊಳಗಿಹ? ಪ್ರಸಾದಿಯಾದಡೇಕೆ ಇಂದ್ರಿಯವೈದ ಅನಿಗ್ರಹಿಯಾಗಿಹ? ಪ್ರಾಣಲಿಂಗಿಯಾದಡೇಕೆ ಉತ್ಪತ್ತಿ ಸ್ಥಿತಿ ಲಯಕೊಳಗಾಗಿಹ? ಶರಣನಾದಡೇಕೆ ಉಪಬೋಧೆಗೊಳಗಾಗಿಹ? ಐಕ್ಯನಾದಡೇಕೆ ಇಹ-ಪರವನರಿದಿಹ? ಇವೆಲ್ಲ ಠಕ್ಕ, ಇವೆಲ್ಲ ಅಭ್ಯಾಸ! ಕಪಿಲಸಿದ್ಧಮಲ್ಲಿಕಾರ್ಜುನಯ್ಯ, ನಿಮ್ಮ ಷಡುಸ್ಥಲವಭೇದ್ಯ!
--------------
ಸಿದ್ಧರಾಮೇಶ್ವರ
ಭಕ್ತ ಭಕ್ತನ ಕಂಡಲ್ಲಿ ಕೈಮುಗಿವುದೆ ಭಕ್ತಸ್ಥಲ. ಜಂಗಮ ಜಂಗಮವ ಕಂಡಲ್ಲಿ ಶರಣೆಂಬುದೆ ಜಂಗಮಸ್ಥಲ. ಭಕ್ತ ಜಂಗಮ ಎಂದು ಬೇರುಂಟೆ ? ರಸದಂತೆಡ ಭಕ್ತ, ರುಚಿಯಂತೆ ಜಂಗಮ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಭಕ್ತಿಗೆ ಭಕ್ತ ಬಸವಣ್ಣನಯ್ಯಾ. ಮುಕ್ತಿಗೆ ಯುಕ್ತ ಬಸವಣ್ಣನಯ್ಯಾ. ಮುಕ್ತಿಗೆ ಮುಕ್ತ ಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಭಾವ ಬದಲ್ಲಿ ಲಿಂಗವೆನಿಸಿತ್ತು ; ಭಾವ ವಿಭಾವವಾದಲ್ಲಿ ಪಾಷಾಣವೆನಿಸಿತ್ತು; ಭಾವ ನಿರ್ಭಾವವಾದಲ್ಲಿ ಏನೆಂದೆನಿಸದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಭೂಮಿ ಒಂದರೊಳಗೆ ಒಂದು ನಾಮಸಾಮ್ಯ ವೃಕ್ಷ ಹುಟ್ಟಿ ಮೂಲನಾಶವಪ್ಪ ಫಲ ಮೂರು ಸೀಮೆಗೆಟ್ಟಿತು ಬ್ರಹ್ಮಾಂಡ. ಅಪರಾಹ್ನದ ಆದಿಯಲ್ಲಿ ಅಡಗಿದವು ಸಕಲ ಬ್ರಹ್ಮಾಂಡ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಭಸಿತ ರುದ್ರಾಕ್ಷಿಯನು ಧರಿಸಿ, ಸಂಪ್ರೀತಿಯಲ್ಲಿ ಬಸವಾಕ್ಷರತ್ರಯವ ನೆನೆಯುತ್ತಿಪ್ಪ ಶರಣರೇ ಇಹಲೋಕ ಪರಲೋಕ; ಭ್ರಮೆಗೆಟ್ಟು ಇರುತಿಪ್ಪ ಇಹಲೋಕವೇ ರುದ್ರಲೋಕ ತಾನು. ಕರುಣಾಕರ ಕಪಿಲಸಿದ್ಧಮಲ್ಲೇಶ್ವರನ ಶರಣರು ಇರುತಿಪ್ಪುದೇ ರುದ್ರಲೋಕ ತಾನು.
--------------
ಸಿದ್ಧರಾಮೇಶ್ವರ
ಭಕ್ತಿಯಿಲ್ಲದ ಬೇಗೆಯಲ್ಲಿ ಬೆಂದೆನಯ್ಯಾ ತಂದೆ. ನಿತ್ಯವಪ್ಪ ಭಕ್ತಿಪಥವ ಕುಡು ತಂದೆ! ತತ್ತ್ವ ಕಾಮ್ಯಾರ್ಥವನೊಲ್ಲೆನಯ್ಯಾ, ಭಕ್ತಿಯೊಳಗಿರಿಸಯ್ಯಾ. ನಿತ್ಯ ನಿಗಮಗೋಚರ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಭಕ್ತರ ಸಂಗದೊಳಿರಿಸಯ್ಯಾ.
--------------
ಸಿದ್ಧರಾಮೇಶ್ವರ
ಭಕ್ತಿಯ ಬಯಸುವಡೆ ನಿತ್ಯನಿತ್ಯ ನೆನೆಯಾ, ನಿಸ್ತಾರ ನಿಸ್ತಾರವೆಂದು ಮುಂದೆ ಬಂದಾಡೌ ಆತ ಶುದ್ಧದೇವ ಎಲ್ಲರ ಪರಿಯಂತಲ್ಲ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಭೂಮಿ ಒಂದೆಂದಡೆ ಬೆಳೆವ ವೃಕ್ಷ ಹಲವು ತೆರನುಂಟು. ಉದಕ ಒಂದೆಂದಡೆ ಸವಿಸಾರದ ಸಂಪದ ಬೇರುಂಟು. ನಿನ್ನೊಳಗು ನಾನಾದಡೆ ತಾಮಸದ ರಾಗವಿರಾಗವಾಗದು. ಕಪಿಲಸಿದ್ಧಮಲ್ಲಿಕಾರ್ಜುನಂಗವೆಂಬ ಪುರುಷರತಿ ಕೂಟಸ್ಥವಿಲ್ಲ.
--------------
ಸಿದ್ಧರಾಮೇಶ್ವರ
ಭಕ್ತಂಗೆ ಭಕ್ತಿಯೆ ಲಿಂಗಾರ್ಚನೆ; ಮಹೇಶಂಗೆ ಜ್ಞಾನ ವೈರಾಗ್ಯವೆ ಲಿಂಗಾರ್ಚನೆ. ಪ್ರಸಾದಿಗೆ ಸಮದೃಷ್ಟಿಯೆ ಲಿಂಗಾರ್ಚನೆ; ಪ್ರಾಣಲಿಂಗಿಗೆ `ಪಂಚಪ್ರಾಣಾಃ' ಎಂಬುದೆ ಲಿಂಗಾರ್ಚನೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಭಕ್ತನ ಮನ ಹೆಣ್ಣಿನೊಳಗಾದಡೆ, ವಿವಾಹವಾಗಿ ಕೂಡುವುದು. ಭಕ್ತನ ಮನ ಮಣ್ಣಿನೊಳಗಾದಡೆ, ಕೊಂಡು ಆಲಯವ ಮಾಡುವುದು. ಭಕ್ತನ ಮನ ಹೊನ್ನಿನೊಳಗಾದಡೆ, ಬಳ ದೊರಕಿಸುವುದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಭಕ್ತಂಗೆ ಜಂಗಮಂಗೆ ರೂಪದಿಂದ ಭೇದವೊ, ಆಚರಣೆಯಿಂದ ಭೇದವೊ ? ಅಲ್ಲಲ್ಲ. ಭಕ್ತನಾದರೊ, ಮೂರಕ್ಕೆ ಒಳಗು ; ಜಂಗಮವಾದರೊ, ಮೂರಕ್ಕೆ ಹೊರಗು. ಒಳಗಾದವರಿಗೆ ಹೊರಗಾದವರ ಪಾದೋದಕವಲ್ಲದೆ ಒಳಗಾದವರ ಪಾದೋದಕ ಸಲ್ಲದು. ತೆಗೆದುಕೊಂಡವರಿಗೆ ನರಕ ತಪ್ಪದು ; ಕೊಟ್ಟವಂಗೆಯೂ ಭವ ಹಿಂಗದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಭಾವಲಿಂಗದಿಂದ ಇಷ್ಟಲಿಂಗವ ಧ್ಯಾನಿಸಹೋದಡೆ, ಇಷ್ಟಲಿಂಗವೆ ಭಾವಲಿಂಗವಾಯಿತ್ತು. ಭಾವಲಿಂಗದಿಂದ ತ್ರಿವಿಧವನರಿದೆಹೆನೆಂದಡೆ, ಭಾವಲಿಂಗವನೆ ಮಹಾಲಿಂಗವಾಗಿ ಅಳವಡಿಸಿದನು, ಎನ್ನ ಗುರು ಚೆನ್ನಬಸವಣ್ಣನು ಕಾಣಾ, ಕಪಿಲಸಿದ್ಧಮಲ್ಲೇಶಾ.
--------------
ಸಿದ್ಧರಾಮೇಶ್ವರ
ಭಸಿತ ರುದ್ರಾಕ್ಷಿಯ, ಎಸೆವ ಪಂಚಾಕ್ಷರಿಯ, ಅಸಮ ಶ್ರೀಗುರು ಲಿಂಗ ಜಂಗಮದ ನಿಜವ, ಅತಿಶಯದ ಪಾದೋದಕ ಪ್ರಸಾದವನರುಹಿ ಸಲಹಿದಾತನು ಗುರುವು, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಭೂಪ ಗೋಪನ ನೆನೆದಡೆ ಗೋಪನಾಗಬಲ್ಲನೆ? ಅಂದಿನ ಗಣಂಗಳ ಕಂಡು, ಇಂದಿನ ಜೀವಿಗಳು ನೆನೆನೆನೆದು ಧನ್ಯರಾದೆವೆಂಬ ಪರಿಯ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಭ್ರೂಮಧ್ಯದಿಂ ಮೇಲೆ ಒಪ್ಪಿಪ್ಪ ಕನ್ನಿಕೆಯ ನಿನ್ನ ಜ್ಯೋತಿರ್ಮಯದ ಬೆಳಗ ತೋರಾ. ಆ ಬೆಳಗಿನ ಬಳಗಂಗಳು ಶುದ್ಧಸಿದ್ಧ ಪ್ರಸಿದ್ಧವ ಪ್ರವೇಶಿಸಿಪ್ಪವು. ನಿನ್ನಾನಂದಸ್ಥಾನದ್ಲ ಅತಿಶಯವಪ್ಪ ಬೀಜಾಕ್ಷರದ್ವಯಂಗಳುಂಟು. ಅದರ ಮಹಾಪ್ರಭೆಯಲ್ಲಿ ಒಪ್ಪಿಪ್ಪ ಅವ್ಯಯ ವಾಙ್ಮನಕ್ಕಗೋಚರನಾಗಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನೋಡಿಹೆನೆಂಬ ಭರವಸ ಘನ, ತೋರಾ ಎಲೆ ಅವ್ವಾ
--------------
ಸಿದ್ಧರಾಮೇಶ್ವರ
ಭಕ್ತನಾಗಿ ಭಕ್ತಿಯ ಮಾಡುವುದದು ಲೇಸಯ್ಯಾ; ಶಕ್ತಿಯಿಲ್ಲದಿರೆ ತಮ್ಮ ಪಾದಕೃಪೆ ಇಷ್ಟವೆಂಬುದದು ಬಹು ಲೇಸಯ್ಯಾ. ಮಹೇಶನ ಮಲತ್ರಯವಳಿವುದು ದುರ್ಲಭ ಕಂಡಯ್ಯಾ, ಚರಿಸಿ ಚರಿಸಿ ಜಗವನ್ನುದ್ಧರಿಸುವುದು ಬಹು ದುರ್ಲಭ ಕಂಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಭವಿಯೆಂದಡೆ ಲಿಂಗವಿಲ್ಲದವ ಭವಿಯೇ? ಅಲ್ಲಲ್ಲ. ಭವಿಯೆಂದಡೆ ವೇದವೇದಾಂತರವನೋ, ಅಂಗವ ಧರಿಸದವ ಭವಿಯೆ? ಅಲ್ಲಲ್ಲ. ಅಂಗದ ಸ್ಥ್ಕಿಯನರಿದಡೇನಾಯಿತ್ತು? ಗುಣ ್ಕಳಿದು ಂಗವ ಕೊಡುವ ಗುರುವಿಲ್ಲ. ಬಹಿರಂಗದ್ಲ ಂಗವಿರಹಿತ, ಅಂತರಂಗದ್ಲ ಂಗಲೋಲುಪ್ತ. ಹೊಲಬುಳ್ಳವನಾದಡೇನು, ್ಕಳಿಯದವರಿಲ್ಲದನ್ನಕ್ಕ? ಸತ್ಕ್ರಿಯಾಸಾಮರಸ್ಯಕ್ಕೆ ಭವಿಯಲ್ಲದೆ ಅನುಭವಗೋಷಿ*ಗೆ ಭವಿಯೆ? ಅಲ್ಲಲ್ಲ. ಭವಿಯೆಂದಡೆ ಮದ್ಯಪಾನ ಮಾಂಸಭಕ್ಷಣ ಪರಸ್ತ್ರೀಸಂಗ ಪರಧನಚೋರತ್ವ ನಿಜವಸ್ತು ಅಂತರತ್ವವಿದ್ದವನೆ ಭವಿಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಭಕ್ತಿಯುಕ್ತನುಮಲ್ಲ ಮುಕ್ತಿಗ್ರಾಹಕನಲ್ಲ ಪಥದ ವೇದ್ಯನುವಲ್ಲದೆಂತೆಂತೋ? ಕರ್ಮಕಾಯನಲ್ಲ ಕಾಲಾಗ್ನಿಯಲ್ಲ ತನ್ನ್ಲ ತಾನೆ ಆಕಾರಂ ಬೊ ಆಗಮವಾಯವೋನ್ನಮಃ ನಾ ದೇವದೇವ ಲಿಂಗಾಯತ್ತಂ ಬೊ ಸ್ವತಂತ್ರಶೀಲ ಕಪಿಲಸಿದ್ಧಮಲ್ಲಿನಾಥಾ, ಆತನೆ ಅಚ್ಚಶರಣಂ ಬೊ.
--------------
ಸಿದ್ಧರಾಮೇಶ್ವರ
ಭಕ್ತರು ಭಕ್ತಿವಿಡಿದು ಆಚರಿಸಲಿ; ಅವು ಬಲ್ಲೆವಯ್ಯಾ. ಆತನ ಭಕ್ತಿ ನೈಷೆ* ; ಆತ ನಡೆದುದು ಜಗತ್ಪಾವನ; ಆತ ನಡೆಸಿದುದು ಜಗಜ್ಜನನ ನೋಡಾ. ಇದು ಪುಸಿಯಾದಡೆ ಹಲ್ಲುದೋರಿ ಮೂಗ ಕೊಯ್ಯಿ, ಕಪಿಲಸಿದ್ಧಮಲ್ಲಯ್ಯಾ.
--------------
ಸಿದ್ಧರಾಮೇಶ್ವರ
ಭವದ ಬೇರ ಹರಿಯಲ್ಕೆ ಪ್ರಭುವಾಗಿ ಬಂದ; ಮಲತ್ರಯಂಗಳ ಕೆಡಿಸಲ್ಕೆ ಪ್ರಭುವಾಗಿ ಬಂದ; ಅಜ್ಞಾನಿಗಳಿಗೆ ಸುಜ್ಞಾನವ ತೋರಲ್ಕೆ ಪ್ರಭುವಾಗಿ ಬಂದ. ಕಪಿಲಸಿದ್ಧಮಲ್ಲಿಕಾರ್ಜುನಯ್ಯ, ಎನ್ನ ಭವದ ಬೇರ ಹರಿಯಲ್ಕೆ ಪ್ರಭುವಾಗಿ ಬಂದ.
--------------
ಸಿದ್ಧರಾಮೇಶ್ವರ
ಭಾವ ಬಲಿಸಬೇಕಲ್ಲದೆ ವಿಭಾವ ಮಾಡಲುಂಟೆ? ಗುರುಭಕ್ತಿಯಲ್ಲಿ ಭಾವ ಬಲಿದುದೆ ಬ್ರಹ್ಮಜ್ಞಾನ; ಗುರುಭಕ್ತಿಯ್ಲ ಭಾವ ನಿಂದುದೆ ಸಹಜಸ್ಥಿತಿ ಗುರುಭಕ್ತಿ ಮರೆವ ಅರಿವ ಮರೆತುದೆ, ಕಪಿಲಸಿದ್ಧಮಲ್ಲಿಕಾರ್ಜುನದೇವನ ಮಹಾಮನೆ; ಇದು ಸತ್ಯ ಕೇಳಾ ಶಿವತಾಯಿಯೆ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...